Skip to content
ANU News
ANU News
  • Home
  • Home
ANU News
ANU News
  • Home
  • Home
ಸಿನಿಮಾ

ಭಾರತೀಯ ಸಂಗೀತ ಲೋಕ ಅದ್ಭುತ ಪ್ರತಿಭೆ.. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ ಎಸ್. ಜಾನಕಿ

By ANU News
July 12, 2026 1 Min Read
0

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಅಪಾರ ಪ್ರತಿಭೆಯನ್ನು ಕಳೆದುಕೊಂಡಿದೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ ಅವರು, ತಮ್ಮ ವಿಶಿಷ್ಟ ಧ್ವನಿ ಮತ್ತು ಭಾವಪೂರ್ಣ ಗಾಯನದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದರು.

ಈ ವರ್ಷದ ಜನವರಿಯಲ್ಲಿ ಪುತ್ರ ಮುರಳಿ ಕೃಷ್ಣ ನಿಧನ ಹೊಂದಿದ ಬಳಿಕ ಜಾನಕಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇದೀಗ ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿದ ಎಸ್. ಜಾನಕಿ, ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಅವರ ಸ್ಪಷ್ಟ ಕನ್ನಡ ಉಚ್ಚಾರಣೆ ಮತ್ತು ಭಾವಪೂರ್ಣ ಗಾಯನ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದೆ.

70 ಮತ್ತು 80ರ ದಶಕದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡಿದ ಅನೇಕ ಗೀತೆಗಳು ಇಂದಿಗೂ ಸದಾಬಹಾರವಾಗಿವೆ. ಪಾತ್ರಕ್ಕೆ ತಕ್ಕಂತೆ ಧ್ವನಿಯನ್ನು ಬದಲಾಯಿಸುವ ಅಪರೂಪದ ಪ್ರತಿಭೆ ಅವರ ಗಾಯನದ ವಿಶೇಷವಾಗಿತ್ತು.

ಅವರಿಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಲೈಮಾಮಣಿ, ಗೌರವ ಡಾಕ್ಟರೇಟ್ ಹಾಗೂ 2013ರ ಪದ್ಮಭೂಷಣ ಸೇರಿದಂತೆ ಅನೇಕ ಗೌರವಗಳು ಲಭಿಸಿದ್ದವು.

2008ರಿಂದ ಮೈಸೂರಿನಲ್ಲಿ ನೆಲೆಸಿದ್ದ ಜಾನಕಿ ಅವರು, ಮೈಸೂರಿನಲ್ಲೇ ಜೀವನದ ಕೊನೆಯ ದಿನಗಳನ್ನು ಕಳೆದರು. 2018ರಲ್ಲಿ ತಮ್ಮ ಅಂತಿಮ ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡಿದ್ದ ಅವರು, ಬಳಿಕ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸದೆ ಸರಳ ಜೀವನ ನಡೆಸುತ್ತಿದ್ದರು.

Author

ANU News

Follow Me
Other Articles
Previous

Veteran Singer S. Janaki Passes Away at 88; Music World Mourns the Loss

Next

Indian music world is a great talent.. S. Janaki, who sang more than 48 thousand songs in more than 20 languages

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Don’t Expect BJP’s “Ji Huzoor” Culture From Me’: B.K. Hariprasad Hits Back
    • ‘ಜೀ ಹುಜೂರು’ ಸಂಸ್ಕೃತಿ ನನ್ನಿಂದ ನಿರೀಕ್ಷಿಸುವುದು ಮೂರ್ಖತನ’; ಬಿಜೆಪಿ ವಿರುದ್ಧ ಹರಿಪ್ರಸಾದ್ ಟ್ವೀಟಾಸ್ತ್ರ
    • Congress Holds Cycle Rally Over NEET Paper Leak, Demands Dharmendra Pradhan’s Resignation
    • ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ; ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಸೈಕಲ್ ಜಾಥಾ
    • ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ UPSC ನೇರ ನೇಮಕಾತಿ; ಜುಲೈ 31ರವರೆಗೆ ಅರ್ಜಿ
    Copyright 2026 — ANU News. All rights reserved. Blogsy WordPress Theme