Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣಗೆ ಪತ್ರಕರ್ತರಿಂದ ಅಭಿನಂದನೆ

By ANU News
November 18, 2026 1 Min Read
Comments Off on ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣಗೆ ಪತ್ರಕರ್ತರಿಂದ ಅಭಿನಂದನೆ

ಬೆಂಗಳೂರು: 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ವನ್ಯಜೀವಿ ಹಾಗೂ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರನ್ನು ಸಮಾನ ಮನಸ್ಕ ಪತ್ರಕರ್ತರು ನಗರದ ಪ್ರೆಸ್ ಕ್ಲಬ್‌ನಲ್ಲಿ ಅಭಿನಂದಿಸಿದರು.

‘ಕರುನಾಡ ಕೋಟೆಗಳ ಸುವರ್ಣ ನೋಟ’, ‘ಗೋಲ್ಡನ್ ವ್ಯೂ ಆಫ್ ಕರ್ನಾಟಕ’ (ಆಂಗ್ಲಭಾಷೆ) ಹಾಗೂ ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಕೃತಿಗಳ ಮೂಲಕ ಪ್ರಸಿದ್ಧರಾಗಿರುವ ಸುವರ್ಣ, ಕರ್ನಾಟಕದ ಅಪರೂಪದ ಫೋಟೊ ಜರ್ನಲಿಸ್ಟ್‌ಗಳಲ್ಲಿ ಒಬ್ಬರು. ಡಾ. ರಾಜ್‌ಕುಮಾರ್, ಶಂಕರ್ ನಾಗ್, ಅಂಬರೀಷ್ ಮತ್ತು ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯ ನಟರೊಂದಿಗೆ ನಿಕಟ ಒಡನಾಟ ಹೊಂದಿದ್ದರು.

ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಹತ್ತಿರದಿಂದ ಕಂಡಿರುವ ಅವರು, ರಾಜ್ಯದಾದ್ಯಂತ ಸಂಚರಿಸಿ ಅಪರೂಪದ ಕೋಟೆಗಳು ಹಾಗೂ ವನ್ಯಜೀವಿಗಳ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ದಶಕಗಳ ಕಾಲ ಛಾಯಾಗ್ರಹಣದ ಮೂಲಕ ಕರ್ನಾಟಕದ ಹಲವು ಐತಿಹಾಸಿಕ ಹಾಗೂ ಸಾಮಾಜಿಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ಅವರ ಒಡನಾಡಿಗಳು ಸ್ಮರಿಸಿದರು.

ಸುವರ್ಣ ಅವರ ಸರಳತೆ, ನೇರ ನಡೆನುಡಿ ಮತ್ತು ಪತ್ರಿಕೋದ್ಯಮದಲ್ಲಿನ ಪ್ರಾಮಾಣಿಕತೆಯನ್ನು ಅಭಿನಂದನಾ ಕಾರ್ಯಕ್ರಮದಲ್ಲಿ ಕೊಂಡಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಅಕಾಡೆಮಿ ಸದಸ್ಯ ಕೆ. ವೆಂಕಟೇಶ್, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ, ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗೌಡ, ವೈ.ಎಸ್.ಎಲ್. ಸ್ವಾಮಿ, ಗಂಡಸಿ ಸದಾನಂದ ಸ್ವಾಮಿ, ಸೋಮಸುಂದರ ರೆಡ್ಡಿ, ಗೀರೀಶ್ ಕೋಟೆ, ಮಂಜುನಾಥ್ ಅದ್ದೆ, ನಂಜುಂಡಪ್ಪ.ವಿ, ಧ್ಯಾನ್ ಪೂಣಚ್ಚ, ಅಭಿಮನ್ಯು ರಮೇಶ್ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Indian Youth Increasingly Proud of Culture, History and Identity: RSS Prachar Pramukh Sunil Ambekar

Next

‘ತಂಬಾಕು ಮುಕ್ತ ಯುವಜನ ಅಭಿಯಾನ 4.0’; ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ, ಸಚಿವ ಖಾದರ್ ಪಣ

Recent Posts

  • Karnataka Minister UT Khader Seeks Coordinated Action to Make Educational Institutions Tobacco-Free
  • ‘ತಂಬಾಕು ಮುಕ್ತ ಯುವಜನ ಅಭಿಯಾನ 4.0’; ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ, ಸಚಿವ ಖಾದರ್ ಪಣ
  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣಗೆ ಪತ್ರಕರ್ತರಿಂದ ಅಭಿನಂದನೆ
  • Indian Youth Increasingly Proud of Culture, History and Identity: RSS Prachar Pramukh Sunil Ambekar
  • ಯುವಪೀಳಿಗೆಯಲ್ಲಿ ಸಾಂಸ್ಕೃತಿಕ ಆತ್ಮವಿಶ್ವಾಸ ಹೆಚ್ಚಾಗಿದೆ: RSS ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್
Copyright 2026 — ANU News. All rights reserved. Blogsy WordPress Theme