Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಫ್ಯಾಷನ್ ಡಿಸೈನರ್ ಪಲ್ಲವಿ ಲಕ್ಷ್ಮೀಕಾಂತ್ ದಿಢೀರ್ ನಿಧನ; ಮಲ್ಲಮ್ಮಗೆ ಆಘಾತ

By Anu News
September 21, 2026 1 Min Read
0

ಬೆಂಗಳೂರು: ಸ್ಯಾಂಡಲ್‌ವುಡ್‌ ತಾರೆಯರ ನೆಚ್ಚಿನ ಫ್ಯಾಷನ್ ಡಿಸೈನರ್ ಹಾಗೂ ರಿಷಿ ಡಿಸೈನ್‌ ಮಾಲಕಿ ಪಲ್ಲವಿ ಲಕ್ಷ್ಮೀಕಾಂತ್ ದಿಢೀರ್ ನಿಧನರಾಗಿದ್ದಾರೆ. ಭಾನುವಾರ ಅವರು ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಪಲ್ಲವಿ ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗ, ಕಿರುತೆರೆ ಹಾಗೂ ಫ್ಯಾಷನ್ ಕ್ಷೇತ್ರದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಬಿಗ್‌ಬಾಸ್ ಕನ್ನಡ ಸೀಸನ್‌ 12ರ ಸ್ಪರ್ಧಿ ಮಲ್ಲಮ್ಮ ಅವರ ಪಾಲಿಗೆ ಪಲ್ಲವಿ ವಿಶೇಷ ವ್ಯಕ್ತಿಯಾಗಿದ್ದರು.

ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ, ಬಿಗ್‌ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಪ್ರವೇಶಿಸಿ ತಮ್ಮ ಸರಳ ಹಾಗೂ ಮುಗ್ಧ ಸ್ವಭಾವದಿಂದ ಗಮನ ಸೆಳೆದಿದ್ದರು. ಮಲ್ಲಮ್ಮ ಅವರ ಬೆಂಗಳೂರಿನ ಆರಂಭಿಕ ದಿನಗಳಲ್ಲಿ ಪಲ್ಲವಿ ಆಶ್ರಯ ನೀಡಿದ್ದರು. ತಮ್ಮ ಬೊಟಿಕ್‌ನಲ್ಲಿ ಕೆಲಸವನ್ನೂ ನೀಡಿದ್ದಲ್ಲದೆ, ಮಲ್ಲಮ್ಮ ಅವರನ್ನು ಕುಟುಂಬದ ಸದಸ್ಯೆಯಂತೆಯೇ ನೋಡಿಕೊಂಡಿದ್ದರು ಎನ್ನಲಾಗಿದೆ.

ಮಲ್ಲಮ್ಮ ಬಿಗ್‌ಬಾಸ್‌ಗೆ ತೆರಳುವ ಪ್ರಯಾಣದಲ್ಲೂ ಪಲ್ಲವಿ ಮತ್ತು ಕಿರುತೆರೆ ನಟ ಮನೋಜ್ ಕುಮಾರ್ ಪ್ರಮುಖವಾಗಿ ಬೆಂಬಲಿಸಿದ್ದರು. ಬಿಗ್‌ಬಾಸ್ ಕಾರ್ಯಕ್ರಮದ ವೇಳೆ ಹಾಗೂ ಮಲ್ಲಮ್ಮ ಮನೆಯಿಂದ ಹೊರಬಂದ ಬಳಿಕವೂ ನಿರೂಪಕ ಕಿಚ್ಚ ಸುದೀಪ್ ಅವರು ಪಲ್ಲವಿ ನೀಡಿದ ಬೆಂಬಲವನ್ನು ಉಲ್ಲೇಖಿಸಿದ್ದರು.

ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಹಲವು ಸಂದರ್ಶನಗಳಲ್ಲಿ ಮಲ್ಲಮ್ಮ, ‘ಪಲ್ಲವಿ ಮೇಡಂ’ ಬಗ್ಗೆ ಕೃತಜ್ಞತೆಯಿಂದ ಮಾತನಾಡಿದ್ದರು. ಮಲ್ಲಮ್ಮನ ಮುಂದಿನ ಬದುಕಿನಲ್ಲೂ ಪಲ್ಲವಿ ಬೆಂಬಲವಾಗಿ ನಿಂತಿದ್ದರು. ಮಲ್ಲಮ್ಮ ಬಿಗ್‌ಬಾಸ್‌ನಿಂದ ಹೊರಬಂದಾಗ ಅವರನ್ನು ಸ್ವಾಗತಿಸಿದ್ದ ಪಲ್ಲವಿ, ಬಳಿಕ ಅವರ ಮನೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಸಂಭ್ರಮಾಚರಣೆಯನ್ನೂ ಆಯೋಜಿಸಿದ್ದರು.

ಇವರಿಬ್ಬರ ನಡುವಿನ ಆತ್ಮೀಯ ಕ್ಷಣಗಳ ಹಲವು ರೀಲ್ಸ್ ಹಾಗೂ ಸಾಮಾಜಿಕ ಜಾಲತಾಣದ ವಿಡಿಯೋಗಳು ಗಮನ ಸೆಳೆದಿದ್ದವು.

ಇನ್ನು ಪಲ್ಲವಿ ಲಕ್ಷ್ಮೀಕಾಂತ್ ಅವರು ರಿಷಿ ಡಿಸೈನ್ ಮೂಲಕ ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಹಾಗೂ ಗಣ್ಯರಿಗೆ ಉಡುಪು ವಿನ್ಯಾಸ ಮಾಡಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗ ಹಾಗೂ ಕಿರುತೆರೆ ಕ್ಷೇತ್ರದ ಸ್ನೇಹಿತರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

Author

Anu News

Follow Me
Other Articles
Previous

Sandalwood designer Pallavi Lakshmikanth dies suddenly; Bigg Boss Mallamma left shocked

Next

Fraudulent SIM issuance, IMEI tampering can attract 3-year jail term, Rs 50 lakh fine: DoT

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • 72nd National Film Awards: Anant Nag to receive Dadasaheb Phalke Award on September 22
    • 1980 voter roll row: Delhi court revives complaint against Sonia Gandhi
    • ಸೋನಿಯಾ ಗಾಂಧಿ ಮತದಾರರ ಪಟ್ಟಿ ವಿವಾದಕ್ಕೆ ಮರುಜೀವ; ಸೆ.29ಕ್ಕೆ ಮರು ವಿಚಾರಣೆ
    • Karnataka Kasturirangan row: Hariprasad seeks physical survey to reflect ground realities
    • ಕಸ್ತೂರಿರಂಗನ್ ವರದಿ: ಪರಿಸರ ರಕ್ಷಣೆ ಜತೆಗೆ ರೈತರು, ಅರಣ್ಯವಾಸಿಗಳ ಹಿತವೂ ಕಾಪಾಡಬೇಕು: ಹರಿಪ್ರಸಾದ್
    Copyright 2026 — ANU News. All rights reserved. Blogsy WordPress Theme