Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಡಿಸೆಂಬರ್ 18ಕ್ಕೆ ಅಲ್ಲರಿ ನರೇಶ್ ಅಭಿನಯದ ‘ಆಲ್ಕೋಹಾಲ್’ ತೆರೆಗೆ

By ANU News
November 13, 2026 1 Min Read
Comments Off on ಡಿಸೆಂಬರ್ 18ಕ್ಕೆ ಅಲ್ಲರಿ ನರೇಶ್ ಅಭಿನಯದ ‘ಆಲ್ಕೋಹಾಲ್’ ತೆರೆಗೆ

ಹೈದರಾಬಾದ್: ಟಾಲಿವುಡ್ ನಟ ಅಲ್ಲರಿ ನರೇಶ್ ಅಭಿನಯದ ‘ಆಲ್ಕೋಹಾಲ್’ ಸಿನಿಮಾ ಡಿಸೆಂಬರ್ 18, 2026ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಚಿತ್ರ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನರೇಶ್ ಮದ್ಯಪಾನ ಮಾಡದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮದ್ಯಪಾನದಿಂದ ವ್ಯಕ್ತಿ ತನ್ನ ನಿಯಂತ್ರಣ ಕಳೆದುಕೊಳ್ಳುವ ವಿಚಾರವನ್ನು ವಿಭಿನ್ನವಾಗಿ ನಿರೂಪಿಸಲಾಗಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ನರೇಶ್ ಮತ್ತು ನಟ ಸತ್ಯಾ ನಡುವಿನ ಹಾಸ್ಯಭರಿತ ಸಂಭಾಷಣೆ ಗಮನ ಸೆಳೆದಿತ್ತು.

ಮೆಹರ್ ತೇಜ್ ನಿರ್ದೇಶನದ ಚಿತ್ರದಲ್ಲಿ ರುಹಾನಿ ಶರ್ಮಾ, ನಿಹಾರಿಕಾ ಎನ್‌ಎಂ, ಸತ್ಯಾ, ಗಿರೀಶ್ ಕುಲಕರ್ಣಿ, ಹರ್ಷವರ್ಧನ್, ಚೈತನ್ಯ ಕೃಷ್ಣ ಹಾಗೂ ರವೀಂದ್ರ ವಿಜಯ್ ನಟಿಸಿದ್ದಾರೆ.

ತಮಿಳಿನ ಸಂಗೀತ ನಿರ್ದೇಶಕ ಘಿಬ್ರಾನ್ ಸಂಗೀತ ಸಂಯೋಜಿಸಿದ್ದು, ಚೈತನ್ ಭಾರದ್ವಾಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಜಿಜು ಸನ್ನಿ ಛಾಯಾಗ್ರಹಣ ಮತ್ತು ನಿರಂಜನ್ ದೇವರಾಮನೆ ಸಂಕಲನ ನಿರ್ವಹಿಸಿದ್ದಾರೆ.

ಸೂರ್ಯದೇವರ ನಾಗ ವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಿಸಿರುವ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ಗಳಲ್ಲಿ ರೂಪಿಸಲಾಗಿದೆ. ಶ್ರೀಕರ ಸ್ಟುಡಿಯೋಸ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.

The countdown to madness begins! 🍾
#Alcohol is all set for a GRAND WORLDWIDE RELEASE ON DECEMBER 18th! ❤️‍🔥

Brace yourselves for a WILD ride! 🔥 #AlcoholFromDec18th

@allarinaresh @iRuhaniSharma @JustNiharikaNm @mehertej2 @vamsi84 #SaiSoujanya @chaitanmusic @GhibranVaibodha @NiranjanD_ND @itsudbhav #VishalAbani @Venkatupputuri @SitharaEnts @Fortune4Cinemas #SrikaraStudios @adityamusic

— Allari Naresh (@allarinaresh) November 12, 2026

Author

ANU News

Follow Me
Other Articles
Previous

‘ಕಾಲಿ ಖೇತಿ’; ಗ್ರಾಮೀಣ ಹಾರರ್ ಕಥೆಯಲ್ಲಿ ಜಾಕಿ ಶ್ರಾಫ್, ಶರದ್ ಕೆಲ್ಕರ್

Next

Allari Naresh’s ‘Alcohol’ to Release on December 18

Recent Posts

  • Allari Naresh’s ‘Alcohol’ to Release on December 18
  • ಡಿಸೆಂಬರ್ 18ಕ್ಕೆ ಅಲ್ಲರಿ ನರೇಶ್ ಅಭಿನಯದ ‘ಆಲ್ಕೋಹಾಲ್’ ತೆರೆಗೆ
  • ‘ಕಾಲಿ ಖೇತಿ’; ಗ್ರಾಮೀಣ ಹಾರರ್ ಕಥೆಯಲ್ಲಿ ಜಾಕಿ ಶ್ರಾಫ್, ಶರದ್ ಕೆಲ್ಕರ್
  • ‘Kaali Kheti’ Trailer Out: Jackie Shroff, Sharad Kelkar Headline Rural Horror Thriller
  • Delhi’s pollution crisis deepens; CREA report flags 49% higher PM2.5 levels
Copyright 2026 — ANU News. All rights reserved. Blogsy WordPress Theme