Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶಪ್ರಾದೇಶಿಕ

ತಮಿಳುನಾಡಿನಲ್ಲಿ ಟಿವಿಕೆ ಯುಗಾರಂಭ; ‘ದಳಪತಿ’ ವಿಜಯ್ ಅದ್ಭುತ ರಾಜಕೀಯ ಪಯಣ

By ANU News
May 5, 2026 1 Min Read
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ‘ದಳಪತಿ’ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಐತಿಹಾಸಿಕ ಸಾಧನೆ ಮಾಡಿದ್ದು, ಅಧಿಕಾರದ ಗದ್ದುಗೆಗೆ ಹತ್ತಿರವಾಗಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದಂತಾಗಿದೆ.

ಕೇವಲ ಎರಡು ವರ್ಷಗಳ ಹಿಂದೆ 2024ರ ಫೆಬ್ರವರಿಯಲ್ಲಿ ಸ್ಥಾಪನೆಯಾದ ಈ ಹೊಸ ಪಕ್ಷಕ್ಕೆ ಜನರಿಂದ ಭಾರೀ ಬೆಂಬಲ ವ್ಯಕ್ತವಾಗಿದ್ದು, ಬಹುಮತದ ಹತ್ತಿರ ತಲುಪಿರುವುದು ಅಚ್ಚರಿ ಮೂಡಿಸಿದೆ. ಹೊಸ ಪಕ್ಷಗಳ ಪ್ರಯತ್ನಗಳು ಸಾಮಾನ್ಯವಾಗಿ ವಿಫಲವಾಗುತ್ತವೆ ಎಂಬ ಅಂದಾಜುಗಳನ್ನು ಮೀರಿಸಿ, ಟಿವಿಕೆ ತನ್ನದೇ ಶಕ್ತಿಯಿಂದ ರಾಜಕೀಯದಲ್ಲಿ ಬಲವಾದ ನೆಲೆ ನಿರ್ಮಿಸಿದೆ.

ಇದೇ ವೇಳೆ, ಕಮಲ್ ಹಾಸನ್ ಅವರ ಪ್ರಯತ್ನಗಳು ನಿರೀಕ್ಷಿತ ಮಟ್ಟದ ಯಶಸ್ಸು ತರುವಲ್ಲಿ ವಿಫಲವಾಗಿರುವುದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ನಾಜೂಕಾಗಿಯೇ ಪಕ್ಷವನ್ನು ಸಂಘಟಿಸಿದ, ವಿಜಯ್ ಅಭಿಮಾನಿಗಳ ಮನಗೆದ್ದರು. ಸಿನಿಲೋಕದ ಅಭಿಮಾನವನ್ನು ಮತಗಳನ್ನಾಗಿ ಪರಿವರ್ತಿಸುವಲ್ಲೂ ವಿಜಯ್ ಯಶಸ್ವಿಯಾದರು.

ವಿಜಯ್ ಅವರ ರಾಜಕೀಯ ಪಯಣವು ಅಚಾನಕ್ ಆರಂಭವಾದದ್ದಲ್ಲ. 2009ರಲ್ಲೇ ‘ವಿಜಯ್ ಮಕ್ಕಳ್ ಇಯಕ್ಕಮ್’ ಮೂಲಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡ ಅವರು, ಅಭಿಮಾನಿಗಳ ಜಾಲವನ್ನು ರಾಜ್ಯದಾದ್ಯಂತ ಬಲಪಡಿಸಿದರು. ವಿಪತ್ತು ಪರಿಹಾರ, ಶಿಕ್ಷಣ ಸಹಾಯ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸ ಗಳಿಸಿದರು. ನಂತರ ತಮ್ಮ ಸಿನಿಮಾಗಳಲ್ಲೂ ಸಾಮಾಜಿಕ-ರಾಜಕೀಯ ವಿಷಯಗಳನ್ನು ಒತ್ತಿ ಹೇಳುವ ಮೂಲಕ ರಾಜಕೀಯ ಪ್ರವೇಶದ ಸುಳಿವು ನೀಡಿದರು.

2024ರಲ್ಲಿ ಅಧಿಕೃತವಾಗಿ ಟಿವಿಕೆ ಪಕ್ಷ ಸ್ಥಾಪಿಸಿದ ವಿಜಯ್, ತಮ್ಮ ಮೂರು ದಶಕದ ಸಿನಿ ವೃತ್ತಿಯ ಜನಪ್ರಿಯತೆಯನ್ನು ರಾಜಕೀಯಕ್ಕೆ ಬಳಸಿಕೊಂಡರು. 2025ರ ಕರೂರು ಘಟನೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರೂ, ತಮ್ಮ ದಿಟ್ಟ ನಿಲುವಿನಿಂದ ಮುಂದುವರಿದು ಈಗ ಸರ್ಕಾರ ರಚನೆ ಹಂತ ತಲುಪಿದ್ದಾರೆ.

Author

ANU News

Follow Me
Other Articles
Previous

BJP Seals Hat-Trick in Assam; Himanta Biswa Sarma Set to Return as CM

Next

‘TVK Era’ Begins in Tamil Nadu; ‘Dalapathy’ Vijay Scripts Stunning Political Rise

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM Modi urges secretaries to think beyond today, plan for India’s future
    • ಭವಿಷ್ಯದ ಭಾರತ ನಿರ್ಮಾಣಕ್ಕೆ ದೀರ್ಘಾವಧಿಯ ಚಿಂತನೆ ಅಗತ್ಯ: ಪ್ರಧಾನಿ ಮೋದಿ
    • Heavy rains trigger floods in MP, West Bengal; thousands evacuated
    • ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ
    • Trump warns Iran of economic pressure; claims US controls key waterways
    Copyright 2026 — ANU News. All rights reserved. Blogsy WordPress Theme