Skip to content
ANU News
ANU News
  • Home
  • Home
ANU News
ANU News
  • Home
  • Home
ದೇಶಪ್ರಾದೇಶಿಕ

ಮತ್ತೆ ಏರಿದ ಇಂಧನ ದರ; ಬೆಂಗಳೂರಿನಲ್ಲಿ ಪೆಟ್ರೋಲ್ ₹107.14, ಡೀಸೆಲ್ ₹95.04

By ANU News
May 23, 2026 1 Min Read
0

ನವದೆಹಲಿ: ದೇಶದಲ್ಲಿ ದೀರ್ಘಕಾಲ ಸ್ಥಿರವಾಗಿದ್ದ ಇಂಧನ ದರಗಳಿಗೆ ಇದೀಗ ಜಾಗತಿಕ ಮಾರುಕಟ್ಟೆಯ ಬಿಸಿ ತಟ್ಟಿದೆ. ಶನಿವಾರ ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ದರವನ್ನು 91 ಪೈಸೆ ಹೆಚ್ಚಿಸಿವೆ.

ಇಂಧನ ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹107.14 ಆಗಿದ್ದರೆ, ಡೀಸೆಲ್ ದರ ₹95.04ಕ್ಕೆ ಏರಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ತೈಲ ಕಂಪನಿಗಳು ನಿರಂತರವಾಗಿ ಇಂಧನ ದರ ಹೆಚ್ಚಳ ಮಾಡುತ್ತಿದ್ದು, ಮೇ ತಿಂಗಳಲ್ಲಿ ಇದು ಮೂರನೇ ಬಾರಿ ಏರಿಕೆಯಾಗಿದೆ. ಈ ವಾರದ ಆರಂಭದಲ್ಲಿಯೇ ಲೀಟರ್‌ಗೆ 90 ಪೈಸೆ ಹೆಚ್ಚಳ ಮಾಡಲಾಗಿತ್ತು. ಅದಕ್ಕೂ ಮೊದಲು ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳು ಒಮ್ಮೆಗೆ ಸುಮಾರು ₹3ರವರೆಗೆ ದರ ಹೆಚ್ಚಿಸಿ ದೀರ್ಘಕಾಲದ ಸ್ಥಿರತೆಗೆ ಬ್ರೇಕ್ ಹಾಕಿದ್ದವು.

ಇತ್ತೀಚಿನ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ₹98.64ರಿಂದ ₹99.51ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ₹91.58ರಿಂದ ₹92.49ಕ್ಕೆ ತಲುಪಿದೆ.

ಮುಂಬೈನಲ್ಲಿ ಪೆಟ್ರೋಲ್ ದರ ₹107.56 ಹಾಗೂ ಡೀಸೆಲ್ ₹94.05 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ₹104.54 ಮತ್ತು ಡೀಸೆಲ್ ₹96.16ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ₹110.57 ಹಾಗೂ ಡೀಸೆಲ್ ₹96.04 ದಾಖಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿರುವುದು ದೇಶೀಯ ಇಂಧನ ದರಗಳ ಮೇಲೂ ಪರಿಣಾಮ ಬೀರಿದೆ. ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 104 ಡಾಲರ್ ದಾಟಿದ್ದರೆ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಸುಮಾರು 97 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮತ್ತು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಯಿಂದ ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಳಿತ ಕಂಡುಬರುತ್ತಿದೆ.

Author

ANU News

Follow Me
Other Articles
Previous

ಅಮೆರಿಕ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ರಾಜೀನಾಮೆ

Next

ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ KSRTC ಬಸ್ ಸಂಚಾರ; ಇದು ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ದುಸ್ಥಿತಿ ಎಂದ ಜೆಡಿಎಸ್
    • BJP Alleges Irregularities in Voter List Revision, Targets Congress Over SIR Process
    • ಅಕ್ರಮ ವಲಸಿಗರು, ನುಸುಳುಕೋರರಿಗೆ ಮಣೆಹಾಕುತ್ತಿರುವ ಕಾಂಗ್ರೆಸ್‌ ಗೆ ಜನರಿಂದ ತಕ್ಕ ಪಾಠ; ಬಿಜೆಪಿ
    • Eight Killed in Separate Accidents in Andhra Pradesh and Telangana
    • ಆಂಧ್ರ, ತೆಲಂಗಾಣದಲ್ಲಿ ಭೀಕರ ಅಪಘಾತಗಳು; ಒಟ್ಟು 8 ಮಂದಿ ದುರ್ಮರಣ
    Copyright 2026 — ANU News. All rights reserved. Blogsy WordPress Theme