Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಯುವಪೀಳಿಗೆಯಲ್ಲಿ ಸಾಂಸ್ಕೃತಿಕ ಆತ್ಮವಿಶ್ವಾಸ ಹೆಚ್ಚಾಗಿದೆ: RSS ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್

By ANU News
November 18, 2026 1 Min Read
Comments Off on ಯುವಪೀಳಿಗೆಯಲ್ಲಿ ಸಾಂಸ್ಕೃತಿಕ ಆತ್ಮವಿಶ್ವಾಸ ಹೆಚ್ಚಾಗಿದೆ: RSS ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್

ಬೆಂಗಳೂರು: ಇಂದಿನ ಯುವಕರು ದೇಶದ ಸ್ವಾಭಿಮಾನ ಮತ್ತು ಇತಿಹಾಸದೊಂದಿಗೆ ಬೆಸೆದುಕೊಂಡಿದ್ದಾರೆ. ಕ್ರಿಕೆಟ್, ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’ ಎಂದು ಹೇಳಲು ಹಿಂಜರಿಯುತ್ತಿಲ್ಲ. ಇದು ಭಾರತೀಯ ಯುವಕರಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಆತ್ಮವಿಶ್ವಾಸದ ಸಂಕೇತ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ.

ಮಂಥನ ಬೆಂಗಳೂರು ಆಯೋಜಿಸಿದ್ದ ಲೇಖಕಿ ರಶ್ಮೀ ಸಾಮಂತ್ ಸಂಪಾದಿಸಿರುವ ‘Hundred Years Young: Rashtriya Swayamsevak Sangh’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ಯುವಕರಿಗೆ ವಿಶ್ವಾಸವಿದೆ. ಅವರನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಭಾರತದಲ್ಲಿ ಅವು ಯಶಸ್ವಿಯಾಗುತ್ತಿಲ್ಲ. ದೇಶದ ಜವಾಬ್ದಾರಿ ಎಲ್ಲ ಪೀಳಿಗೆಗಳಿಗೂ ಸೇರಿದ್ದು, ಯುವಕರು ಭಾರತೀಯ ಸಂಸ್ಕೃತಿಯೊಂದಿಗೆ ರಾಜಿಯಾಗುವುದಿಲ್ಲ ಎಂದರು.

ಸಂಘದ ಮೇಲೆ ಬರುವ ಟೀಕೆಗಳು ಮತ್ತು ಪ್ರಶ್ನೆಗಳು ಸಮಾಜದಲ್ಲಿ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತವೆ. ದೇಶ ನಮ್ಮದು ಎಂದ ಮೇಲೆ ಅದರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯೂ ಎಲ್ಲರದ್ದಾಗಿದೆ ಎಂದು ಹೇಳಿದರು. ಡಾ. ಹೆಡಗೇವಾರ್ ಅವರು ಸಾಂಸ್ಕೃತಿಕ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಸಂಘ ಆರಂಭಿಸಿದರು. ಇಂದು ಲಕ್ಷಾಂತರ ಜನರು ಆ ಆತ್ಮವಿಶ್ವಾಸ ಹೊಂದಿದ್ದಾರೆ ಎಂದರು.

ಕೃತಿಯ ಸಂಪಾದಕಿ ರಶ್ಮೀ ಸಾಮಂತ್ ಮಾತನಾಡಿ, ಸಂಘದ ನೂರು ವರ್ಷಗಳ ಪಯಣವನ್ನು ಅದರೊಂದಿಗೆ ಬೆಸೆದುಕೊಂಡ 20 ವ್ಯಕ್ತಿಗಳ ಜೀವನಾನುಭವಗಳ ಮೂಲಕ ಪರಿಚಯಿಸುವುದು ಪುಸ್ತಕದ ಉದ್ದೇಶವಾಗಿದೆ ಎಂದರು. ಕಾನೂನು, ಸಿನಿಮಾ, ಕ್ರೀಡೆ, ಪತ್ರಿಕೋದ್ಯಮ, ಉದ್ಯಮ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ವ್ಯಕ್ತಿಗಳು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ತಂತ್ರಜ್ಞಾನ ಮಾಹಿತಿ ನೀಡಿದರೂ, ಜೀವನಾನುಭವ ಮತ್ತು ಭಾವನೆಗಳನ್ನು ಪುಸ್ತಕಗಳು ವಿಶಿಷ್ಟವಾಗಿ ದಾಖಲಿಸುತ್ತವೆ ಎಂದು ಹೇಳಿದರು.

ಸಂಘದ ಸೇವಾ ಚಟುವಟಿಕೆಗಳು, ಕೋವಿಡ್ ಸಂದರ್ಭದಲ್ಲಿ ನೆರವು, ವಿಪತ್ತುಗಳಲ್ಲಿನ ಕಾರ್ಯಕರ್ತರ ಸೇವೆ ಹಾಗೂ 1963ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸುಮಾರು 3,500 ಸ್ವಯಂಸೇವಕರನ್ನು ಆಹ್ವಾನಿಸಿದ್ದ ಘಟನೆಯನ್ನೂ ಅವರು ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್, ಡಾ. ಪಿ.ವಿ. ಕೃಷ್ಣಭಟ್, ಅರುಣ್ ಕುಮಾರ್, ರಾಜೇಶ್ ಪದ್ಮಾರ್ ಸೇರಿದಂತೆ ಚಿಂತಕರು, ಲೇಖಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Karnataka Steps Up Bedti-Varada River-Linking Project; DPR Preparation to Be Accelerated

Next

Indian Youth Increasingly Proud of Culture, History and Identity: RSS Prachar Pramukh Sunil Ambekar

Recent Posts

  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣಗೆ ಪತ್ರಕರ್ತರಿಂದ ಅಭಿನಂದನೆ
  • Indian Youth Increasingly Proud of Culture, History and Identity: RSS Prachar Pramukh Sunil Ambekar
  • ಯುವಪೀಳಿಗೆಯಲ್ಲಿ ಸಾಂಸ್ಕೃತಿಕ ಆತ್ಮವಿಶ್ವಾಸ ಹೆಚ್ಚಾಗಿದೆ: RSS ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್
  • Karnataka Steps Up Bedti-Varada River-Linking Project; DPR Preparation to Be Accelerated
  • Priyank Kharge Announces AI Training Programme for 63,000 Youth
Copyright 2026 — ANU News. All rights reserved. Blogsy WordPress Theme