Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ಸೋನಿಯಾ ಗಾಂಧಿ ದೇಶದ ಪ್ರಜಾಪ್ರಭುತ್ವ, ಬಡವರು ಮತ್ತು ದುರ್ಬಲ ವರ್ಗಗಳ ಹಿತಕ್ಕಾಗಿ ಬದುಕು ಮುಡಿಪಾಗಿಟ್ಟ ತ್ಯಾಗಮೂರ್ತಿ’; ಹರಿಪ್ರಸಾದ್

By ANU News
November 18, 2026 1 Min Read
Comments Off on ‘ಸೋನಿಯಾ ಗಾಂಧಿ ದೇಶದ ಪ್ರಜಾಪ್ರಭುತ್ವ, ಬಡವರು ಮತ್ತು ದುರ್ಬಲ ವರ್ಗಗಳ ಹಿತಕ್ಕಾಗಿ ಬದುಕು ಮುಡಿಪಾಗಿಟ್ಟ ತ್ಯಾಗಮೂರ್ತಿ’; ಹರಿಪ್ರಸಾದ್

ಬೆಂಗಳೂರು: ಸೋನಿಯಾ ಗಾಂಧಿ ಅವರು ಕೇವಲ ಕಾಂಗ್ರೆಸ್ ನಾಯಕಿಯಲ್ಲ. ದೇಶದ ಏಕತೆ, ಸಮಗ್ರತೆ, ಪ್ರಜಾಪ್ರಭುತ್ವ ಹಾಗೂ ಬಡವರು, ಮಹಿಳೆಯರು ಮತ್ತು ದುರ್ಬಲ ವರ್ಗಗಳ ಹಕ್ಕುಗಳ ರಕ್ಷಣೆಗಾಗಿ ಸಾರ್ವಜನಿಕ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕಿ ಎಂದು ಬಿ.ಕೆ. ಹರಿಪ್ರಸಾದ್ ಬಣ್ಣಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರೊಂದಿಗೆ ಸುಮಾರು ಎರಡು ದಶಕಗಳ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

1998ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಸೋನಿಯಾ ಗಾಂಧಿ, ಪಕ್ಷ ಸಂಕಷ್ಟದಲ್ಲಿದ್ದಾಗ ನಾಯಕತ್ವ ನೀಡಿ ಸಂಘಟನೆಯನ್ನು ಬಲಪಡಿಸಿದರು. 1999ರಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿದಾಗ ವಿದೇಶಿ ಮೂಲದ ವಿಚಾರವಾಗಿ ಅಪಪ್ರಚಾರ ನಡೆದರೂ ಅಲ್ಲಿನ ಜನರು ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದರು ಎಂದು ಸ್ಮರಿಸಿದರು.

2004ರಲ್ಲಿ ಪ್ರಧಾನಮಂತ್ರಿ ಹುದ್ದೆ ಸ್ವೀಕರಿಸುವಂತೆ ಒತ್ತಾಯವಿದ್ದರೂ ಅದನ್ನು ನಿರಾಕರಿಸಿ ಡಾ. ಮನಮೋಹನ್ ಸಿಂಗ್ ಅವರಿಗೆ ಅವಕಾಶ ನೀಡಿದ್ದು ಅವರ ರಾಜಕೀಯ ತ್ಯಾಗಕ್ಕೆ ಸಾಕ್ಷಿ ಎಂದರು.

ಯುಪಿಎ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕುಗಳ ಕಾಯ್ದೆ, ಶಿಕ್ಷಣದ ಹಕ್ಕು ಕಾಯ್ದೆ ಮತ್ತು ಆಹಾರ ಭದ್ರತಾ ಕಾಯ್ದೆಗಳ ಜಾರಿಗೆ ಸೋನಿಯಾ ಗಾಂಧಿ ಅವರ ಪಾತ್ರ ಮಹತ್ವದ್ದಾಗಿತ್ತು. ಬಡವರು ಮತ್ತು ದುರ್ಬಲ ವರ್ಗಗಳ ಹಿತದ ವಿಚಾರದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ ಎಂದು ಹೇಳಿದರು.

ರೈತರ ಸಮಸ್ಯೆಗಳಿಗೆ ಸ್ಪಂದನೆ, ಪಕ್ಷದ ಕಾರ್ಯಕರ್ತರ ಸಂಕಷ್ಟಕ್ಕೆ ನೆರವು, ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರ ಅವರ ಬದ್ಧತೆಯನ್ನು ಹರಿಪ್ರಸಾದ್ ಮೆಚ್ಚಿಕೊಂಡರು. ವೈಯಕ್ತಿಕ ದುರಂತಗಳ ನಡುವೆಯೂ ದೇಶ ಮತ್ತು ಪಕ್ಷಕ್ಕಾಗಿ ನಿಂತ ಅವರ ಧೈರ್ಯ, ತಾಳ್ಮೆ ಹಾಗೂ ಮಾನವೀಯತೆ ಮಾದರಿಯಾಗಿದೆ ಎಂದರು.

ಸೋನಿಯಾ ಗಾಂಧಿ ಅವರ ತ್ಯಾಗ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಕಾರ್ಯಕರ್ತರ ಜವಾಬ್ದಾರಿ. ಕಾಂಗ್ರೆಸ್ ಪಕ್ಷವನ್ನು ಉಳಿಸಿ ಬಲಪಡಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Sonia Gandhi Dedicated Life to Democracy, Poor and Weaker Sections: B K Hariprasad

Next

ದೇವನಹಳ್ಳಿಯಲ್ಲಿ ಕಾಲಿನ್ಸ್ ಏರೋಸ್ಪೇಸ್‌ನ ಭಾರತದ ಮೊದಲ MRO ಘಟಕ ಸ್ಥಾಪನೆ: 2,100 ಉದ್ಯೋಗ ನಿರೀಕ್ಷೆ

Recent Posts

  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣಗೆ ಪತ್ರಕರ್ತರಿಂದ ಅಭಿನಂದನೆ
  • Indian Youth Increasingly Proud of Culture, History and Identity: RSS Prachar Pramukh Sunil Ambekar
  • ಯುವಪೀಳಿಗೆಯಲ್ಲಿ ಸಾಂಸ್ಕೃತಿಕ ಆತ್ಮವಿಶ್ವಾಸ ಹೆಚ್ಚಾಗಿದೆ: RSS ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್
  • Karnataka Steps Up Bedti-Varada River-Linking Project; DPR Preparation to Be Accelerated
  • Priyank Kharge Announces AI Training Programme for 63,000 Youth
Copyright 2026 — ANU News. All rights reserved. Blogsy WordPress Theme