Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಪದ್ಮಶ್ರೀ ಪುರಸ್ಕೃತ ‘ಬ್ರಿಡ್ಜ್ ಮ್ಯಾನ್’ ಡಾ. ಗಿರೀಶ್ ಭಾರದ್ವಾಜ್ ನಿಧನ

By ANU News
July 7, 2026 1 Min Read
0

ಮಂಗಳೂರು: ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದೇ ಖ್ಯಾತರಾಗಿದ್ದ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ (ಜುಲೈ 7) ಮುಂಜಾನೆ ಹೃದಯ ಸಂಬಂಧಿ ಸಮಸ್ಯೆಯಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಡಿಮೆ ವೆಚ್ಚದ ಹಾಗೂ ಪರಿಸರ ಸ್ನೇಹಿ ತೂಗು ಸೇತುವೆಗಳ ನಿರ್ಮಾಣದ ಮೂಲಕ ದೇಶದ ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿದ್ದ ಅವರು, ಕರ್ನಾಟಕ ಸೇರಿದಂತೆ ಕೇರಳ, ಒಡಿಶಾ, ತೆಲಂಗಾಣ ಮತ್ತಿತರ ರಾಜ್ಯಗಳಲ್ಲಿ 120ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿ ಅಪಾರ ಖ್ಯಾತಿ ಗಳಿಸಿದ್ದರು. ಹಲವಾರು ಮೂಲಗಳ ಪ್ರಕಾರ ಅವರ ನಿರ್ಮಿತ ಸೇತುವೆಗಳ ಸಂಖ್ಯೆ 140ಕ್ಕೂ ಅಧಿಕವಾಗಿದೆ.

1950ರ ಮೇ 2ರಂದು ಸುಳ್ಯದಲ್ಲಿ ಜನಿಸಿದ ಗಿರೀಶ್ ಭಾರದ್ವಾಜ್ ಅವರು 1973ರಲ್ಲಿ ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. 1989ರಲ್ಲಿ ತಮ್ಮ ಸ್ವಗ್ರಾಮ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಮೊದಲ ಕಡಿಮೆ ವೆಚ್ಚದ ತೂಗು ಸೇತುವೆ ನಿರ್ಮಿಸುವ ಮೂಲಕ ತಮ್ಮ ವಿಶಿಷ್ಟ ಸೇವಾ ಪಯಣವನ್ನು ಆರಂಭಿಸಿದರು.

ಗ್ರಾಮೀಣ ಜನರ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅವರ ಕಾರ್ಯವನ್ನು ಗುರುತಿಸಿ ಭಾರತ ಸರ್ಕಾರವು 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿ, “ತೂಗು ಸೇತುವೆಗಳ ಸರದಾರ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನ ದೇಶಕ್ಕೆ ಅಪಾರ ನಷ್ಟ. ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ಅವರು ನೀಡಿದ ಕೊಡುಗೆ ಅನನ್ಯ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ” ಎಂದು ತಿಳಿಸಿದ್ದಾರೆ.

Author

ANU News

Follow Me
Other Articles
Previous

Mumbai-Pune Expressway Tunnel Collapse Halts Traffic; Opposition Alleges Shoddy Work

Next

Padma Shri Awardee and ‘Bridge Man of India’ Dr. Girish Bhardwaj Passes Away

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM Modi urges secretaries to think beyond today, plan for India’s future
    • ಭವಿಷ್ಯದ ಭಾರತ ನಿರ್ಮಾಣಕ್ಕೆ ದೀರ್ಘಾವಧಿಯ ಚಿಂತನೆ ಅಗತ್ಯ: ಪ್ರಧಾನಿ ಮೋದಿ
    • Heavy rains trigger floods in MP, West Bengal; thousands evacuated
    • ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ
    • Trump warns Iran of economic pressure; claims US controls key waterways
    Copyright 2026 — ANU News. All rights reserved. Blogsy WordPress Theme