Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ನಮ್ಮ ಮೆಟ್ರೋ ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಅಸ್ತು!

By ANU News
November 12, 2026 1 Min Read
Comments Off on ನಮ್ಮ ಮೆಟ್ರೋ ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಅಸ್ತು!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ಬೆಂಗಳೂರಿನ ಪಿಂಕ್ ಲೈನ್‌ನ ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಮರ್ಥ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ.

ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆ ಹಾಗೂ ಹೆಸರು ಬದಲಾವಣೆಗೆ ಸಂಬಂಧಿಸಿದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 

ಬದಲಾವಣೆಯಾಗಲಿರುವ ಮೂರು ನಿಲ್ದಾಣಗಳ ವಿವರ ಹೀಗಿದೆ:

  • ಐಐಎಂಬಿ (IIMB) ಮೆಟ್ರೋ ನಿಲ್ದಾಣ: ಬಿಳೇಕಹಳ್ಳಿ – ಐಐಎಂಬಿ (Bilekahalli – IIMB)
  • ಜೆ.ಪಿ. ನಗರ 4ನೇ ಹಂತ: ಎನ್.ಎಸ್. ಪಾಳ್ಯ – ಜೆ.ಪಿ. ನಗರ 4ನೇ ಹಂತ (NS Palya – JP Nagar 4th Phase)
  • ತಾವರೆಕೆರೆ ಮೆಟ್ರೋ ನಿಲ್ದಾಣ: ಎಸ್.ಜಿ. ಪಾಳ್ಯ (ಸುಧ್ದಗುಂಟೆ ಪಾಳ್ಯ) – SG Palya (Suddagunte Palya)

ಈ ಹಿಂದೆ ಬಿಎಂಆರ್‌ಸಿಎಲ್ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅಧಿಕೃತ ಮನವಿ ಸಲ್ಲಿಸಲಾಗಿತ್ತು. ವಿಶೇಷವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಿವಾಸಿಗಳ ಬಹುದಿನಗಳ ಬೇಡಿಕೆಯಂತೆ ಐಐಎಂಬಿ ಮೆಟ್ರೋ ನಿಲ್ದಾಣದ ಹೆಸರನ್ನು ಬದಲಾಯಿಸುವಂತೆ ಮನವಿ ಮಾಡಲಾಗಿತ್ತು ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

Author

ANU News

Follow Me
Other Articles
Previous

‘Ramayana’ Nears ₹1,000 Crore Mark; Hindi Version Drives Box Office Surge

Next

Bengaluru Metro Naming Row Ends as Centre Approves Three Proposed Changes

Recent Posts

  • Bengaluru Metro Naming Row Ends as Centre Approves Three Proposed Changes
  • ನಮ್ಮ ಮೆಟ್ರೋ ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಅಸ್ತು!
  • ‘Ramayana’ Nears ₹1,000 Crore Mark; Hindi Version Drives Box Office Surge
  • ₹1,000 ಕೋಟಿ ಕ್ಲಬ್ ಹೊಸ್ತಿಲಲ್ಲಿ ‘ರಾಮಾಯಣ’; ಹಿಂದಿ ಭಾಷೆಯಲ್ಲೇ ಹೆಚ್ಚು ಕಲೆಕ್ಷನ್
  • ಹಾಸನಾಂಬೆ ಉತ್ಸವ; ಮುಂದಿನ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಯೋಜನೆಗೆ ನಿರ್ಧಾರ
Copyright 2026 — ANU News. All rights reserved. Blogsy WordPress Theme