Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಕರ್ನಾಟಕದ ರೈತರಿಗೆ ಕೇಂದ್ರದ ಕೊಡುಗೆ: MSP ಅಡಿ 1.67 ಲಕ್ಷ ಟನ್‌ಗೂ ಅಧಿಕ ಬೆಳೆ ಖರೀದಿಗೆ ಅನುಮೋದನೆ

By ANU News
September 29, 2026 1 Min Read
0

ನವದೆಹಲಿ: 2026-27ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದ ಪ್ರಮುಖ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (MSP) ಅಡಿ ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಮನವಿ ಹಾಗೂ ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಬೆಂಬಲ ಬೆಲೆ ಯೋಜನೆ (PSS) ಅಡಿ ಕರ್ನಾಟಕದಿಂದ ವಿವಿಧ ಬೆಳೆಗಳ ಖರೀದಿಗೆ ಅನುಮೋದನೆ ನೀಡಿದ್ದಾರೆ ಎಂದು ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವ ಬೆಳೆ ಎಷ್ಟು ಖರೀದಿ?

PSS ಅಡಿ ರಾಜ್ಯದ ರೈತರಿಂದ ಒಟ್ಟು 1,67,163 ಮೆಟ್ರಿಕ್ ಟನ್ ಬೆಳೆ ಖರೀದಿಸಲಾಗುವುದು.

  • ಸೂರ್ಯಕಾಂತಿ: 13,413 ಮೆಟ್ರಿಕ್ ಟನ್
  • ಹೆಸರುಕಾಳು (ಮೂಂಗ್): 38,250 ಮೆಟ್ರಿಕ್ ಟನ್
  • ಸೋಯಾಬೀನ್: 1,15,500 ಮೆಟ್ರಿಕ್ ಟನ್

ಈ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ರೈತರ ಶ್ರಮಕ್ಕೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ದೊರಕಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಜೋಶಿ ಹೇಳಿದ್ದಾರೆ.

ಕರ್ನಾಟಕದ ಕೃಷಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮನವಿಗೆ ತ್ವರಿತವಾಗಿ ಸ್ಪಂದಿಸಿ ಖರೀದಿಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯದ ರೈತರ ಪರವಾಗಿ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.

Author

ANU News

Follow Me
Other Articles
Previous

Defence land, road projects: DK Shivakumar seeks Rajnath Singh’s intervention for Bengaluru

Next

ರಕ್ಷಣಾ ಭೂಮಿ ಹಸ್ತಾಂತರಕ್ಕೆ ವೇಗ: ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಇರಾನ್ ವಿರುದ್ಧ ‘ಮದರ್ ಆಫ್ ಆಲ್ ಬಾಂಬ್ಸ್’ ಬಳಕೆಗೆ ಟ್ರಂಪ್ ಚಿಂತನೆ?
    • Trump Weighs ‘Mother of All Bombs’ Against Iran Amid Escalating Tensions
    • Delhi Police Issue Notice to CJP Founder Abhijeet Dipke Ahead of Tiranga March
    • ತಿರಂಗಾ ಯಾತ್ರೆಗೆ ಪೊಲೀಸ್ ತಡೆ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ನೋಟಿಸ್
    • ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಕುಸಿತ: ಭಗವಂತ್ ಮಾನ್ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ
    Copyright 2026 — ANU News. All rights reserved. Blogsy WordPress Theme