Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಇಂಧನ ದರ ಏರಿಕೆ ಮೂಲಕ ₹43 ಲಕ್ಷ ಕೋಟಿ ಸುಲಿಗೆ: ಮೋದಿ ಸರ್ಕಾರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

By ANU News
May 16, 2026 1 Min Read
0

ನವದೆಹಲಿ: ಕಳೆದ 11 ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳ ಮೂಲಕ ಮೋದಿ ಸರ್ಕಾರ ₹43 ಲಕ್ಷ ಕೋಟಿ ಸಂಗ್ರಹಿಸಿದ್ದು, ಇದು ಜನರ ಮೇಲಿನ “ತೆರಿಗೆ ಸುಲಿಗೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, 2014ರಲ್ಲಿ ಪೆಟ್ರೋಲ್ ಲೀಟರ್‌ಗೆ ₹71.41 ಮತ್ತು ಡೀಸೆಲ್ ₹56.71 ಇತ್ತು. ಆದರೆ ಇಂದು ದೆಹಲಿಯಲ್ಲಿ ಪೆಟ್ರೋಲ್ ₹102.92 ಹಾಗೂ ಡೀಸೆಲ್ ₹90.99ಕ್ಕೆ ತಲುಪಿದೆ ಎಂದು ಹೇಳಿದರು. 2014ರ ಕಚ್ಚಾ ತೈಲ ದರಗಳಿಗಿಂತ ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗಿರುವುದು “ಬಿಜೆಪಿಯ ಲೂಟಿ” ಎಂದು ಟೀಕಿಸಿದರು.

2014ರಿಂದ 2025ರವರೆಗೆ ಪೆಟ್ರೋಲ್ ಮೇಲೆ ಸರಾಸರಿ ₹21.60 ಹಾಗೂ ಡೀಸೆಲ್ ಮೇಲೆ ₹12.80 ಅಬಕಾರಿ ಸುಂಕ ವಿಧಿಸಲಾಗಿದೆ. ಇದರಿಂದ ಸಾಮಾನ್ಯ ಜನರು ಇಂಧನ ಬೆಲೆಯ ದೊಡ್ಡ ಭಾಗವನ್ನು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ ಎಂದು ಹೇಳಿದರು.

ಮೋದಿ ಸರ್ಕಾರ 21 ಬಾರಿ ಅಬಕಾರಿ ಸುಂಕ ಪರಿಷ್ಕರಿಸಿದ್ದು, ಅದರಲ್ಲಿ 12 ಬಾರಿ ಹೆಚ್ಚಳ ಮಾಡಿದೆ. ಚುನಾವಣೆಗಳು ಮುಗಿದ ತಕ್ಷಣ ಇಂಧನ ದರ ಏರಿಸುವುದು ಬಿಜೆಪಿ ಸರ್ಕಾರದ “ಯೋಜಿತ ಕ್ರಮ” ಎಂದು ಸುರ್ಜೇವಾಲ ಆರೋಪಿಸಿದರು.

ಇದೀಗ ಪೆಟ್ರೋಲ್, ಡೀಸೆಲ್ ಜೊತೆಗೆ ಸಿಎನ್‌ಜಿ ದರವೂ ಪ್ರತಿ ಕೆಜಿಗೆ ₹2 ಏರಿಕೆಯಾಗಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 2014ರಲ್ಲಿ ₹414 ಇದ್ದದ್ದು, 2026ರಲ್ಲಿ ₹915.5ಕ್ಕೆ ಏರಿದೆ. ವಾಣಿಜ್ಯ ಎಲ್‌ಪಿಜಿ ದರವೂ ಭಾರೀ ಏರಿಕೆ ಕಂಡಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಮೇ 1ರಿಂದ ₹21.50 ಏರಿಕೆಯಾಗಿ ₹340ಕ್ಕೆ ತಲುಪಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Author

ANU News

Follow Me
Other Articles
Previous

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ

Next

ರಾಜ್ಯದ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್ ಘೋಷಣೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಸಕ್ಕರೆ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
    • Sugar prices spark political row: Kharge questions Centre, govt rejects ethanol link
    • 3. Pellet gun case: Priyank Kharge questions delay in filing FIR
    • ಪೆಲೆಟ್ ಗನ್ ಪ್ರಕರಣ: ರಾಹುಲ್ 8 ಗಂಟೆ ಧರಣಿ ದುರದೃಷ್ಟಕರ: ಪ್ರಿಯಾಂಕ್ ಖರ್ಗೆ
    • ‘Phoenix’ film row: Om Prakash Rao accused of not returning ₹3.85 crore
    Copyright 2026 — ANU News. All rights reserved. Blogsy WordPress Theme