Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮಂಗಳೂರು ಜೈಲು ಜಾಮರ್ ವಿವಾದ: ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ತೆರೆ, ತಾಂತ್ರಿಕ ಪರಿಹಾರಕ್ಕೆ ಒತ್ತು ನೀಡಲು ವಕೀಲ ಮನೋರಾಜ್ ರಾಜೀವ ಅಗ್ರಹ

By Anu News
September 16, 2026 3 Min Read
0

ಮಂಗಳೂರು: ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ಸಿಗ್ನಲ್ ಜಾಮರ್‌ಗೆ ಸಂಬಂಧಿಸಿದ ವಿವಾದವನ್ನು ರಾಜಕೀಯ ಆರೋಪ-ಪ್ರತ್ಯಾರೋಪದ ಬದಲು ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಶೀಲನೆಯ ಮೂಲಕ ಪರಿಹರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗದ ಅಧ್ಯಕ್ಷ, ವಕೀಲ ಮನೋರಾಜ್ ರಾಜೀವ ಪ್ರತಿಪಾದಿಸಿದ್ದಾರೆ .

ಜೈಲು ಜಾಮಾರ್ ವ್ಯವಸ್ಥೆಯಿಂದ ಸಾರ್ವಜನಿಕರು ಪರದಾಡುವಂಟಾಗಿದ್ದಾರೆ, ಆ ವಿಚಾರವನ್ನು ಮುಂದಿಟ್ಟು ಕೆಲವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಕಾನೂನು ತಜ್ಞರೂ ಆದ ಮನೋರಾಜ್ ರಾಜೀವ್ ಬೇಸರ ವ್ಯಕ್ತಪಡಿಸಿದ್ಧತೆ. ಈ ಕುರಿತಂತೆ ಅವರು ಮಂಗಳೂರಿನಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿ ಗಮನಸೆಳೆಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಾಗೃಹದ ಭದ್ರತೆ ಹಾಗೂ ಕಾರಾಗೃಹದೊಳಗೆ ಅನಧಿಕೃತ ಮೊಬೈಲ್ ಫೋನ್ ಬಳಕೆಯನ್ನು ತಡೆಯುವುದು ಅತ್ಯಗತ್ಯ. ಆದರೆ ಕಾರಾಗೃಹದ ಹೊರಭಾಗದಲ್ಲಿರುವ ನ್ಯಾಯಾಲಯಗಳು, ವಕೀಲರು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಕಾನೂನುಬದ್ಧ ಮೊಬೈಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಾರದು ಅಭಿಪ್ರಾಯ ಹಂಚಿಕೊಂಡರು.

ಜಾಮರ್‌ನಿಂದ ಉಂಟಾಗುತ್ತಿರುವ ಸಿಗ್ನಲ್ ವ್ಯತ್ಯಯದ ಕುರಿತು ಮಂಗಳೂರು ಬಾರ್ ಅಸೋಸಿಯೇಷನ್ ಕರ್ನಾಟಕ ಹೈಕೋರ್ಟ್‌ನಲ್ಲಿ W.P. No. 13624/2025 ಅರ್ಜಿ ಸಲ್ಲಿಸಿರುವುದನ್ನು ಅವರು ಉಲ್ಲೇಖಿಸಿದರು. ವಿಚಾರಣೆಯ ಸಂದರ್ಭದಲ್ಲಿ ವೈರ್‌ಲೆಸ್ ಮಾನಿಟರಿಂಗ್ ಆರ್ಗನೈಸೇಶನ್ (WMO) ಈ ವಿಚಾರವನ್ನು ಪರಿಶೀಲಿಸಿದ್ದು, ಜಾಮರ್‌ನ ಸಿಗ್ನಲ್ ಕಾರಾಗೃಹದ ಆವರಣದ ಹೊರಗೂ ವ್ಯಾಪಿಸುತ್ತಿರುವ ಕುರಿತು ತಾಂತ್ರಿಕ ಅಂಶಗಳು ದಾಖಲಾದವು. ನಂತರ Telecommunications Consultants India Limited (TCIL) — ಕೇಂದ್ರ ಸರ್ಕಾರದ ಸಂಪೂರ್ಣ ಮಾಲೀಕತ್ವದ ಸಂಸ್ಥೆ — ಜಾಮರ್‌ನ ತಾಂತ್ರಿಕ ಆಪ್ಟಿಮೈಸೇಶನ್‌ನಲ್ಲಿ ತೊಡಗಿಸಿಕೊಂಡಿತು.

TCIL ನಂತರ ತಿದ್ದುಪಡಿ ಕ್ರಮಗಳನ್ನು ಕೈಗೊಂಡು, ಅದರ ಅನುಸರಣೆಯ ಕುರಿತು ಕೇಂದ್ರ ಸರ್ಕಾರದ ಪರ ವಕೀಲರ ಮೂಲಕ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ ಮತ್ತು ಪ್ರಕರಣವು ಆದೇಶಕ್ಕಾಗಿ ಬಾಕಿಯಿದೆ ಎಂದು ರಾಜೀವ್ ಹೇಳಿದರು. ಕೇಂದ್ರದ ತಾಂತ್ರಿಕ ಸಂಸ್ಥೆಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದರಿಂದ, ಈ ವಿಚಾರವನ್ನು ರಾಜಕೀಯ ವಿವಾದವಾಗಿ ನೋಡುವ ಬದಲು ತಾಂತ್ರಿಕ ಮತ್ತು ನಿಯಂತ್ರಣಾತ್ಮಕ ಕ್ರಮಗಳ ಮೂಲಕ ಪರಿಹರಿಸಬೇಕು ಎಂದರು.

“ಸಿಗ್ನಲ್ ಸಮಸ್ಯೆ ಮುಂದುವರಿದಿದ್ದರೆ, ದೂರಸಂಪರ್ಕ ಇಲಾಖೆ, WMO, TCIL, ಕಾರಾಗೃಹ ಅಧಿಕಾರಿಗಳು ಹಾಗೂ ಸಂಬಂಧಿತ ಟೆಲಿಕಾಂ ಸೇವಾ ಸಂಸ್ಥೆಗಳನ್ನು ಒಳಗೊಂಡ ಜಂಟಿ ತಾಂತ್ರಿಕ ಪರಿಶೀಲನೆ ನಡೆಸಿ, ಸಮಸ್ಯೆಯ ನಿಖರ ಕಾರಣವನ್ನು ಪತ್ತೆಹಚ್ಚಬೇಕು,” ಎಂದು ಅವರು ಹೇಳಿದರು.

ಈ ಪರಿಶೀಲನೆಯಲ್ಲಿ ಜಾಮರ್‌ಗೆ ಅನುಮತಿಸಲಾದ ಕಾರ್ಯಾಚರಣಾ ಮಿತಿಗಳು ಮತ್ತು ವಾಸ್ತವಿಕ ಸಿಗ್ನಲ್ ವ್ಯಾಪ್ತಿ, ಔಟ್‌ಪುಟ್ ಪವರ್, ಫ್ರೀಕ್ವೆನ್ಸಿ ಬ್ಯಾಂಡ್‌ಗಳು, ಆಂಟೆನಾ ಎತ್ತರ ಮತ್ತು ದಿಕ್ಕು ಹಾಗೂ ಕಾರಾಗೃಹದ ಗಡಿ ಮತ್ತು ಹೊರಭಾಗದಲ್ಲಿನ ಸಿಗ್ನಲ್ ಮಟ್ಟವನ್ನು ಪರಿಶೀಲಿಸಬೇಕು. ಜೊತೆಗೆ ಜಿಲ್ಲಾ ನ್ಯಾಯಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿ ಟೆಲಿಕಾಂ ಸೇವಾ ಸಂಸ್ಥೆಯ ಕವರೇಜ್, ಸಿಗ್ನಲ್ ಸಾಮರ್ಥ್ಯ ಹಾಗೂ ನೆಟ್‌ವರ್ಕ್ ಸಾಮರ್ಥ್ಯವನ್ನೂ ಪ್ರತ್ಯೇಕವಾಗಿ ಪರಿಶೀಲಿಸಬೇಕು ಎಂದು ಅವರು ಹೇಳಿದರು.

“ಜಾಮರ್ ಅನುಮತಿಸಲಾದ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದರೆ ಅದನ್ನು ಸರಿಪಡಿಸಬೇಕು. ಟೆಲಿಕಾಂ ಮೂಲಸೌಕರ್ಯದಲ್ಲಿ ಕೊರತೆಯಿದ್ದರೆ ಅದನ್ನು ಬಲಪಡಿಸಬೇಕು. ಕಾರಾಗೃಹದ ಭದ್ರತೆಯಲ್ಲಿ ಕೊರತೆಗಳಿದ್ದರೆ ಅವುಗಳನ್ನು ಸರಿಪಡಿಸಬೇಕು. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆಯೇ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು,” ಎಂದು ರಾಜೀವ್ ಹೇಳಿದರು.

ಕಾರಾಗೃಹದೊಳಗೆ ಅನಧಿಕೃತ ಮೊಬೈಲ್ ಫೋನ್‌ಗಳು ನಿರಂತರವಾಗಿ ಪತ್ತೆಯಾಗುತ್ತಿರುವ ಬಗ್ಗೆಯೂ ಅವರು ಪ್ರಶ್ನಿಸಿದರು. ಜಾಮರ್‌ನ್ನು ಭೌತಿಕ ಭದ್ರತೆ, ತಪಾಸಣೆ, ನಿಗಾ ವ್ಯವಸ್ಥೆ ಮತ್ತು ಪರಿಣಾಮಕಾರಿ ಕಾರಾಗೃಹ ಆಡಳಿತಕ್ಕೆ ಪರ್ಯಾಯವಾಗಿ ಬಳಸಬಾರದು ಎಂದರು.

ಈ ವಿಚಾರವನ್ನು ಪರಿಹರಿಸಲು ಹೈಕೋರ್ಟ್ ಸೂಕ್ತ ವೇದಿಕೆಯಾಗಿದ್ದು, ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ರಾಜಕೀಯ ಸಂಘರ್ಷವಾಗಿ ಮಾಡುವ ಬದಲು ಕಾನೂನು ವೃತ್ತಿಗೆ ಸಂಬಂಧಿಸಿದ ನ್ಯಾಯಾಂಗ ಮೂಲಸೌಕರ್ಯ, ನ್ಯಾಯಾಲಯಗಳ ಸೌಲಭ್ಯಗಳು, ವಕೀಲರ ಚೇಂಬರ್‌ಗಳು ಹಾಗೂ ವಕೀಲರ ಭವನ ಸೇರಿದಂತೆ ಇತರ ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿಡಬಹುದು ಎಂದು ರಾಜೀವ್ ಹೇಳಿದರು.

“ಕಾರಾಗೃಹದ ಭದ್ರತೆ ಮತ್ತು ಸಾರ್ವಜನಿಕರ ದೂರಸಂಪರ್ಕ ಸೌಲಭ್ಯ ಎರಡನ್ನೂ ಏಕಕಾಲದಲ್ಲಿ ರಕ್ಷಿಸಬಹುದು. ಸಮರ್ಥ ತಾಂತ್ರಿಕ ಸಂಸ್ಥೆಗಳು ವಾಸ್ತವಾಂಶಗಳನ್ನು ಪರಿಶೀಲಿಸಿ ಸೂಕ್ತ ತಾಂತ್ರಿಕ ಪರಿಹಾರವನ್ನು ಜಾರಿಗೆ ತರಲಿ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ತೆರೆ ಎಳೆಯಲಿ,” ಎಂದು ಅವರು ಹೇಳಿದರು.

ವೈರ್‌ಲೆಸ್ ಮಾನಿಟರಿಂಗ್ ಸಮಿತಿಯು ಜಾಮರ್‌ನ ಸಿಗ್ನಲ್‌ಗಳು ಜೈಲಿನ ವ್ಯಾಪ್ತಿಯನ್ನು ಮೀರಿ ಪ್ರಸರಣವಾಗುತ್ತಿರುವುದನ್ನು ಗಮನಿಸಿದ ಬಳಿಕ, ಮಂಗಳೂರು ಜೈಲಿನ ಜಾಮರ್ ಅನ್ನು ಅಳವಡಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನೂ ಹೊಂದಿರುವ ಕೇಂದ್ರ ಸರ್ಕಾರದ ಸಂಸ್ಥೆಯಾದ TCILಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಕುರಿತು ಕೇಂದ್ರ ಸರ್ಕಾರದ ಪರ ವಕೀಲರು 2025ರ ಡಿಸೆಂಬರ್‌ನಲ್ಲಿ ಮಾನ್ಯ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಜಾಮರ್‌ನಲ್ಲಿದ್ದ ಎಲ್ಲಾ ದೋಷಗಳನ್ನು ಸರಿಪಡಿಸಲಾಗಿದೆ ಮತ್ತು ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತಿಳಿಸಿದ್ದರು. ಈ ಸಂಬಂಧ ಮೆಮೊವನ್ನು ಸಹ ಸಲ್ಲಿಸಲಾಗಿದ್ದು, ಅದಕ್ಕೆ ಯಾವುದೇ ಪ್ರತಿವಾದಿ ಆಕ್ಷೇಪಣೆ ಸಲ್ಲಿಸಿಲ್ಲ. ಅಂದರೆ, ಇಂದು ಜಾಮರ್ ಸಮಸ್ಯೆ ಇದೆ ಎಂದು ವಿರೋಧಿಸುತ್ತಿರುವವರೇ ಅಂದು ಕೇಂದ್ರ ಸರ್ಕಾರದ ಇಲಾಖೆಯು ಸಮಸ್ಯೆ ಪರಿಹರಿಸಲಾಗಿದೆ ಎಂದು ತಿಳಿಸಿದ್ದನ್ನು ಒಪ್ಪಿಕೊಂಡಿದ್ದರು ಎಂದು ಮನೋರಾಜ್ ರಾಜೀವ್ ಅವರು ವಿಶ್ಲೇಷಸಿದರು.

Author

Anu News

Follow Me
Other Articles
Previous

ಜಲಜೀವನ್ ಮಿಷನ್ ಗೋಲ್ ಮಾಲ್: ಕಳಪೆ ಕಾಮಗಾರಿ, ನೀರು ಪೂರೈಕೆ ಲೋಪಗಳ ಬಗ್ಗೆ ಸಿಬಿಐ ತನಿಖೆಗೆ ಡಾ.ರವಿ ಸಿ.ಟಿ. ಅಗ್ರಹ

Next

Mangaluru jail jammer row: Senior Advocate Manoraj Rajeeva urges scientific assessment, not political blame

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಪಿಎಂ ವಿಶ್ವಕರ್ಮ ಯೋಜನೆ: 30 ಲಕ್ಷ ಫಲಾನುಭವಿಗಳ ನೋಂದಣಿ ಪೂರ್ಣ
    • PM Vishwakarma scheme crosses 30 lakh registrations in three years
    • Helicopter covering live crash report crashes in LA parking lot; 3 killed
    • ಲೈವ್ ವರದಿ ವೇಳೆ ಹೆಲಿಕಾಪ್ಟರ್ ಪತನ; ಮೂವರ ಸಾವು
    • Mangaluru jail jammer row: Senior Advocate Manoraj Rajeeva urges scientific assessment, not political blame
    Copyright 2026 — ANU News. All rights reserved. Blogsy WordPress Theme