Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಹುಬ್ಬಳ್ಳಿಯಲ್ಲಿ ₹700 ಕೋಟಿ ವೆಚ್ಚದ ಕೆಎಲ್ಇ ವೈದ್ಯಕೀಯ ಕ್ಯಾಂಪಸ್; 1,200 ಹಾಸಿಗೆಗಳ ಸೌಲಭ್ಯ

By ANU News
September 20, 2026 2 Min Read
0

ಹುಬ್ಬಳ್ಳಿ: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಶನಿವಾರ ಹುಬ್ಬಳ್ಳಿಯ ಜೆಜಿಎಂಎಂ ವೈದ್ಯಕೀಯ ಕಾಲೇಜು ಹಾಗೂ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ನೂತನ ಕ್ಯಾಂಪಸ್‌ಗೆ ಭೇಟಿ ನೀಡಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆಯ ದೀರ್ಘಕಾಲದ ಸೇವೆಯನ್ನು ಅವರು ಶ್ಲಾಘಿಸಿದರು.

ಶಾ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಮಾಹಿತಿಯಂತೆ, 110 ವರ್ಷಕ್ಕೂ ಹೆಚ್ಚು ಕಾಲ ಕೆಎಲ್ಇ ಶಿಕ್ಷಣ ಮತ್ತು ಆರೋಗ್ಯ ಸೇವೆ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ನೂತನ ವೈದ್ಯಕೀಯ ಕ್ಯಾಂಪಸ್‌ನಲ್ಲಿ 250 ಎಂಬಿಬಿಎಸ್ ಸೀಟುಗಳು ಹಾಗೂ 1,200 ಆಸ್ಪತ್ರೆ ಹಾಸಿಗೆಗಳ ವ್ಯವಸ್ಥೆಯಿದ್ದು, ಈ ಪೈಕಿ 300 ಹಾಸಿಗೆಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದ ರೋಗಿಗಳಿಗೆ ಮೀಸಲಿಡಲಾಗಿದೆ ಎಂದು ಶಲಾಘಿಸಿದ್ದರೆ.

50 ಎಕರೆ ಪ್ರದೇಶದಲ್ಲಿ ಕ್ಯಾಂಪಸ್

ಸುಮಾರು 50 ಎಕರೆ ಪ್ರದೇಶದಲ್ಲಿ ₹700 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ವೈದ್ಯಕೀಯ ಸಂಕೀರ್ಣವು ಒಟ್ಟು 20 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಒಂದೇ ಆವರಣದಲ್ಲಿ ವಿವಿಧ ವಿಭಾಗಗಳ ವೈದ್ಯಕೀಯ ಸೇವೆ ಒದಗಿಸುವ ರೀತಿಯಲ್ಲಿ ಆಸ್ಪತ್ರೆಯನ್ನು ರೂಪಿಸಲಾಗಿದೆ.

ಸಾಮಾನ್ಯ ಔಷಧ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ, ಶ್ವಾಸಕೋಶ, ಪ್ರಸೂತಿ ಮತ್ತು ಸ್ತ್ರೀರೋಗ, ನೇತ್ರ, ಇಎನ್‌ಟಿ, ಮನೋವೈದ್ಯಕೀಯ, ದಂತ ಹಾಗೂ ಭೌತಚಿಕಿತ್ಸೆ ವಿಭಾಗಗಳು ಕಾರ್ಯನಿರ್ವಹಿಸಲಿವೆ.

Today, visited the campus of JGMM Medical College and KLE Hospital and Medical Research Centre in Hubballi, Karnataka.

KLE has been serving the nation for over 110 years through education and healthcare. The new facility, with 250 MBBS seats and 1,200 beds, 300 of which are… pic.twitter.com/HUPNJB1Qkb

— Amit Shah (@AmitShah) September 19, 2026

ಸೂಪರ್ ಸ್ಪೆಷಾಲಿಟಿ ಸೇವೆಗಳು

ಹೃದ್ರೋಗ, ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಗ್ಯಾಸ್ಟ್ರೋಎಂಟರಾಲಜಿ, ನೆಫ್ರಾಲಜಿ, ಅಂಗಾಂಗ ಕಸಿ, ಮೂತ್ರಶಾಸ್ತ್ರ, ಕ್ಯಾನ್ಸರ್ ಚಿಕಿತ್ಸೆ ಹಾಗೂ ಅಂತಃಸ್ರಾವಶಾಸ್ತ್ರ ಸೇರಿದಂತೆ ಹಲವು ಸೂಪರ್ ಸ್ಪೆಷಾಲಿಟಿ ಸೇವೆಗಳು ಲಭ್ಯವಿರಲಿವೆ.

24 ಗಂಟೆಗಳ ತುರ್ತು ಮತ್ತು ಟ್ರಾಮಾ ಆರೈಕೆ, ಡಯಾಲಿಸಿಸ್ ಘಟಕ, ಡಿಜಿಟಲ್ ಎಕ್ಸ್-ರೇ, ಹೈ-ರೆಸಲ್ಯೂಶನ್ ಸಿಟಿ ಸ್ಕ್ಯಾನ್ ಹಾಗೂ ಅಲ್ಟ್ರಾಸೌಂಡ್ ಸೇರಿದಂತೆ ಆಧುನಿಕ ರೋಗನಿರ್ಣಯ ಸೌಲಭ್ಯಗಳನ್ನೂ ಕ್ಯಾಂಪಸ್ ಹೊಂದಿದೆ.

ನೂತನ ಕ್ಯಾಂಪಸ್ ಉತ್ತರ ಕರ್ನಾಟಕದಲ್ಲಿ ವಿಶೇಷ ಹಾಗೂ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದರ ಜೊತೆಗೆ, ವೈದ್ಯಕೀಯ ಶಿಕ್ಷಣ ಮತ್ತು ಎಂಬಿಬಿಎಸ್ ತರಬೇತಿ ಮೂಲಸೌಕರ್ಯಕ್ಕೂ ಉತ್ತೇಜನ ನೀಡುವ ನಿರೀಕ್ಷೆಯಿದೆ.

Author

ANU News

Follow Me
Other Articles
Previous

₹700 crore KLE medical campus in Hubballi boasts 1,200 beds, advanced care

Next

ಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನವೆಂಬರ್ ಅಂತ್ಯಕ್ಕೆ ಬಯಲುಸೀಮೆಯ ಕೆರೆಗಳಿಗೆ ಭದ್ರಾ ನೀರು: ಸಚಿವ ಚಲುವರಾಯಸ್ವಾಮಿ
    • Mumbai Ganeshotsav: Electrical leak near pandal kills 2, leaves 4 injured
    • ಮುಂಬೈ ಗಣೇಶೋತ್ಸವದಲ್ಲಿ ವಿದ್ಯುತ್ ಅವಘಡ: ಬಾಲಕಿ ಸೇರಿ ಇಬ್ಬರು ಸಾವು, ಹಲವರಿಗೆ ಗಾಯ
    • Indian Railways clears ₹142cr traction upgrade for Savalyapuram-Guntur section
    • ₹37.5cr irrigation projects hit by maintenance lapses, CT Ravi directs officials to restore water supply
    Copyright 2026 — ANU News. All rights reserved. Blogsy WordPress Theme