Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮುಂದಿನ ಆಗಸ್ಟ್ ಒಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ

By ANU News
August 15, 2026 1 Min Read
0

ಮಂಡ್ಯ: ಮುಂದಿನ ವರ್ಷದ ಆಗಸ್ಟ್ ಒಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವುದು ಸರ್ಕಾರದ ಗುರಿಯಾಗಿದೆ ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೇಕೆದಾಟು ಯೋಜನೆಗೆ ವೇಗ ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಯೋಜನೆಯ ಪರಿಷ್ಕೃತ ಡಿಪಿಆರ್‌ ಕಳುಹಿಸಲಾಗಿದೆ. ಯೋಜನೆಗೆ 12,500 ಎಕರೆ ಜಮೀನು ಅಗತ್ಯವಿದ್ದು, ಈಗಾಗಲೇ 20 ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದರು.

ಕಾವೇರಿ ಕೊಳ್ಳದ ಜನರ ಹಿತ ಕಾಯಲು ಮೇಕೆದಾಟು ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಕಾವೇರಿ ನೀರು ವಿವಾದಕ್ಕೆ ಇದು ಶಾಶ್ವತ ಪರಿಹಾರವಾಗಲಿದೆ. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಹಾಗೂ ಕಾನೂನು ಪ್ರಕ್ರಿಯೆಗಳನ್ನು ವೇಗಗೊಳಿಸಲಾಗಿದ್ದು, ದೆಹಲಿಯಲ್ಲಿ ಪ್ರತಿನಿತ್ಯ ಅನುಸರಣೆ ನಡೆಸಲು ಇಬ್ಬರು ನೀರಾವರಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಸಚಿವರು, “ತಮಿಳುನಾಡಿಗೆ ನೀರು ಬಿಟ್ಟಿಲ್ಲ. ನನ್ನ ಮೇಲೆ ನಂಬಿಕೆ ಇಡಿ” ಎಂದು ಸ್ಪಷ್ಟಪಡಿಸಿದರು. ಜೂನ್ ಮತ್ತು ಜುಲೈನಲ್ಲಿ ನೀರು ಬಿಡಲಾಗಿಲ್ಲ. ಪ್ರಸ್ತುತ ನೀರು ಹರಿವಿನ ಕುರಿತು ತಾಂತ್ರಿಕ ಕಾರಣಗಳಿಂದ ನಿಖರ ಅಂಕಿಅಂಶಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅನಗತ್ಯ ಗೊಂದಲ ಸೃಷ್ಟಿಸಿ ತಮಿಳುನಾಡಿಗೆ ಅನುಕೂಲ ಮಾಡಿಕೊಡುವುದು ಬೇಡ ಎಂದರು.

ಆಗಸ್ಟ್ ಅಂತ್ಯದವರೆಗೂ ಮಳೆಯ ನಿರೀಕ್ಷೆಯಿದ್ದು, ಸೆಪ್ಟೆಂಬರ್‌ನಲ್ಲಿ ಕೆಆರ್‌ಎಸ್ ಭರ್ತಿಯಾಗುವ ವಿಶ್ವಾಸವಿದೆ. ಕಳೆದ 20 ದಿನಗಳಿಂದ ಜಲಾಶಯದಿಂದ ಕೆರೆ-ಕಟ್ಟೆ ಹಾಗೂ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದಿಂದಲೂ ನಾಲೆಗಳಿಗೆ ನೀರು ಬಿಡಲು ಸೂಚಿಸಲಾಗಿದೆ. ಅಲ್ಪಾವಧಿ ಬೆಳೆಗಳಿಗೆ ನೀರು ಬಿಡುವ ಕುರಿತು ಬುಧವಾರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಂಡ್ಯದಲ್ಲಿ ಕೃಷಿ ಮತ್ತು ಹೈನುಗಾರಿಕೆ ಕಾಲೇಜು ಸ್ಥಾಪಿಸಲಾಗುವುದು. ರಾಜ್ಯದ ಮೊದಲ ಹೈನುಗಾರಿಕೆ ಕಾಲೇಜು ಮಂಡ್ಯದ ಸಾತನೂರಿನಲ್ಲಿ ನಿರ್ಮಾಣವಾಗಲಿದ್ದು, ವಿದ್ಯಾರ್ಥಿಗಳು ಪದವಿ ಪಡೆದ ಬಳಿಕ ಸ್ವತಂತ್ರ ಉದ್ಯಮಿಗಳಾಗುವಂತೆ ತರಬೇತಿ ನೀಡಲಾಗುವುದು ಎಂದು ಸಚಿವರು ಹೇಳಿದರು.

ಮಂಡ್ಯ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಕಲ್ಪಿಸುವ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ನೇರವಾಗಿ ತರಬೇಕು. ಪ್ರತಿಭಟನೆ ನಡೆಸುವ ಬದಲು ಸಲಹೆಗಳನ್ನು ನೀಡುವಂತೆ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಕಾವೇರಿ ಅಚ್ಚುಕಟ್ಟು ಪ್ರದೇಶದವರಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Author

ANU News

Follow Me
Other Articles
Previous

KSRTC employees get ₹170 crore salary dues relief ahead of Varamahalakshmi

Next

Mekedatu project gets push; Karnataka targets foundation stone by August 2027

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಚಾಮರಾಜನಗರದಲ್ಲಿ ಅರಣ್ಯ ಸಿಬ್ಬಂದಿ–ಬೇಟೆಗಾರರ ನಡುವೆ ಗುಂಡಿನ ಚಕಮಕಿ; ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
    • Mekedatu project gets push; Karnataka targets foundation stone by August 2027
    • ಮುಂದಿನ ಆಗಸ್ಟ್ ಒಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ
    • KSRTC employees get ₹170 crore salary dues relief ahead of Varamahalakshmi
    • 72,000 govt jobs, 1 lakh new jobs, ₹26,000 crore Bengaluru corridor: K’taka CM big announcements
    Copyright 2026 — ANU News. All rights reserved. Blogsy WordPress Theme