Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಧಾರ್ಮಿಕಪ್ರಾದೇಶಿಕ

ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

By ANU News
September 13, 2026 1 Min Read
0

ಮಂಗಳೂರು : ಬಂದರು ನಗರದ ಮಂಗಳೂರಿನ ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ೭೯ ನೇ ೭೯ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹವನ್ನು ಭವ್ಯ ಮೆರವಣಿಗೆಯಲ್ಲಿ ತರಲಾಯಿತು.

Photo: Manju Neereshwalya, Mangaluru

ಐದು ದಿನಗಳ ಕಾಲ ಗಣೇಶೋತ್ಸವ ಕೈಂಕರ್ಯವು ವಿಜೃಂಭಣೆಯಿಂದ ನಡೆಯಲಿದ್ದು ವಿವಿಧ ಧಾರ್ಮಿಕ , ಸಾಂಸ್ಕ್ರತಿಕ ಕಾರ್ಯಕ್ರಮ ಗಮನಸೆಳೆಯಲಿದೆ.

ದಿವಂಗತ ಮೋಹನ್ ರಾವ್ ರವರ ಮನೆಯಲ್ಲಿ ವಿಗ್ರಹ ರಚನೆಗೊಂಡಿದ್ದು ಅಲ್ಲಿಂದ ಮೆರವಣಿಗೆ ಮುಖೇನ ಸಂಘನಿಕೇತನಕ್ಕೆ ತರಲಾಯಿತು. ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಸ್ವಯಂಸೇವಕರು ಭುಜ ಸೇವೆ ಮೂಲಕ ಮೃತಿಕ ಮೂರ್ತಿಯನ್ನು ಮೆರವಣಿಗೆಯಲ್ಲಿ ಸಂಘನಿಕೇತನಕ್ಕೆ ಕೊಂಡೊಯ್ದ ಸನ್ನಿವೇಶ ಅನನ್ಯ ಭಕ್ತಿ ವೈಭವಕ್ಕೆ ಸಾಕ್ಷಿಯಾಯಿತು.

Photo: Manju Neereshwalya, Mangaluru

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಸಂಘಚಾಲಕ್ ಡಾ.ಸತೀಶ್ ರಾವ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರಕರಾದ ಶ್ರೀ ಸುರೇಶ್ ಜಿ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದರು . ಕೇಶವ ಸ್ಮ್ರತಿ ಸಂವರ್ಧನ ಟ್ರಸ್ಟ್ ನ ಉಪಾಧ್ಯಕ್ಷ ಶ್ರೀ ಕೆ . ರಘುವೀರ್ ಕಾಮತ್, ಕಾರ್ಯದರ್ಶಿ ಶ್ರೀ ಗಜಾನನ ಪೈ , ಸೇವಾ ಭಾರತಿ ಪ್ರಮುಖ್ ಶ್ರೀ ವಿನೋದ್ ಶೆಣೈ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಆನಂದ ಪಾಂಗಳ, ಶ್ರೀ ಕೆ. ಪದ್ಮನಾಭ, ಸ್ಮಿತಾ ಎಂ , ಪದಾಧಿಕಾರಿಗಳಾದ ಶ್ರೀ ಜಿ.ಸುರೇಶ್ ಕಾಮತ್, ಶ್ರೀ ರಂಗನಾಥ್, ನಂದನ್ ಮಲ್ಯ , ಜೀವನರಾಜ್ ಶೆಣೈ , ಗಣೇಶ್ ಪ್ರಸಾದ್ ಹಾಗೂ ಪೂರ್ಣಿಮಾ ಶೆಣೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾಲ್ಯ

Author

ANU News

Follow Me
Other Articles
Previous

‘ಬ್ರಿಕ್ಸ್’ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿಯಾಗಲಿ: ಮೋದಿ

Next

Mangaluru’s Sanghaniketan marks 79th Ganeshotsava with grand idol procession

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PNG ಸಂಪರ್ಕ ವಿಸ್ತರಣೆಗೆ ಹೊಸ ಪ್ರೋತ್ಸಾಹ ಯೋಜನೆ
    • New PNG incentive scheme aims to make piped cooking gas cheaper, expand household connections
    • ಜಾಗತಿಕ ಲಸಿಕೆ ನಾಯಕನಾಗಿ ಭಾರತ: 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಕೆ
    • India emerges as global vaccine leader, can drive next-gen health security: Jitendra Singh
    • India must own entire lab-grown diamond value chain, says Amit Shah
    Copyright 2026 — ANU News. All rights reserved. Blogsy WordPress Theme