ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬಿಜೆಪಿ ಬೆಂಬಲ ರಾಜಕೀಯ ನಾಟಕ: ರಮೇಶ್ ಬಾಬು
ಬೆಂಗಳೂರು: ಕಮ್ಯುನಿಸ್ಟ್ ಸಂಘಟನೆಗಳ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬಿಜೆಪಿ ನಾಯಕರು ಬೆಂಬಲ ನೀಡುತ್ತಿರುವುದು ರಾಜಕೀಯ ನಾಟಕ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸಂಘ ಪರಿವಾರ, ಜನಸಂಘ ಮತ್ತು ಬಿಜೆಪಿ ಆರಂಭದಿಂದಲೂ ಕಮ್ಯುನಿಸ್ಟರನ್ನು ವಿರೋಧಿಸುತ್ತಾ ಬಂದಿವೆ. ಆದರೆ, ಈಗ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಪೈಪೋಟಿಗೆ ಬಿದ್ದವರಂತೆ ಬೆಂಬಲ ನೀಡುತ್ತಿವೆ ಎಂದು ಆರೋಪಿಸಿದ್ದಾರೆ.
ಕಮ್ಯುನಿಸ್ಟರನ್ನು ಅರ್ಬನ್ ನಕ್ಸಲರೆಂದು ಹೀಯಾಳಿಸುತ್ತಿದ್ದ ಬಿಜೆಪಿ ನಾಯಕರು, ಇದೀಗ ಆಶಾ ಕಾರ್ಯಕರ್ತೆಯರ ಚಳವಳಿಯಲ್ಲಿ ಭಾಗವಹಿಸಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ. ಚಿತ್ರನಟಿ ತಾರಾ, ಅವಿನಾಶ್ ಮಾಳವಿಕ, ಆರ್. ಅಶೋಕ್, ರವಿಕುಮಾರ್ ಮತ್ತು ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಬೆಂಬಲ ವ್ಯಕ್ತಪಡಿಸುತ್ತಿರುವುದು ರಾಜಕೀಯ ಲಾಭದ ಉದ್ದೇಶದಿಂದ ಎಂದು ಟೀಕಿಸಿದ್ದಾರೆ.

ದೇಶದಲ್ಲಿ ಸುಮಾರು 10 ಲಕ್ಷ ಆಶಾ ಕಾರ್ಯಕರ್ತೆಯರು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಒಟ್ಟಾರೆ ಗೌರವಧನದಲ್ಲಿ ಶೇ.60ರಷ್ಟು ಕೇಂದ್ರ ಸರ್ಕಾರದ ಪಾಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರಿಗೆ ನೈತಿಕತೆ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲಿ. ಪ್ರಚಾರಕ್ಕಾಗಿ ಬೆಂಬಲಿಸುವ ನಾಟಕ ಬಿಟ್ಟು, ಅವರ ಗೌರವಧನ ಮತ್ತು ಸವಲತ್ತುಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ದೇಶದ ರಾಜಕಾರಣದಲ್ಲಿ ತನ್ನ ಹುಟ್ಟಿನಿಂದಲೂ ಕಾಮ್ರೆಡ್ಗಳನ್ನು ಕಮ್ಯುನಿಷ್ಟರನ್ನು ಅಡಿಯಿಂದ ಮುಡಿಯವರಿಗೆ ವಿರೋಧಿಸಿ ಕೊಂಡು ಬಂದಿರುವ ಸಂಘ ಪರಿವಾರ, ಜನಸಂಘ ಮತ್ತು ಭಾರತೀಯ ಜನತಾ ಪಕ್ಷ ಮೊದಲ ಬಾರಿಗೆ ಕಮ್ಯುನಿಸ್ಟ್ ಸಂಘಟನೆಯ ಬೆಂಬಲಿತ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಪೈಪೋಟಿಗೆ ಬಿದ್ದು ಬೆಂಬಲ ನೀಡುತ್ತಿದೆ.
ಅವಕಾಶ ಸಿಕ್ಕಾಗಲೆಲ್ಲಾ ಕಾಮ್ರೆಡ್ಗಳನ್ನು ಕಮ್ಯುನಿಸ್ಟರನ್ನು ಅರ್ಬನ್ ನಕ್ಸಲರೆಂದು ಹೀಯಾಳಿಸುವ ಚಾಳಿ ಬೆಳೆಸಿಕೊಂಡಿರುವ ಬಿಜೆಪಿ ನಾಯಕರು, ಕಮ್ಯುನಿಸ್ಟ್ ಸಂಘಟನೆಯ ಆಶಾ ಚಳುವಳಿಗೆ ಸ್ವತಹ ಭಾಗಿಯಾಗಿ ಫೋಟೋಗಳಿಗೆ ಪೋಸು ನೀಡುವುದರ ಮೂಲಕ ಬೆಂಬಲ ನೀಡಿದ್ದಾರೆ. ಚಿತ್ರನಟಿ ತಾರಾ, ಅವಿನಾಶ್ ಮಾಳವಿಕ, ಆರ್ ಅಶೋಕ್, ರವಿಕುಮಾರ್, ವಿಜಯೇಂದ್ರ ಒಳಗೊಂಡಂತೆ ಪೈಪೋಟಿಗೆ ಬಿದ್ದು ಬಿಜೆಪಿ ನಾಯಕರು ಆಶಾ ಕಾರ್ಯಕರ್ತೆಯರ ಚಳುವಳಿಗೆ ಬೆಂಬಲ ನೀಡುತ್ತಿದ್ದಾರೆ. ಪ್ರಚೋದನೆಯನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ನಾಯಕರು ಮೊದಲ ಬಾರಿಗೆ ಮಾನವೀಯತೆಯ ಮಾತನಾಡುತ್ತಿದ್ದಾರೆ! ಬಹುಶಹ ಅವರ ರಾಜಕೀಯ ಬಣ್ಣ ಇದರಿಂದ ಬಯಲಾಗಿರುತ್ತದೆ.
ಇಡೀ ದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 10 ಲಕ್ಷ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು, ಅವರಿಗೆ ನೀಡುವ ಒಟ್ಟಾರೆ ಗೌರವ ದನದಲ್ಲಿ ಶೇಕಡ 60ರಷ್ಟು ಕೇಂದ್ರ ಸರ್ಕಾರ ನಿಯಮಾನುಸಾರ ನೀಡಬೇಕಾಗಿರುತ್ತದೆ. ರಾಜಕೀಯ ಕಾರಣಕ್ಕಾಗಿ ಕಾಮ್ರೇಡ್ ಗಳನ್ನು ಬೆಂಬಲಿಸಲು ಮುಂದಾಗಿರುವ ಬಿಜೆಪಿ ನಾಯಕರು, ತಮಗೆ ನೈತಿಕತೆ ಇದ್ದರೆ ರಾಷ್ಟ್ರಮಟ್ಟದಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒತ್ತಡ ಹಾಕಲಿ. ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವುದಾಗಿ ಹಲವಾರು ಬಾರಿ ಉತ್ತರ ನೀಡಿರುವ ಕೇಂದ್ರದ ಬಿಜೆಪಿ ಸರ್ಕಾರ ಇಲ್ಲಿಯವರೆಗೆ ಅವರ ಗೌರವಧನವನ್ನು ಹೆಚ್ಚಿಸಿರುವುದಿಲ್ಲ, ಜೊತೆಗೆ ಇತರೆ ಸವಲತ್ತುಗಳನ್ನು ನೀಡುತ್ತಿಲ್ಲ. ಪ್ರಚಾರಕ್ಕಾಗಿ ರಾಜಕೀಯ ಲಾಭಕ್ಕಾಗಿ ಆಶಾ ಕಾರ್ಯಕರ್ತೆಯರನ್ನು ಬೆಂಬಲಿಸುವ ನಾಟಕ ಬಿಟ್ಟು ಗೌರವದನ್ನು ಹೆಚ್ಚಿಸಲು ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಲಿ.
#Karnataka #Kannada #Activist #Communist #Comrades #Congress #AICC #BJP #SUCI #AIDSO #CPM #CPI #Media #Ashaworker #Justice #movement #RSS
— Ramesh Babu (@RameshBabuKPCC) November 27, 2026