Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬಹುಕಾಲದಿಂದ ಬಾಕಿ ಉಳಿದಿದ್ದ ಬಡ್ತಿ ಪ್ರಕ್ರಿಯೆಗೆ ವೇಗ; 63 ತಹಶೀಲ್ದಾರ್‌ಗಳಿಗೆ ಪದೋನ್ನತಿ

By ANU News
October 10, 2026 2 Min Read
0

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಬಡ್ತಿ ಪ್ರಕ್ರಿಯೆಗೆ ವೇಗ ನೀಡಿರುವ ರಾಜ್ಯ ಸರ್ಕಾರ, ತಹಶೀಲ್ದಾರ್ ಗ್ರೇಡ್‌–1 ವೃಂದದ 63 ಅಧಿಕಾರಿಗಳಿಗೆ ಕರ್ನಾಟಕ ಆಡಳಿತ ಸೇವೆಯ (ಕೆಎಎಸ್‌) ಕಿರಿಯ ಶ್ರೇಣಿಗೆ ಪದೋನ್ನತಿ ನೀಡಿದೆ ಎಂದು ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಈ ಮೂಲಕ ಅಧಿಕಾರಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದು, ಅವರ ಸೇವೆ ಮತ್ತು ಅನುಭವಕ್ಕೆ ಸೂಕ್ತ ಮನ್ನಣೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಭೂ ದಾಖಲೆಗಳ ನಿರ್ವಹಣೆ, ಕಂದಾಯ ಸೇವೆಗಳ ಒದಗಿಸುವಿಕೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಜವಾಬ್ದಾರಿಗಳಲ್ಲಿ ಅಧಿಕಾರಿಗಳ ಅನುಭವ ಮತ್ತು ದಕ್ಷತೆ ಮಹತ್ವದ್ದಾಗಿದೆ. ಪದೋನ್ನತಿಯೊಂದಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳುವ ಅಧಿಕಾರಿಗಳು ಜನಪರ ಆಡಳಿತಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಪಾರದರ್ಶಕ, ಪರಿಣಾಮಕಾರಿ ಮತ್ತು ಸಕಾಲಿಕ ಸೇವೆ ಒದಗಿಸಬೇಕು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಪ್ರಾಮಾಣಿಕತೆ, ಬದ್ಧತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸೂಕ್ತ ಮನ್ನಣೆ ದೊರೆತಾಗ ಅದು ಇತರರಿಗೂ ಪ್ರೇರಣೆಯಾಗುತ್ತದೆ. ಈ ನಿರ್ಧಾರದಿಂದ ಮತ್ತಷ್ಟು ಅಧಿಕಾರಿಗಳು ಜನರ ವಿಶ್ವಾಸ ಗಳಿಸುವುದರ ಜತೆಗೆ, ಜನಸೇವೆಯನ್ನು ತಮ್ಮ ಕರ್ತವ್ಯದ ಪ್ರಮುಖ ಧ್ಯೇಯವನ್ನಾಗಿಸಿಕೊಳ್ಳಬೇಕು ಎಂದು ಪರಮೇಶ್ವರ್ ಆಶಿಸಿದ್ದಾರೆ.

ಕಂದಾಯ ಇಲಾಖೆಯ ವಿವಿಧ ಹಂತಗಳ ಅಧಿಕಾರಿ ಮತ್ತು ನೌಕರರಿಗೆ ಪದೋನ್ನತಿ ನೀಡುವ ಮೂಲಕ ಅವರ ವೃತ್ತಿಪರ ಬೆಳವಣಿಗೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಬಾಕಿ ಉಳಿದಿದ್ದ ಅಧಿಕಾರಿಗಳ ಪದೋನ್ನತಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನಪರ ಆಡಳಿತಕ್ಕೆ ಬದ್ಧವಾಗಿರುವ ಸರ್ಕಾರವು ಅಧಿಕಾರಿಗಳ ಸೇವೆ ಮತ್ತು ಕೊಡುಗೆಗೆ ಗೌರವ ನೀಡುವುದರ ಜತೆಗೆ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಿಗಳ ವೃತ್ತಿಪರ ಬೆಳವಣಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಗುರಿ ಜತೆಯಾಗಿ ಸಾಗಿದಾಗ ಮಾತ್ರ ಸಮರ್ಥ, ಸ್ಪಂದನಾಶೀಲ ಮತ್ತು ಜನಸ್ನೇಹಿ ಆಡಳಿತ ವ್ಯವಸ್ಥೆ ನಿರ್ಮಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪದೋನ್ನತಿ ಪಡೆದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಹೆಚ್ಚಿನ ಶ್ರದ್ಧೆ ಮತ್ತು ಬದ್ಧತೆಯಿಂದ ಪರಿಹರಿಸಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದರ ಜತೆಗೆ ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಪರಮೇಶ್ವರ್ ಕರೆ ನೀಡಿದ್ದಾರೆ. 63 ತಹಶೀಲ್ದಾರ್‌ಗಳಿಗೆ ಕೆಎಎಸ್‌ ಬಡ್ತಿ: ಜಿ. ಪರಮೇಶ್ವರ್

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಬಡ್ತಿ ಪ್ರಕ್ರಿಯೆಗೆ ವೇಗ ನೀಡಿರುವ ರಾಜ್ಯ ಸರ್ಕಾರ, ತಹಶೀಲ್ದಾರ್ ಗ್ರೇಡ್‌–1 ವೃಂದದ 63 ಅಧಿಕಾರಿಗಳಿಗೆ ಕರ್ನಾಟಕ ಆಡಳಿತ ಸೇವೆಯ (ಕೆಎಎಸ್‌) ಕಿರಿಯ ಶ್ರೇಣಿಗೆ ಪದೋನ್ನತಿ ನೀಡಿದೆ ಎಂದು ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಈ ಮೂಲಕ ಅಧಿಕಾರಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದು, ಅವರ ಸೇವೆ ಮತ್ತು ಅನುಭವಕ್ಕೆ ಸೂಕ್ತ ಮನ್ನಣೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಭೂ ದಾಖಲೆಗಳ ನಿರ್ವಹಣೆ, ಕಂದಾಯ ಸೇವೆಗಳ ಒದಗಿಸುವಿಕೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಜವಾಬ್ದಾರಿಗಳಲ್ಲಿ ಅಧಿಕಾರಿಗಳ ಅನುಭವ ಮತ್ತು ದಕ್ಷತೆ ಮಹತ್ವದ್ದಾಗಿದೆ. ಪದೋನ್ನತಿಯೊಂದಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳುವ ಅಧಿಕಾರಿಗಳು ಜನಪರ ಆಡಳಿತಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಪಾರದರ್ಶಕ, ಪರಿಣಾಮಕಾರಿ ಮತ್ತು ಸಕಾಲಿಕ ಸೇವೆ ಒದಗಿಸಬೇಕು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಪ್ರಾಮಾಣಿಕತೆ, ಬದ್ಧತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸೂಕ್ತ ಮನ್ನಣೆ ದೊರೆತಾಗ ಅದು ಇತರರಿಗೂ ಪ್ರೇರಣೆಯಾಗುತ್ತದೆ. ಈ ನಿರ್ಧಾರದಿಂದ ಮತ್ತಷ್ಟು ಅಧಿಕಾರಿಗಳು ಜನರ ವಿಶ್ವಾಸ ಗಳಿಸುವುದರ ಜತೆಗೆ, ಜನಸೇವೆಯನ್ನು ತಮ್ಮ ಕರ್ತವ್ಯದ ಪ್ರಮುಖ ಧ್ಯೇಯವನ್ನಾಗಿಸಿಕೊಳ್ಳಬೇಕು ಎಂದು ಪರಮೇಶ್ವರ್ ಆಶಿಸಿದ್ದಾರೆ.

ಕಂದಾಯ ಇಲಾಖೆಯ ವಿವಿಧ ಹಂತಗಳ ಅಧಿಕಾರಿ ಮತ್ತು ನೌಕರರಿಗೆ ಪದೋನ್ನತಿ ನೀಡುವ ಮೂಲಕ ಅವರ ವೃತ್ತಿಪರ ಬೆಳವಣಿಗೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಬಾಕಿ ಉಳಿದಿದ್ದ ಅಧಿಕಾರಿಗಳ ಪದೋನ್ನತಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನಪರ ಆಡಳಿತಕ್ಕೆ ಬದ್ಧವಾಗಿರುವ ಸರ್ಕಾರವು ಅಧಿಕಾರಿಗಳ ಸೇವೆ ಮತ್ತು ಕೊಡುಗೆಗೆ ಗೌರವ ನೀಡುವುದರ ಜತೆಗೆ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಿಗಳ ವೃತ್ತಿಪರ ಬೆಳವಣಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಗುರಿ ಜತೆಯಾಗಿ ಸಾಗಿದಾಗ ಮಾತ್ರ ಸಮರ್ಥ, ಸ್ಪಂದನಾಶೀಲ ಮತ್ತು ಜನಸ್ನೇಹಿ ಆಡಳಿತ ವ್ಯವಸ್ಥೆ ನಿರ್ಮಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪದೋನ್ನತಿ ಪಡೆದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಹೆಚ್ಚಿನ ಶ್ರದ್ಧೆ ಮತ್ತು ಬದ್ಧತೆಯಿಂದ ಪರಿಹರಿಸಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದರ ಜತೆಗೆ ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಪರಮೇಶ್ವರ್ ಕರೆ ನೀಡಿದ್ದಾರೆ.

Author

ANU News

Follow Me
Other Articles
Previous

MLC Ravi Urges Karnataka CM to Implement Minimum Wages for Gram Panchayat Staff

Next

Karnataka government fulfils long-standing demand with 63 Tahsildar promotions

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • K’taka BJP chalks out strategy to strengthen organisation, prepare for Council polls: Vijayendra
    • ಬಿಜೆಪಿ ಕೋರ್ ಕಮಿಟಿ ಸಭೆ: ಪಕ್ಷ ಸಂಘಟನೆಗೆ ನಾಯಕರ ಕಾರ್ಯತಂತ್ರ: ರಾಜ್ಯ ಸರ್ಕಾರದ ವಿರುದ್ಧ ರಣವ್ಯೂಹ 
    • PM Modi unveils multi-sector transport infrastructure projects in Tamil Nadu
    • ತಮಿಳುನಾಡಿನಲ್ಲಿ ₹3,700 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮೋದಿ ಚಾಲನೆ; ₹750 ಕೋಟಿ ರೈಲ್ವೆ ಯೋಜನೆಗಳು ಲೋಕಾರ್ಪಣೆ
    • Indian Railways announces 3,548 graduate-level vacancies; applications open till Nov 6
    Copyright 2026 — ANU News. All rights reserved. Blogsy WordPress Theme