PoKನಲ್ಲಿ ಪಾಕಿಸ್ತಾನ ಸೇನಾ ಹೆಲಿಕಾಪ್ಟರ್ ಪತನ; ಸಿಬ್ಬಂದಿ ದುರ್ಮರಣ
ಇಸ್ಲಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಮುಜಾಫರಾಬಾದ್ ಸಮೀಪ ಪಾಕಿಸ್ತಾನ ಸೇನೆಗೆ ಸೇರಿದ ಯುದ್ಧ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡು, ಅದರಲ್ಲಿದ್ದ ಎಲ್ಲಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಐಎಸ್‌ಪಿಆರ್ ನೀಡಿರುವ ಮಾಹಿತಿ ಪ್ರಕಾರ, ತುರ್ತು ಕಾರ್ಯಾಚರಣೆಗಾಗಿ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡಿದ್ದು, ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿದೆ. ಅಪಘಾತದ ಬಳಿಕ ಇಂಧನ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ.
ದುರಂತದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ ನಾಲ್ಕು ರಿಂದ ಐದು ಮಂದಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ PoKಯ ರಾವಲಕೋಟ್ ಮತ್ತು ಮೀರ್‌ಪುರ ಪ್ರದೇಶಗಳಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೇನೆಯು ಕಣ್ಗಾವಲು ಮತ್ತು ಕಾರ್ಯಾಚರಣೆಗಳಿಗೆ ಹೆಲಿಕಾಪ್ಟರ್‌ಗಳನ್ನು ಬಳಸುತ್ತಿತ್ತು. ಈ ಸಂದರ್ಭದಲ್ಲೇ ಸಂಭವಿಸಿದ ಅಪಘಾತವು ಪಾಕಿಸ್ತಾನ ಸೇನೆಗೆ ಹಿನ್ನಡೆಯಾಗಿ ಪರಿಣಮಿಸಿದೆ.
21 Pakistani Army soldiers killed
The Afghan Army shot down a Pakistan Army Aviation Mi-17 helicopter, resulting in heavy losses for the Pakistan Army. pic.twitter.com/hgBdRtwUPI
— Afghanistan Army (@AfganArmyStan) June 10, 2026