Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಭಾರತ–ಯುಕೆ ವ್ಯಾಪಾರ ಸಂಬಂಧ ವಿಸ್ತರಣೆಗೆ ಜೆಟ್ಕೊ ಸಭೆಯಲ್ಲಿ ಒತ್ತು

By ANU News
October 13, 2026 1 Min Read
0

ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ನಡುವಿನ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ (ಸಿಇಟಿಎ) ಪರಿಣಾಮಕಾರಿ ಅನುಷ್ಠಾನಕ್ಕೆ ವೇಗ ನೀಡುವ ಕುರಿತು ಉಭಯ ದೇಶಗಳು ಒಮ್ಮತ ವ್ಯಕ್ತಪಡಿಸಿವೆ.

ನವದೆಹಲಿಯಲ್ಲಿ ಸೋಮವಾರ ನಡೆದ ಭಾರತ–ಯುಕೆ ಜಂಟಿ ಆರ್ಥಿಕ ಮತ್ತು ವ್ಯಾಪಾರ ಸಮಿತಿಯ (ಜೆಟ್ಕೊ) 16ನೇ ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಯುಕೆ ವ್ಯವಹಾರ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಜಂಟಿಯಾಗಿ ಅಧ್ಯಕ್ಷತೆ ವಹಿಸಿದ್ದರು. ಸಿಇಟಿಎ ಮಾತುಕತೆಗಳು 2022ರ ಜನವರಿಯಲ್ಲಿ ಆರಂಭವಾದ ಬಳಿಕ ನಡೆದ ಮೊದಲ ಜೆಟ್ಕೊ ಸಭೆ ಇದಾಗಿದೆ.

ಒಪ್ಪಂದದ ಅನುಷ್ಠಾನದಿಂದ ಉಭಯ ದೇಶಗಳ ವ್ಯಾಪಾರ ವಲಯಕ್ಕೆ ದೊರೆತ ಆರಂಭಿಕ ಪ್ರಯೋಜನಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಭಾರತೀಯ ರಫ್ತುದಾರರು ಒಪ್ಪಂದ ಜಾರಿಯಾದ ಮೊದಲ ದಿನವೇ ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ಚಿನ್ನಾಭರಣ, ಉಡುಪು, ಚಹಾ ಮತ್ತು ಕಾಫಿ ಸೇರಿದಂತೆ 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಯುಕೆಗೆ ರಫ್ತು ಮಾಡಿದರು. ಅಸ್ಸಾಂನ ವಿಶಿಷ್ಟ ಜೋಹಾ ಅಕ್ಕಿಯೂ ಮೊದಲ ಬಾರಿಗೆ ಬ್ರಿಟನ್ ಮಾರುಕಟ್ಟೆ ಪ್ರವೇಶಿಸಿತು.

ಇದೇ ವೇಳೆ, ಸುಂಕ ವಿನಾಯಿತಿಯೊಂದಿಗೆ ಸ್ಕಾಟಿಷ್ ಸಾಲ್ಮನ್ ಭಾರತಕ್ಕೆ ಆಮದಾಗಿದ್ದು, ಸ್ಕಾಚ್ ವಿಸ್ಕಿ ಕಡಿಮೆ ಸುಂಕದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ. ಸುಂಕ ದರದ ಕೋಟಾ ವ್ಯವಸ್ಥೆಯಡಿ ರಫ್ತು ಮಾಡಲಾದ ಮೊದಲ ಕಾರುಗಳೂ ಭಾರತೀಯ ಕಸ್ಟಮ್ಸ್ ಪ್ರಕ್ರಿಯೆ ಪೂರ್ಣಗೊಳಿಸಿವೆ.

ಒಪ್ಪಂದದಡಿ ದೊರೆಯುವ ಆದ್ಯತೆಯ ಸುಂಕ ಸೌಲಭ್ಯಗಳ ಬಳಕೆಗೆ ಸಂಬಂಧಿಸಿದ ವಾರ್ಷಿಕ ದತ್ತಾಂಶ ವಿನಿಮಯ ಮಾಡಿಕೊಳ್ಳಲು ಉಭಯ ದೇಶಗಳು ನಿರ್ಧರಿಸಿವೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಒಪ್ಪಂದದ ಪ್ರಯೋಜನ ಪಡೆಯಲು ಎದುರಾಗುವ ಅಡೆತಡೆಗಳನ್ನು ಗುರುತಿಸಿ ಪರಿಹರಿಸುವುದಕ್ಕೂ ಒತ್ತು ನೀಡಲಾಗಿದೆ.

ಸೇವೆಗಳು, ನಾವೀನ್ಯತೆ, ಸರ್ಕಾರಿ ಖರೀದಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪ್ರಾದೇಶಿಕ ಸಹಕಾರದ ಬಗ್ಗೆಯೂ ಚರ್ಚೆ ನಡೆಯಿತು. ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಜಂಟಿ ಸಮಿತಿಗಳು ಮತ್ತು ಕಾರ್ಯಪಡೆಗಳನ್ನು ರಚಿಸುವುದಕ್ಕೂ ಒಪ್ಪಿಗೆ ಸೂಚಿಸಲಾಯಿತು.

ವ್ಯಾಪಾರ, ಹೂಡಿಕೆ ಮತ್ತು ಜನರ ನಡುವಿನ ಸಂಪರ್ಕವನ್ನು ವಿಸ್ತರಿಸಲು ಉನ್ನತ ಮಟ್ಟದ ಭೇಟಿಗಳು ಹಾಗೂ ಉದ್ಯಮ ಪ್ರತಿನಿಧಿಗಳೊಂದಿಗಿನ ಸಮಾಲೋಚನೆ ಮುಂದುವರಿಸಲು ಎರಡೂ ದೇಶಗಳು ನಿರ್ಧರಿಸಿವೆ.

Author

ANU News

Follow Me
Other Articles
Previous

ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ

Next

High Court ruling on enhanced SC/ST quota a setback to social justice: Siddaramaiah

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Kumaraswamy Seeks CBI Probe into Alleged Sting Operations, Plans to Complain to Amit Shah
    • ಸ್ಟಿಂಗ್ ಆಪರೇಷನ್ ಆರೋಪ: ಸಿಬಿಐ ತನಿಖೆಗೆ ಕುಮಾರಸ್ವಾಮಿ ಆಗ್ರಹ, ಅಮಿತ್ ಶಾಗೆ ದೂರು ಸಲ್ಲಿಸಲು ನಿರ್ಧಾರ
    • Rahul Gandhi Hosts INDIA Bloc Leaders, MPs, Student Groups for Tea Meet
    • ರಾಹುಲ್ ಗಾಂಧಿ ನಿವಾಸದಲ್ಲಿ INDIA ಮೈತ್ರಿಕೂಟದ ನಾಯಕರಿಗೆ ಚಹಾ ಕೂಟ
    • ಪರೀಕ್ಷಾ ದಿನವೇ AI ಮೂಲಕ ಪ್ರಶ್ನೆಪತ್ರಿಕೆ ಸಿದ್ಧತೆ: ನಂದನ್ ನಿಲೇಕಣಿ ಸಲಹೆ
    Copyright 2026 — ANU News. All rights reserved. Blogsy WordPress Theme