Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕರ್ನಾಟಕದ ಅಂತಿಮ ಪಟ್ಟಿ ಪ್ರಕಟ: 1.07 ಕೋಟಿ ಹೆಸರುಗಳಿಗೆ ಕೊಕ್, 6.83 ಲಕ್ಷ ಮತದಾರರ ಸೇರ್ಪಡೆ

By ANU News
October 28, 2026 1 Min Read
0

ಬೆಂಗಳೂರು: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ-2026 ಅನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ ಒಟ್ಟು 4.55 ಕೋಟಿ ಮತದಾರರು ಸ್ಥಾನ ಪಡೆದಿದ್ದಾರೆ.

ಅಂತಿಮ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ 2.29 ಕೋಟಿ ಮಹಿಳಾ ಮತದಾರರು ಹಾಗೂ 2.25 ಕೋಟಿ ಪುರುಷ ಮತದಾರರಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಡಿ ಮನೆಮನೆ ಪರಿಶೀಲನೆ ನಡೆಸಿದ ಬಳಿಕ ಕರಡು ಪಟ್ಟಿಯಿಂದ ಒಟ್ಟು 1.07 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ.

ಸ್ಥಳಾಂತರಗೊಂಡ 65.4 ಲಕ್ಷ ಮತದಾರರು, ಪತ್ತೆಯಾಗದ 19 ಲಕ್ಷ ಮತದಾರರು ಹಾಗೂ ಮೃತಪಟ್ಟ 16.3 ಲಕ್ಷ ಮಂದಿಯ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಲ್ಲದೆ, ಸುಮಾರು 7 ಲಕ್ಷ ನಕಲಿ ಮತದಾರರ ಹೆಸರುಗಳನ್ನೂ ಕೈಬಿಡಲಾಗಿದೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

ಹೊಸ ಮತದಾರರ ಸೇರ್ಪಡೆಗೂ ಅವಕಾಶ ಕಲ್ಪಿಸಲಾಗಿದ್ದು, 18ರಿಂದ 19 ವರ್ಷದೊಳಗಿನ 6.83 ಲಕ್ಷ ಯುವ ಮತದಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ 5.65 ಲಕ್ಷ ವಿಶೇಷ ಚೇತನ ಮತದಾರರ ಹೆಸರೂ ಪಟ್ಟಿಯಲ್ಲಿದೆ.

ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಮತದಾರರ ವಿವರಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Author

ANU News

Follow Me
Other Articles
Previous

ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರಕ್ಕೆ ತಿರುಗೇಟು: ನ. 1ರಿಂದ ಬಿಜೆಪಿ ‘ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ

Next

ಶಿಕ್ಷಕರ ಧ್ವನಿಯ ಗೆಲುವು: ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತೇನೆ ಎಂದ ಪರಿಷತ್’ಗೆ ಆಯ್ಕೆಯಾದ ಎ.ಪಿ. ರಂಗನಾಥ್

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಚುನಾವಣಾ ಆಯೋಗ ಇನ್ನಷ್ಟು ಪಾರದರ್ಶಕವಾಗಿ ಇರಬೇಕು: ಪ್ರಿಯಾಂಕ್ ಖರ್ಗೆ
    • ಬೆಂಗಳೂರಿನಲ್ಲಿ ‘ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ 2026’ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ
    • India International Challenge 2026 Badminton Tournament Kicks Off in Bengaluru
    • Andhra Pradesh on Alert as Cyclone Arnab Approaches; 2,199 Shelters Identified
    • Karnataka Final Voter List Published; 1.07 Crore Names Deleted, 6.83 Lakh New Voters Added
    Copyright 2026 — ANU News. All rights reserved. Blogsy WordPress Theme