Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ವಿ.ಜೆ. ಸಿದ್ದು ನಿರ್ದೇಶನದ ‘ದಯಂಗರಂ’ ಟೀಸರ್ ಬಿಡುಗಡೆ

By ANU News
November 4, 2026 1 Min Read
Comments Off on ವಿ.ಜೆ. ಸಿದ್ದು ನಿರ್ದೇಶನದ ‘ದಯಂಗರಂ’ ಟೀಸರ್ ಬಿಡುಗಡೆ

ಚೆನ್ನೈ: ಜನಪ್ರಿಯ ಯೂಟ್ಯೂಬರ್ ವಿ.ಜೆ. ಸಿದ್ದು ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಚೊಚ್ಚಲ ಸಿನಿಮಾ ‘ದಯಂಗರಂ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ವೆಲ್ಸ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ಇಶಾರಿ ಕೆ. ಗಣೇಶ್ ಚಿತ್ರ ನಿರ್ಮಿಸಿದ್ದಾರೆ. 49 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಸಿದ್ದು ಕುಮಾರ್ ಸಂಗೀತ, ದಿನೇಶ್ ಕೃಷ್ಣನ್ ಛಾಯಾಗ್ರಹಣ, ಪ್ರದೀಪ್ ಇ. ರಾಘವ್ ಸಂಕಲನ ಹಾಗೂ ವಿನೋತ್ ರಾಜ್ ಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಧನುಷ್ ಚಿತ್ರದ ಘೋಷಣಾ ವಿಡಿಯೋ ಬಿಡುಗಡೆ ಮಾಡಿದ್ದರು. ನಿರ್ಮಾಪಕ ಇಶಾರಿ ಕೆ. ಗಣೇಶ್ ಅವರಿಂದ ನಿರ್ದೇಶನದ ಅವಕಾಶ ಪಡೆಯುವ ಸುತ್ತ ಹಾಸ್ಯಮಯವಾಗಿ ಮೂಡಿಬಂದಿದ್ದ ವಿಡಿಯೋ ಗಮನ ಸೆಳೆದಿತ್ತು. ಚಿತ್ರದ ಕಥೆ ಮೆಚ್ಚಿದ ನಿರ್ಮಾಪಕರು ಸಿದ್ದುಗೆ ನಿರ್ದೇಶನದ ಅವಕಾಶ ನೀಡಿದ್ದರು.

Author

ANU News

Follow Me
Other Articles
Previous

Sreeleela to Play Roja in Dhanush-Mammootty Film ‘Om’

Next

Teaser of VJ Sidhu’s Directorial Debut ‘Dayangaram’ Released

Recent Posts

  • Tamil Nadu Restores 6am Movie Shows, Brings Relief to Film Industry
  • ತಮಿಳುನಾಡಿನಲ್ಲಿ ಮುಂಜಾನೆ 6 ಗಂಟೆಯ ಸಿನಿಮಾ ಶೋಗಳಿಗೆ ಮತ್ತೆ ಅನುಮತಿ
  • Friendship, Fun and Youth Life Take Centre Stage in ‘Melko Puducherry’
  • ಸ್ನೇಹ, ಮೋಜು, ಯುವಜನರ ಬದುಕಿನ ಸುತ್ತ ಸಾಗುವ ಮನರಂಜನಾತ್ಮಕ ಕಥೆ ‘ಮೆಲ್ಕೋ ಪುದುಚೇರಿ’
  • Teaser of VJ Sidhu’s Directorial Debut ‘Dayangaram’ Released
Copyright 2026 — ANU News. All rights reserved. Blogsy WordPress Theme