Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

2 ಲಕ್ಷ ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೇರಿಕೆಗೆ ಕೇಂದ್ರದ ಅನುಮೋದನೆ

By ANU News
July 25, 2026 2 Min Read
0

ನವದೆಹಲಿ: ದೇಶಾದ್ಯಂತ ಮಕ್ಕಳ ಪೌಷ್ಠಿಕತೆ, ಆರಂಭಿಕ ಶಿಕ್ಷಣ ಹಾಗೂ ತಾಯಿ–ಮಕ್ಕಳ ಆರೈಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಿಷನ್ ಸಾಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಯೋಜನೆಯಡಿ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ‘ಸಕ್ಷಮ್ ಅಂಗನವಾಡಿ’ಗಳಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಲೋಕಸಭೆಗೆ ಲಿಖಿತ ಉತ್ತರ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, ಅಂಗನವಾಡಿ ಸೇವೆಗಳು, ಪೋಷಣ್ ಅಭಿಯಾನ ಹಾಗೂ ಹದಿಹರೆಯದ ಬಾಲಕಿಯರ ಯೋಜನೆಗಳನ್ನು ಏಕೀಕೃತಗೊಳಿಸಿ ಅಪೌಷ್ಟಿಕತೆಯನ್ನು ತಡೆಗಟ್ಟುವ ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೇಲ್ದರ್ಜೆಗೊಳ್ಳುವ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಇಡಿ ಪರದೆಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪೋಷಣ್ ವಾಟಿಕಾ (ಪೌಷ್ಟಿಕ ಉದ್ಯಾನ), ಆರಂಭಿಕ ಬಾಲ್ಯ ಶಿಕ್ಷಣಕ್ಕೆ ಅಗತ್ಯ ಕಲಿಕಾ ಸಾಮಗ್ರಿಗಳು ಹಾಗೂ ಮಕ್ಕಳ ಸ್ನೇಹಿ ಕಲಿಕಾ ವಾತಾವರಣ ಕಲ್ಪಿಸಲಾಗುತ್ತದೆ.

ಈ ಯೋಜನೆಯು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಹದಿಹರೆಯದ ಬಾಲಕಿಯರನ್ನು ಒಳಗೊಂಡಿದ್ದು, ಮಹತ್ವಾಕಾಂಕ್ಷೆಯ ಜಿಲ್ಲೆಗಳು ಹಾಗೂ ಈಶಾನ್ಯ ರಾಜ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚುವರಿಯಾಗಿ ಟೇಕ್ ಹೋಮ್ ರೇಷನ್ (THR) ವಿತರಿಸುವ ವ್ಯವಸ್ಥೆಯೂ ಮುಂದುವರಿಯಲಿದೆ.

ಕಾರ್ಯಕ್ರಮದ ಅನುಷ್ಠಾನವನ್ನು ಪೋಷಣ್ ಟ್ರ್ಯಾಕರ್ ಮೂಲಕ ಡಿಜಿಟಲ್ ರೀತಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ದೇಶದಾದ್ಯಂತ ಅಂಗನವಾಡಿ ಕೇಂದ್ರಗಳು, ಸಿಬ್ಬಂದಿ ಹಾಗೂ ಫಲಾನುಭವಿಗಳ ಮಾಹಿತಿಯನ್ನು ನೈಜ ಸಮಯದಲ್ಲಿ ಪರಿಶೀಲಿಸಲು ಈ ವ್ಯವಸ್ಥೆ ನೆರವಾಗಲಿದೆ.

ಅಪೌಷ್ಟಿಕತೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು ಜಂಟಿಯಾಗಿ ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳ ಗುರುತಿಸುವಿಕೆ ಮತ್ತು ಚಿಕಿತ್ಸೆಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿವೆ.

ಇದರ ಜೊತೆಗೆ, ಪೋಷಣ್ ಮಾಹ್ ಮತ್ತು ಪೋಷಣ್ ಪಖ್ವಾಡಾ ಅಭಿಯಾನಗಳ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಹಾಗೂ ಪೌಷ್ಟಿಕಾಂಶದ ಬಗ್ಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ನೀತಿ ಆಯೋಗದ 2025ರ ಫಲಿತಾಂಶ ಆಧಾರಿತ ಮೌಲ್ಯಮಾಪನದ ಪ್ರಕಾರ, ಮಿಷನ್ ಪೋಷಣ್ 2.0 ಉತ್ತಮ ಫಲಿತಾಂಶ ನೀಡಿದ್ದು, 6 ರಿಂದ 59 ತಿಂಗಳ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇ. 8.5ರಷ್ಟು ಕಡಿಮೆಯಾಗಿದೆ. ಕಬ್ಬಿಣ–ಫೋಲಿಕ್ ಆಮ್ಲ ಪೂರಕ ಆಹಾರ, ಬಲವರ್ಧಿತ ಪೌಷ್ಟಿಕ ಆಹಾರ ಹಾಗೂ ಸುಧಾರಿತ ಪೌಷ್ಟಿಕ ಸೇವೆಗಳ ಪರಿಣಾಮವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Author

ANU News

Follow Me
Other Articles
Previous

Centre approves upgrade of 2 lakh Anganwadi centres under Mission Poshan 2.0

Next

Engineering Services Main 2026 results out; UPSC asks shortlisted candidates to update details

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Pradhan’s resignation not enough, CJP presses Centre with fresh demands
    • ಪ್ರಧಾನ್ ರಾಜೀನಾಮೆ ಸಾಕಾಗಲ್ಲ, ಇನ್ನೆರಡು ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಸಿಜೆಪಿ ಗಡುವು
    • Pradhan quits as Education Minister, says students’ future must come first
    • ನೀಟ್ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರ್ಧಾರ ಎಂದ ನಾಯಕ
    • ನೀಟ್ ವಿವಾದದ ನಡುವೆ ಪ್ರಧಾನಿ ಮೋದಿ ಅವರಿಂದ ಮತ್ತೊಂದು ಮಧ್ಯರಾತ್ರಿ ವಿಡಿಯೋ
    Copyright 2026 — ANU News. All rights reserved. Blogsy WordPress Theme