Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ದಂಬುಲಾದಲ್ಲಿ ಹೈಡ್ರಾಮಾ: ಸೋಲಿನ ಬೆನ್ನಲ್ಲೇ ವೈಭವ್ ಸೂರ್ಯವಂಶಿ-ಲಂಕಾ ಆಟಗಾರ ನಡುವೆ ವಾಗ್ವಾದ

By Anu News
June 16, 2026 1 Min Read
0

ಶ್ರೀಲಂಕಾದ ದಂಬುಲಾದಲ್ಲಿ ನಡೆದ ಟ್ರೈ-ನೇಷನ್ ‘ಎ’ ಸರಣಿಯ ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ನಡುವಿನ ಪಂದ್ಯ ರೋಚಕ ಘಟ್ಟದ ಜೊತೆಗೆ ಮೈದಾನದ ಹೈಡ್ರಾಮಾಕ್ಕೂ ಸಾಕ್ಷಿಯಾಯಿತು. ಸೂಪರ್ ಓವರ್‌ನಲ್ಲಿ ಭಾರತ ‘ಎ’ ತಂಡ ಸೋಲುತ್ತಿದ್ದಂತೆಯೇ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಗಮನ ಸೆಳೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ’ ತಂಡ ಸೂರ್ಯಂಶ್ ಶೆಡ್ಗೆ ಅವರ ಅರ್ಧಶತಕದ ನೆರವಿನಿಂದ 265 ರನ್ ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ‘ಎ’ ತಂಡವೂ 265 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿತು. ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ 16 ರನ್ ಗಳಿಸಿ ಭಾರತಕ್ಕೆ 17 ರನ್ ಗುರಿ ನೀಡಿತು.

ಭಾರತದ ಪರ ವೈಭವ್ ಸೂರ್ಯವಂಶಿ ಹಾಗೂ ಸೂರ್ಯಂಶ್ ಶೆಡ್ಗೆ ಕಣಕ್ಕಿಳಿದರೂ ಗುರಿ ತಲುಪಲು ವಿಫಲರಾದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಅಗತ್ಯವಿದ್ದ ವೇಳೆ ವೈಭವ್ ಶಾಟ್ ಕನೆಕ್ಟ್ ಮಾಡಲು ಸಾಧ್ಯವಾಗದೆ ಭಾರತ 7 ರನ್‌ಗಳಿಂದ ಸೋಲು ಕಂಡಿತು.

ಗೆಲುವಿನ ಬಳಿಕ ಶ್ರೀಲಂಕಾ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ, ಲಂಕಾ ಆಟಗಾರ ವಿಶೇನ್ ಹಾಲಂಬಾಗೆ ವೈಭವ್ ಸೂರ್ಯವಂಶಿ ಕಡೆ ಏನೋ ಹೇಳಿದರೆಂದು ವರದಿಯಾಗಿದೆ. ಇದರಿಂದ ಕೆರಳಿದ ವೈಭವ್, ನೇರವಾಗಿ ಹಾಲಂಬಾಗೆ ಅವರತ್ತ ತೆರಳಿ ವಾಗ್ವಾದ ನಡೆಸಿದರು.

ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆ ಇಬ್ಬರು ಆಟಗಾರರ ನಡುವೆ ತಳ್ಳಾಟವೂ ನಡೆದಿದ್ದು, ಮೈದಾನದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ಗಂಭೀರವಾಗುವ ಮುನ್ನ ಹಿರಿಯ ಆಟಗಾರ ನಿರೋಷನ್ ಡಿಕ್ವೆಲ್ಲಾ ಸೇರಿದಂತೆ ಇತರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.

Sri lanka has played mind game.
Bad light , delebrate delay and choices.

India on other hand, could not have done much. Its just vaibhav should have opened.#vaibhav #sooryavanshi #indvssl pic.twitter.com/y5kQEchrhG

— Sunil Gavaskar (@virender_swag) June 15, 2026

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ ನಡೆ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Author

Anu News

Follow Me
Other Articles
Previous

ಮೋದಿಗೆ ಸ್ಲೋವಾಕಿಯಾದ ಅತ್ಯುನ್ನತ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಪ್ರಶಸ್ತಿ

Next

ಭಾರತ-ಸ್ಲೋವಾಕಿಯಾ ಸಂಬಂಧಕ್ಕೆ ಹೊಸ ಬಲ: ಸಮಗ್ರ ಪಾಲುದಾರಿಕೆಗೆ ಏರಿಕೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM Modi urges secretaries to think beyond today, plan for India’s future
    • ಭವಿಷ್ಯದ ಭಾರತ ನಿರ್ಮಾಣಕ್ಕೆ ದೀರ್ಘಾವಧಿಯ ಚಿಂತನೆ ಅಗತ್ಯ: ಪ್ರಧಾನಿ ಮೋದಿ
    • Heavy rains trigger floods in MP, West Bengal; thousands evacuated
    • ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ
    • Trump warns Iran of economic pressure; claims US controls key waterways
    Copyright 2026 — ANU News. All rights reserved. Blogsy WordPress Theme