ರಾಜಸ್ಥಾನ ರೈಲು ಹಳಿ ಸ್ಫೋಟ ಪ್ರಕರಣ: ಮಹಿಳೆ ಸೇರಿ ಇಬ್ಬರ ಬಂಧನ
ಜೈಪುರ: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ರಾಮ್ಸಿಂಗ್ಪುರ ಸಮೀಪ ರೈಲು ಹಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ನ ಗುರುದಾಸಪುರ ನಿವಾಸಿಗಳಾದ ದೇವೇಂದ್ರ ಸಿಂಗ್ ಮತ್ತು ಮಹಕ್ದೀಪ್ ಕೌರ್ ಬಂಧಿತರು. ಇತರ ಸಹಚರರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ನವೆಂಬರ್ 3ರಂದು 50 ಜಿಬಿ ಪ್ರದೇಶದ ಬಳಿ ರೈಲು ಹಳಿಯಲ್ಲಿ ಸ್ಫೋಟ ಸಂಭವಿಸಿತ್ತು. ಪ್ರಯಾಣಿಕರ ರೈಲು ಸ್ಥಳ ದಾಟಿದ ಕೆಲವೇ ಕ್ಷಣಗಳ ಬಳಿಕ ಸ್ಫೋಟ ಸಂಭವಿಸಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸಂಚಾರ ಸ್ಥಗಿತಗೊಳಿಸಿ, ಹಲವು ರೈಲುಗಳನ್ನು ರದ್ದುಗೊಳಿಸಲಾಗಿತ್ತು. ದುರಸ್ತಿ ಮತ್ತು ಸುರಕ್ಷತಾ ಪರಿಶೀಲನೆ ಬಳಿಕ ನವೆಂಬರ್ 5ರಂದು ಸಂಚಾರ ಪುನರಾರಂಭಗೊಂಡಿತ್ತು.

ರೈಲ್ವೆ ಇಲಾಖೆ ರಾಮ್ಸಿಂಗ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಬಿಕಾನೇರ್ ಐಜಿ ಓಂಪ್ರಕಾಶ್, ಎಸ್ಪಿ ಹರಿಶಂಕರ್ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಸಿಒ ನಿತಿನ್ ಚೌಧರಿ ತನಿಖೆಯ ಮೇಲ್ವಿಚಾರಣೆ ವಹಿಸಿದ್ದಾರೆ.