Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ

By ANU News
October 13, 2026 1 Min Read
0

ಚನ್ನರಾಯಪಟ್ಟಣ: ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 21 ಕಿ.ಮೀ. ಮ್ಯಾರಥಾನ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಮೈಸೂರಿನ ಯುವರಾಜ ಕಾಲೇಜಿನ ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿ ಸಿ.ಎ. ಸೃಜನ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಚನ್ನರಾಯಪಟ್ಟಣದ ಸಿ.ಎನ್. ಅರುಣ್ ಕುಮಾರ್ ಮತ್ತು ಜ್ಯೋತಿಲಕ್ಷ್ಮಿ ದಂಪತಿಯ ಪುತ್ರ ಸೃಜನ್, ಮ್ಯಾರಥಾನ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟದ ಮೂರು ವಿಭಾಗಗಳಲ್ಲಿ ಜಯ ಸಾಧಿಸಿ, ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಸೃಜನ್ ಅವರ ಕ್ರೀಡಾ ಸಾಧನೆಗೆ ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

ವಿವಿಧ ಕ್ಷೇತ್ರಗಳ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಉದ್ಯಮಿಗಳು ಸೃಜನ್ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.

Author

ANU News

Follow Me
Other Articles
Previous

ಆಶಾ ಕಾರ್ಯಕರ್ತೆಯರ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾದ ಪ್ರತಿಭಟನಾ ಸಪ್ತಾಹ

Next

ಭಾರತ–ಯುಕೆ ವ್ಯಾಪಾರ ಸಂಬಂಧ ವಿಸ್ತರಣೆಗೆ ಜೆಟ್ಕೊ ಸಭೆಯಲ್ಲಿ ಒತ್ತು

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಭಾರತ–ಯುಕೆ ವ್ಯಾಪಾರ ಸಂಬಂಧ ವಿಸ್ತರಣೆಗೆ ಜೆಟ್ಕೊ ಸಭೆಯಲ್ಲಿ ಒತ್ತು
    • ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಸೃಜನ್‌ಗೆ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ
    • ಆಶಾ ಕಾರ್ಯಕರ್ತೆಯರ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾದ ಪ್ರತಿಭಟನಾ ಸಪ್ತಾಹ
    • ಬೆಂಗಳೂರಿನಲ್ಲಿ ಅ. 20ರಿಂದ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026
    • ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್‌ನ ತೀರ್ಪು ಬಗ್ಗೆ ಸಿದ್ದರಾಮಯ್ಯ ಅಸಮಾಧಾನ
    Copyright 2026 — ANU News. All rights reserved. Blogsy WordPress Theme