Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಬಿಗ್ ಬಾಸ್ ಕನ್ನಡ ಸೀಸನ್ 13: ಗ್ರ್ಯಾಂಡ್ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು ಇವರೇ..!

By ANU News
September 7, 2026 2 Min Read
0

ಬೆಂಗಳೂರು: ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಚಾಲನೆ ಸಿಕ್ಕಿದ್ದು, ಈ ಬಾರಿ ಬರೋಬ್ಬರಿ 16 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆ, ಸಿನಿಮಾ, ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಯ ಆಟಕ್ಕೆ ಕಾಲಿಟ್ಟಿದ್ದಾರೆ.

ದೊಡ್ಮನೆಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು ಯಾರ್ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.

ಓಂ ಪ್ರಕಾಶ್ ರಾವ್: ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 4’ರಲ್ಲಿ ಕಾಣಿಸಿಕೊಂಡಿದ್ದರು. ಅನಾರೋಗ್ಯದ ಕಾರಣದಿಂದ ಶೋನಿಂದ ಹೊರಬಂದಿದ್ದ ಅವರು ಇದೀಗ ಮತ್ತೆ ದೊಡ್ಮನೆಗೆ ಮರಳಿದ್ದಾರೆ.

ಸಂಗೀತಾ ಭಟ್: ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ಸಂಗೀತಾ ಭಟ್, ಒಂದು ಹಂತದಲ್ಲಿ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದರು. ಇದೀಗ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಪ್ರಥಮಾ ಪ್ರಸಾದ್: ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿಯಾಗಿರುವ ಪ್ರಥಮಾ ಪ್ರಸಾದ್ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಯಶಸ್: ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಕಥಾನಾಯಕ ಸೂರಜ್ ಅವರ ಸಹೋದರನ ಪಾತ್ರದಲ್ಲಿ ಯಶಸ್ ನಟಿಸಿದ್ದರು. ವೃತ್ತಿಯಲ್ಲಿ ಇವರು ಇಂಜಿನಿಯರ್.

ವೈಷ್ಣವಿ: ‘ಮಿಥುನ ರಾಶಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡಿರುವ ವೈಷ್ಣವಿ, ತಮ್ಮ ಬೋಲ್ಡ್ ಮಾತುಗಳಿಂದ ಗಮನ ಸೆಳೆದಿದ್ದಾರೆ.

ಅವಿನಾಶ್ ಶತಮರ್ಷನ್: 2018ರಲ್ಲಿ ಬಿಡುಗಡೆಯಾದ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸೇರಿದಂತೆ ಸಿನಿಮಾಗಳಲ್ಲಿಅವಿನಾಶ್ ಶತಮರ್ಷನ್ ನಟಿಸಿದ್ದಾರೆ.

ಕಾವ್ಯಾ ಗೌಡ: ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರದ ಮೂಲಕ ಕಾವ್ಯಾ ಗೌಡ ಗಮನ ಸೆಳೆದಿದ್ದರು.

ಗಗನ್ ಚಿನ್ನಪ್ಪ: ‘ಮಂಗಳ ಗೌರಿ ಮದುವೆ’ ಹಾಗೂ ‘ಸೀತಾ ರಾಮ ಕಲ್ಯಾಣ’ ಧಾರಾವಾಹಿಗಳಲ್ಲಿ ನಟಿಸಿ ಗಗನ್ ಚಿನ್ನಪ್ಪ ಜನಪ್ರಿಯತೆ ಗಳಿದ್ದಾರೆ.

ಆಸಿಯಾ ಫಿರ್ದೋಸ್: ‘ಕನ್ಯಾಕುಮಾರಿ’ ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗಳಲ್ಲಿ ನಟಿಸಿರುವ ಆಸಿಯಾ ಫಿರ್ದೋಸ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ಸೌಂದರ್ಯಾ ಶೆಟ್ಟಿ: ಮಸ್ಕತ್‌ನಲ್ಲಿ ಹುಟ್ಟಿ ಮಂಗಳೂರಿನಲ್ಲಿ ಬೆಳೆದ ಸೌಂದರ್ಯಾ ಶೆಟ್ಟಿ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ‘ಸ್ಪಿಟ್ಸ್‌ವಿಲ್ಲಾ’ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದ ಅವರು ಇದೀಗ ಕನ್ನಡದ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

ಜಗದೀಶ್: ಸೋಷಿಯಲ್ ಮೀಡಿಯಾದಲ್ಲಿ ‘ಜಗ್ಗ ಮಮ್ಮಿ’ ಎಂದೇ ಜನಪ್ರಿಯರಾಗಿರುವ ಜಗದೀಶ್, ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಮೈಸೂರಿನ ಮಹದೇವಪುರ ಮೂಲದವರು.

ತಾಂಡವ್ ರಾಮ್: ಹಲವು ವರ್ಷಗಳಿಂದ ಕಿರುತೆರೆಯಲ್ಲಿ ನಟಿಸುತ್ತಿರುವ ತಾಂಡವ್ ರಾಮ್ ಮೂಲತಃ ಹಾಸನದವರು. ಶಿಕ್ಷಣವನ್ನೂ ಹಾಸನದಲ್ಲೇ ಪೂರ್ಣಗೊಳಿಸಿರುವ ಅವರು ಮನೆಯಲ್ಲೇ ಗರಡಿಮನೆ ಹೊಂದಿದ್ದಾರೆ.

ಕಿರಣ್ ಶಾಸ್ತ್ರಿ: ಉತ್ತರ ಕರ್ನಾಟಕದ ಕಿರಣ್ ಶಾಸ್ತ್ರಿ ‘ಅಗ್ನಿಪರೀಕ್ಷೆ’ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದ್ದರು. ಮಾತು ಮತ್ತು ಆಟದ ಮೂಲಕ ಅವರು ಜನರ ಗಮನ ಸೆಳೆದಿದ್ದಾರೆ.

ಧನುಷ್: ವಿವಿಧ ದೇಶಗಳಿಗೆ ಸೈಕಲ್‌ನಲ್ಲಿ ಪ್ರಯಾಣಿಸಿ ಗಿನ್ನೆಸ್ ದಾಖಲೆ ಬರೆದಿರುವುದಾಗಿ ಹೇಳಿಕೊಂಡಿದ್ದ ಧನುಷ್, ‘ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಲಿಖಿತ್ ಗೊಂದಿ: ‘ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಲಿಖಿತ್ ಗೊಂದಿ ಇದೀಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಅವರ ತಂದೆಯೂ ‘ಅಗ್ನಿಪರೀಕ್ಷೆ’ಯಲ್ಲಿ ಭಾಗವಹಿಸಿದ್ದರು.

ಮಾಡರ್ನ್ ಮಹಾಕವಿ ಮಂಜು: ‘ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿದ್ದ ಮಂಜು ಕೂಡ ದೊಡ್ಮನೆ ಪ್ರವೇಶಿಸಿದ್ದಾರೆ. ಜಡ್ಜ್‌ಗಳ ಆಯ್ಕೆ ಮೂಲಕ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.

Author

ANU News

Follow Me
Other Articles
Previous

Delhi building collapse: Death toll rises to 3, over 40 feared trapped

Next

Bigg Boss Kannada Season 13: Meet the 16 contestants who made a grand entry into the house

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಸಮವಸ್ತ್ರದ ಹಿಂದೆ ಮಿಡಿಯುವ ಮಾನವೀಯ ಹೃದಯ; ಪೊಲೀಸ್ ಇಲಾಖೆಯ ‘ಸುವರ್ಣ’ ಯುವಜನರ ಪಾಲಿಕಗೆ ಆತ್ಮೀಯ ‘ಶಿಕ್ಷಕಿ’.
    • Bigg Boss Kannada Season 13: Meet the 16 contestants who made a grand entry into the house
    • ಬಿಗ್ ಬಾಸ್ ಕನ್ನಡ ಸೀಸನ್ 13: ಗ್ರ್ಯಾಂಡ್ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು ಇವರೇ..!
    • Delhi building collapse: Death toll rises to 3, over 40 feared trapped
    • ದೆಹಲಿಯಲ್ಲಿ ಕುಸಿತ ಕಟ್ಟಡ: ಸಾವಿನ ಸಂಖ್ಯೆ 3ಕ್ಕೆ ಏರಿಕೆ
    Copyright 2026 — ANU News. All rights reserved. Blogsy WordPress Theme