ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ತೆರವು: ಅಮೆರಿಕ ಸೇನೆ ಘೋಷಣೆ
ವಾಷಿಂಗ್ಟನ್: ಇರಾನ್ ಬಂದರುಗಳು ಮತ್ತು ಕರಾವಳಿ ಪ್ರದೇಶಗಳಿಗೆ ಸಂಬಂಧಿಸಿದ ಸಮುದ್ರ ಸಂಚಾರದ ಮೇಲಿನ ದಿಗ್ಬಂಧನವನ್ನು ಅಮೆರಿಕ ಪಡೆಗಳು ತೆರವುಗೊಳಿಸಿರುವುದಾಗಿ ಅಮೆರಿಕ ಕೇಂದ್ರ ಕಮಾಂಡ್ ಘೋಷಿಸಿದೆ. ಇದರೊಂದಿಗೆ ಇರಾನಿನ ಬಂದರುಗಳಿಗೆ ಆಗಮಿಸುವ ಹಾಗೂ ನಿರ್ಗಮಿಸುವ ಹಡಗುಗಳ ಸಂಚಾರಕ್ಕೆ ಇದ್ದ ನಿರ್ಬಂಧಗಳು…
ಅಮೆರಿಕಾದಲ್ಲಿ ಮತ್ತೆ ಬಂದೂಕುದಾರಿಯ ಅಟ್ಟಹಾಸ; ಟೈಮ್ಸ್ ಸ್ಕ್ವೇರ್ನಲ್ಲಿ ರಾದ್ದಾಂತಕ್ಕೆ ಬೆಚ್ಚಿದ ಜನ
ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ ನಗರದ ಪ್ರಸಿದ್ಧ ಟೈಮ್ಸ್ ಸ್ಕ್ವೇರ್ನಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಮಧ್ಯಾಹ್ನ ಸ್ಥಳೀಯ ಸಮಯ ಸುಮಾರು…
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಬಲ ಹೆಚ್ಚಳ: 39ಕ್ಕೆ ಏರಿಕೆ, ಬಿಜೆಪಿ 28ಕ್ಕೆ, ಜೆಡಿಎಸ್ 6ಕ್ಕೆ ಕುಸಿತ
ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆಯ ಫಲಿತಾಂಶದೊಂದಿಗೆ ಮೇಲ್ಮನೆಯ ರಾಜಕೀಯ ಚಿತ್ರಣ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಸದನದಲ್ಲಿ ಸಂಖ್ಯಾಬಲದ ಮೇಲುಗೈ ಸಾಧಿಸಿದೆ. ಚುನಾವಣಾ ಫಲಿತಾಂಶದ ಬಳಿಕ ವಿಧಾನಪರಿಷತ್ನಲ್ಲಿ…
ಅಡ್ಡಮತದಾನ ಎಫೆಕ್ಟ್; ಯುವಕರಿಗೆ ಹೆಚ್ಚಿನ ಅವಕಾಶ ನೀಡಲು ಜೆಡಿಎಸ್ ನಿರ್ಧಾರ
ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲು ಪಕ್ಷದೊಳಗಿನ ಅಡ್ಡಮತದಾನದಿಂದ ಸಂಭವಿಸಿದೆ ಎಂಬ ಚರ್ಚೆ ಜೋರಾಗಿದೆ. ಈ ಬೆಳವಣಿಗೆ ಪಕ್ಷದ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸಿದೆ ಎಂದು ಜೆಡಿಎಸ್ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ…
ಧನುಷ್–ಮಮ್ಮೂಟ್ಟಿ ಅಭಿನಯದ ಚಿತ್ರಕ್ಕೆ ‘ಓಂ’ ಶೀರ್ಷಿಕೆ; ಅಕ್ಟೋಬರ್ 16ಕ್ಕೆ ತೆರೆಗೆ
ಚೆನ್ನೈ: ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಅವರ ನಿರ್ದೇಶನದಲ್ಲಿ ತಮಿಳು ನಟ ಧನುಷ್ ಹಾಗೂ ಮಲಯಾಳಂ ಸೂಪರ್ಸ್ಟಾರ್ ಮಮ್ಮೂಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆಯನ್ನು ‘ಓಂ’ ಎಂದು ಘೋಷಿಸಲಾಗಿದೆ. ಚಿತ್ರವು ಇದೇ ವರ್ಷದ ಅಕ್ಟೋಬರ್ 16ರಂದು ಬಿಡುಗಡೆಯಾಗಲಿದ್ದು, ಶೀರ್ಷಿಕೆಯೊಂದಿಗೆ ‘Chapter…
ಕರೀನಾ ಕಪೂರ್–ಪೃಥ್ವಿರಾಜ್ ನಟನೆಯ ‘ದೈರಾ’ ಸೆಪ್ಟೆಂಬರ್ 18ಕ್ಕೆ ಬಿಡುಗಡೆ
ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಬಹುನಿರೀಕ್ಷಿತ ಚಿತ್ರ ದೈರಾ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ವೀಡಿಯೊದಲ್ಲಿ ಚಿತ್ರದ ಆನ್-ಸ್ಕ್ರೀನ್ ಹಾಗೂ ತೆರೆಮರೆಯ ಕ್ಷಣಗಳ ಝಲಕ್ ನೀಡಲಾಗಿದೆ. ಒಂದು ದೃಶ್ಯದಲ್ಲಿ…
ರಾಜ್ಯದ ಐಎಎಸ್ ಅಧಿಕಾರಿಗಳ ವರ್ಗಾವಣೆ; ಬಿಡಿಎ ಆಯುಕ್ತ ಮನಿವಣ್ಣನ್’ಗೆ ಹೆಚ್ಚುವರಿ ಜವಾಬ್ಧಾರಿ
ಬೆಂಗಳೂರು: ರಾಜ್ಯ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಮನಿವಣ್ಣನ್ ಪಿ. ಅವರಿಗೆ ಬೆಂಗಳೂರು ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಲ್ಟ್) ಆಯುಕ್ತ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ನವದೆಹಲಿಯ ಕರ್ನಾಟಕ…
‘ಪರಿಷತ್ ಫಲಿತಾಂಶ ರಾಜ್ಯದ ಅಭಿವೃದ್ಧಿಕಾರ್ಯಕ್ರಮಗಳ ಮೇಲಿನ ವಿಶ್ವಾಸದ ಪ್ರತೀಕ’; ಡಿಕೆಶಿ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್ ಸರ್ಕಾರ ಹಾಗೂ ಅದರ ಜನಪರ ನೀತಿಗಳಿಗೆ ದೊರೆತ ಬೆಂಬಲವನ್ನು ಪ್ರತಿಬಿಂಬಿಸುತ್ತವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಗೆಲುವು…
ಪರಿಷತ್ ಗೆಲುವು 2028ರ ಚುನಾವಣೆಗೆ ದಿಕ್ಸೂಚಿ: ಸುರ್ಜೇವಾಲ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವು ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅವರು,…
ತೆಲಂಗಾಣ ಸಚಿವ ಸಂಪುಟ ಇನ್ನು ಕಾಗದರಹಿತ: ಡಿಜಿಟಲ್ ಕ್ಯಾಬಿನೆಟ್ ವ್ಯವಸ್ಥೆಗೆ ಚಾಲನೆ
ಹೈದರಾಬಾದ್: ತೆಲಂಗಾಣ ಸರ್ಕಾರ ಸಚಿವ ಸಂಪುಟ ಸಭೆಗಳನ್ನು ಸಂಪೂರ್ಣವಾಗಿ ಕಾಗದರಹಿತವಾಗಿ ನಡೆಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ತೆಲಂಗಾಣ ಡಿಜಿಟಲ್ ಕ್ಯಾಬಿನೆಟ್ ವ್ಯವಸ್ಥೆ ಜಾರಿಗೆ ಸರ್ಕಾರ…