Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
Entertainment

ಛಠ್ ಪೂಜೆಯಲ್ಲಿ ಪಾಲ್ಗೊಂಡ ನಟಿ ತಮನ್ನಾ ಭಾಟಿಯಾ:

By ANU News
November 16, 2026 1 Min Read
Comments Off on ಛಠ್ ಪೂಜೆಯಲ್ಲಿ ಪಾಲ್ಗೊಂಡ ನಟಿ ತಮನ್ನಾ ಭಾಟಿಯಾ:

ಮುಂಬೈ: ನಟಿ ತಮನ್ನಾ ಭಾಟಿಯಾ ಅವರು ಮುಂಬೈನ ಜುಹು ಬೀಚ್‌ನಲ್ಲಿ ನಡೆದ ಛಠ್ ಮಹಾಪರ್ವ ಆಚರಣೆಯಲ್ಲಿ ಪಾಲ್ಗೊಂಡು ಭಕ್ತರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದ ಸಲ್ಲಿಸಲು ಕಾರ್ಯಕ್ರಮಕ್ಕೆ ಬಂದಿರುವುದಾಗಿ ಹೇಳಿದರು. ತಮ್ಮ ಭಕ್ತಿಗೀತೆ ‘ಛಠಿ ಮೈಯಾ’ಗೆ ಜನರಿಂದ ಅಪಾರ ಪ್ರೀತಿ ವ್ಯಕ್ತವಾಗಿರುವುದು ಸಂತಸ ತಂದಿದೆ. ಛಠ್ ಪೂಜೆಯನ್ನು ಹಾಡಿನ ಮೂಲಕ ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ತಮ್ಮ ಅದೃಷ್ಟ ಎಂದರು.

ಹಾಡಿನ ಪ್ರಚಾರದ ವೇಳೆ ಪಾಟ್ನಾಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ತಮನ್ನಾ, ಗಂಗಾ ಆರತಿ ನೆರವೇರಿಸಿದ ಬಳಿಕ ಛಠ್ ಪೂಜೆಯನ್ನು ಕಣ್ತುಂಬಿಕೊಳ್ಳುವ ಆಸೆ ಹೊಂದಿದ್ದಾಗಿ ತಿಳಿಸಿದರು.

ಇದೀಗ ತಮ್ಮದೇ ನಗರಿ ಮುಂಬೈನಲ್ಲಿ ಸಾವಿರಾರು ಭಕ್ತರೊಂದಿಗೆ ಛಠ್ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು. ಛಠ್ ಹಬ್ಬದ ಮಹತ್ವ ಮತ್ತು ಈ ಆಚರಣೆಯಿಂದ ಕಲಿತ ವಿಚಾರಗಳು ಸದಾ ತಮ್ಮೊಂದಿಗೆ ಉಳಿಯಲಿವೆ. ಈ ಹಬ್ಬದೊಂದಿಗೆ ಬೆಸೆದುಕೊಂಡಿರುವ ಹೊಸ ಬಾಂಧವ್ಯ ಎಂದಿಗೂ ಮುಂದುವರಿಯಲಿದೆ ಎಂದು ತಮನ್ನಾ ಭಾವನೆ ಹಂಚಿಕೊಂಡರು.

Author

ANU News

Follow Me
Other Articles
Previous

ವೇವ್ಸ್ ಫಿಲ್ಮ್ ಬಜಾರ್‌ಗೆ 20ರ ಸಂಭ್ರಮ: ಭಾರತೀಯ ಸಿನಿಮಾಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆಯ ಗುರಿ

Next

Tamannaah Bhatia Joins Chhath Puja Celebrations at Mumbai’s Juhu Beach

Recent Posts

  • Mammootty Named Brand Ambassador for Kerala’s Road Safety Mission
  • ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಫುಡ್ ಕಿಯೋಸ್ಕ್ ಮೂಲಕ ಸ್ವಯಂ ಉದ್ಯೋಗ: ₹4 ಲಕ್ಷದವರೆಗೆ ಸಹಾಯಧನ
  • Om Birla to Inaugurate Women Parliamentarians’ Conference in Bengaluru on Nov 17
  • 20 ಸಾವಿರ ನಾಗರಿಕರ ಭೇಟಿ, 5 ಸಾವಿರ ಸಮಸ್ಯೆಗಳಿಗೆ ಪರಿಹಾರ: ಶಾಸಕ ಎಸ್. ಸುರೇಶ್ ಕುಮಾರ್
  • KPSC Prelims: Only 59% of Registered Candidates Appear, 59,807 Skip Exam
Copyright 2026 — ANU News. All rights reserved. Blogsy WordPress Theme