ಬಿಜೆವೈಎಂಗೆ ಹೊಸ ಸಾರಥಿ: ತೇಜಸ್ವಿ ಸೂರ್ಯ ಸ್ಥಾನಕ್ಕೆ ಹೇಮಂಗ್ ಜೋಶಿ ನೇಮಕ
ನವದೆಹಲಿ: ಬಿಜೆಪಿ ರಾಷ್ಟ್ರೀಯ ಸಂಘಟನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ವಡೋದರ ಲೋಕಸಭಾ ಕ್ಷೇತ್ರದ ಸಂಸದ ಹೇಮಂಗ್ ಜೋಶಿ ಅವರನ್ನು ಭಾರತೀಯ ಜನತಾ ಯುವ ಮೋರ್ಚಾ (BJYM) ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಗೆಟ್ ಪಾಸ್ ನೀಡಲಾಗಿದೆ.

ಬಿಜೆವೈಎಂ ಅಧ್ಯಕ್ಷರಾಗಿ 14 ವರ್ಷಗಳ ತಮ್ಮ ಪಯಣವನ್ನು ಸ್ಮರಿಸಿರುವ ತೇಜಸ್ವಿ ಸೂರ್ಯ, ಪಕ್ಷದ ಹಿರಿಯ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿರುವ ಅವರು, ನಗರದ ಯುವ ಮೋರ್ಚಾ ಘಟಕದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ತಮ್ಮ ಪಯಣ ರಾಷ್ಟ್ರೀಯ ನಾಯಕತ್ವದವರೆಗೆ ತಲುಪುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಸೂರ್ಯ ಕೃತಜ್ಞತೆ ಸಲ್ಲಿಸಿದ್ದಾರೆ.
14 years ago, I began my BJYM journey as a karyakarta of the city unit. That it would take me all the way to National President was something I never ever imagined.
I am deeply grateful to @narendramodi Ji, HM @AmitShah Ji, @JPNadda Ji and @blsanthosh Ji for their faith and the… pic.twitter.com/giqIgWTiiz
— Tejasvi Surya (@Tejasvi_Surya) August 17, 2026
ಹೇಮಂಗ್ ಜೋಶಿಗೆ ಅಭಿನಂದನೆ ಸಲ್ಲಿಸಿದ ಅವರು, ಸಂಘಟನಾ ಹುದ್ದೆಗಳು ಬದಲಾಗಬಹುದು, ಆದರೆ ಬಿಜೆವೈಎಂ ಜೊತೆಗಿನ ತಮ್ಮ ಸಂಬಂಧ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
“ಒಮ್ಮೆ ಬಿಜೆವೈಎಂ, ಎಂದೆಂದಿಗೂ ಬಿಜೆವೈಎಂ” ಎಂದು ಸೂರ್ಯ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.