Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಷರತ್ತು: ವಾಣಿಜ್ಯ ಹಡಗುಗಳ ಮಾರ್ಗ ಬದಲಿಸಿದ ಅಮೆರಿಕ

By ANU News
September 21, 2026 1 Min Read
0

ಟೆಹ್ರಾನ್: ಅಮೆರಿಕ ತನ್ನ ಷರತ್ತುಗಳನ್ನು ಈಡೇರಿಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮರು ತೆರೆಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುತ್ತಿರುವ ಅಮೆರಿಕ, ಜಲಸಂಧಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ 109 ವಾಣಿಜ್ಯ ಹಡಗುಗಳ ಮಾರ್ಗವನ್ನು ಬದಲಾಯಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್, ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ ಇರಾನ್ ತನ್ನ ಬೇಡಿಕೆಗಳನ್ನು ತಿಳಿಸಿದೆ. ಅವು ಈಡೇರುವವರೆಗೆ ಹಿಂದಿನ ಮಾತುಕತೆ ಚೌಕಟ್ಟಿಗೆ ಮರಳುವ ಅಥವಾ ಹಾರ್ಮುಜ್ ಜಲಸಂಧಿ ತೆರೆಯುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್‌ನಲ್ಲಿ ನೌಕಾ ಸಂಚಾರ ತೀವ್ರವಾಗಿ ಕುಸಿದಿದೆ. ಸೆಪ್ಟೆಂಬರ್ 20ರ ವೇಳೆಗೆ ಅಮೆರಿಕದ ಪಡೆಗಳು 109 ವಾಣಿಜ್ಯ ಹಡಗುಗಳನ್ನು ಮರುಮಾರ್ಗಗೊಳಿಸಿರುವುದಾಗಿ CENTCOM ಹೇಳಿದೆ. ಇತ್ತೀಚಿನ ವಾರಾಂತ್ಯದಲ್ಲಿ ಕೇವಲ 12 ಸರಕು ಸಾಗಣೆ ಹಡಗುಗಳು ಜಲಸಂಧಿ ದಾಟಿವೆ ಎಂದು Kpler ದತ್ತಾಂಶವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಇದೇ ವೇಳೆ ಯೆಮನ್‌ನ ಹೌತಿ ಸಂಘಟನೆ, ಕೆಂಪು ಸಮುದ್ರದಲ್ಲಿ ಅಮೆರಿಕದ ಹಡಗುಗಳನ್ನು ಗುರಿಯಾಗಿಸುವುದಿಲ್ಲ ಎಂದು ಅಮೆರಿಕಕ್ಕೆ ಭರವಸೆ ನೀಡಿದೆ. ಆದರೆ ಸೌದಿ ಅರೇಬಿಯಾ ವಿರುದ್ಧದ ತನ್ನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೌತಿ ರಾಜಕೀಯ ಬ್ಯೂರೋ ಸದಸ್ಯ ಮೊಹಮ್ಮದ್ ಅಲ್-ಬುಖೈತಿ ಹೇಳಿದ್ದಾರೆ.

ಹೌತಿಗಳ ಈ ನಿಲುವು ಒಮಾನ್ ಮೂಲಕ ನಡೆದ ಅಮೆರಿಕ–ಹೌತಿ ಸಂಪರ್ಕದ ಬಳಿಕ ವ್ಯಕ್ತವಾಗಿದೆ. ಆದರೆ ಇದೇ ವೇಳೆ ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಇತ್ತೀಚೆಗೆ ರಿಯಾದ್‌ನತ್ತ ಹೌತಿಗಳು ಕ್ಷಿಪಣಿ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಹಾರ್ಮುಜ್ ಮತ್ತು ಬಾಬ್ ಎಲ್-ಮಂದೆಬ್ ಎಂಬ ಎರಡು ಪ್ರಮುಖ ಸಮುದ್ರ ಮಾರ್ಗಗಳಲ್ಲಿನ ಉದ್ವಿಗ್ನತೆ ಜಾಗತಿಕ ತೈಲ ಸಾಗಣೆ ಮತ್ತು ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸಿದೆ.

Author

ANU News

Follow Me
Other Articles
Previous

Bunts Sangha Bangalore election: Deepak Shetty elected president

Next

ಸುಡಾನ್‌ನಲ್ಲಿ ಚಿನ್ನದ ಗಣಿ ಕುಸಿತ: 11 ಕಾರ್ಮಿಕರು ಸಾವು

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Sourav Gurjar booked, arrested in Hyderabad following woman’s cheating complaint
    • ‘ಮಹಾಭಾರತ’ದ ಭೀಮ ಬಂಧನ! ನಟ ಸೌರವ್ ಗುರ್ಜರ್ ವಿರುದ್ಧ ವಂಚನೆ ಆರೋಪ
    • Karnataka legislature gears up for three-day session amid row over Kasturirangan report
    • ಬರ, ಕಸ್ತೂರಿರಂಗನ್ ವರದಿ; ಇಂದಿನಿಂದ ವಿಧಾನಮಂಡಲ ಕದನ
    • Sudan gold mine collapse kills 11, over 30 injured
    Copyright 2026 — ANU News. All rights reserved. Blogsy WordPress Theme