Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಆಂಧ್ರಪ್ರದೇಶದಲ್ಲಿ ಈ ಬಾರಿ ವಿಶೇಷ ಗಣೇಶ ಚತುರ್ಥಿ; ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ಘೋಷಿಸಿದ ಸರ್ಕಾರ

By ANU News
September 9, 2026 1 Min Read
0

ಅಮರಾವತಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ರಾಜ್ಯಾದ್ಯಂತ ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್‌ ಪೂರೈಸಲು ನಿರ್ಧರಿಸಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್‌ ಬುಧವಾರ ತಿಳಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, “ಈ ಬಾರಿ ಆಂಧ್ರಪ್ರದೇಶದಾದ್ಯಂತ ಇರುವ ಎಲ್ಲ ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್‌ ಒದಗಿಸಲಾಗುವುದು. ರಾಜ್ಯದಾದ್ಯಂತ ಗಣೇಶೋತ್ಸವ ಆಚರಿಸುವ ಸಮುದಾಯಗಳಿಗೆ ಬೆಂಬಲ ನೀಡಲು ಹಾಗೂ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಪ್ರಮುಖ ಉಪಕ್ರಮ ಇದಾಗಿದೆ” ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಗಣೇಶ ಚತುರ್ಥಿ ಆಚರಣೆ ಸೆಪ್ಟೆಂಬರ್‌ 14ರಿಂದ 25ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಟಪಗಳಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ಅನುಕೂಲವಾಗಲಿದೆ.

ಗಣೇಶ ದೇವರು ಪ್ರತಿಯೊಂದು ಕುಟುಂಬಕ್ಕೂ ಸಮೃದ್ಧಿ, ಸಂತೋಷ ಹಾಗೂ ಯಶಸ್ಸನ್ನು ಕರುಣಿಸಲಿ ಎಂದು ಸಚಿವ ನಾರಾ ಲೋಕೇಶ್‌ ಶುಭ ಹಾರೈಸಿದ್ದಾರೆ.

Author

ANU News

Follow Me
Other Articles
Previous

ಮೋದಿಯ 25 ವರ್ಷಗಳ ಸಾರ್ವಜನಿಕ ಸೇವೆ; ಸೆ.17ರಿಂದ ಅ.17ರವರೆಗೆ ಬಿಜೆಪಿಯಿಂದ ‘ಸೇವಾ ಸಂಕಲ್ಪ ಅಭಿಯಾನ’

Next

AP Govt announces free electricity for Ganesh pandals during festival

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Cauvery dispute: Karnataka govt to move Supreme Court against 6,000-cusecs release order
    • ಕಾವೇರಿ ವಿವಾದ: ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಕರ್ನಾಟಕ ತಯಾರಿ
    • AP Govt announces free electricity for Ganesh pandals during festival
    • ಆಂಧ್ರಪ್ರದೇಶದಲ್ಲಿ ಈ ಬಾರಿ ವಿಶೇಷ ಗಣೇಶ ಚತುರ್ಥಿ; ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ಘೋಷಿಸಿದ ಸರ್ಕಾರ
    • ಮೋದಿಯ 25 ವರ್ಷಗಳ ಸಾರ್ವಜನಿಕ ಸೇವೆ; ಸೆ.17ರಿಂದ ಅ.17ರವರೆಗೆ ಬಿಜೆಪಿಯಿಂದ ‘ಸೇವಾ ಸಂಕಲ್ಪ ಅಭಿಯಾನ’
    Copyright 2026 — ANU News. All rights reserved. Blogsy WordPress Theme