Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಧಾರ್ಮಿಕ

ಚಾತುರ್ಮಾಸ್ಯ ವೈಭವ: ಸುತ್ತೂರು ಶ್ರೀಗಳ 111ನೇ ಜಯಂತೋತ್ಸವದಲ್ಲಿ ದತ್ತ ವಿಜಯಾನಂದ ತೀರ್ಥ ಶ್ರೀಗಳ ಭಾಗಿ

By ANU News
August 31, 2026 1 Min Read
0

ಮೈಸೂರು: ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.

ಕಾರ್ಯಕ್ರಮದ ಅಂಗವಾಗಿ ಶ್ರೀಗಳು ಗೋಪೂಜೆ ನೆರವೇರಿಸಿದರು. ಬಳಿಕ ಕಡಪ ಆಶ್ರಮದ ಭಜನಾ ತಂಡದಿಂದ ಭಜನಾ ಸೇವೆ ನಡೆಯಿತು. ಇದೇ ವೇಳೆ ಶ್ರೀಚಕ್ರ ಪೂಜೆಯನ್ನು ಶ್ರೀಗಳು ನೆರವೇರಿಸಿದರು.

ನಂತರ ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಡಾ. ಶ್ರೀ ಶಿವರಾಜೇಂದ್ರ ಮಹಾಸ್ವಾಮೀಜಿಯವರ 111ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ, ಮಾಜಿ ಮುಖ್ಯಮಂತ್ರಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಸಂಜೆ ಪೌಂಡರೀಕಾ ಮಂಟಪದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀಗಳು ವಿಷ್ಣುಪುರಾಣ ಕಥಾ ಮಾಲಿಕೆ ಕುರಿತು ಪ್ರವಚನ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರವಚನ ಆಲಿಸಿ ಭಕ್ತಿ ಪರವಶರಾದರು.

Author

ANU News

Follow Me
Other Articles
Previous

ಕಾರವಾರ ಕಡಲಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ; 24 ಮೀನುಗಾರರ ರಕ್ಷಣೆ

Next

Chaturmasya celebrations: Datta Vijayananda Tirtha Swami attends 111th birth anniversary of Suttur seer

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ರಾಜ್ಯದಲ್ಲಿ ಭೀಕರ ಬರ; ₹60,000–70,000 ಕೋಟಿ ನಷ್ಟದ ಅಂದಾಜು; ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ
    • ಸಿದ್ದರಾಮಯ್ಯ ಪದಚ್ಯುತಿಗೆ ‘ಸ್ಟಿಂಗ್ ಸಿಂಡಿಕೇಟ್’ ಪಿತೂರಿ? ಏನಿದು ‘ಬ್ರೂಟಸ್ ಮಾದರಿಯ ಸಂಚು’?
    • Kumaraswamy Alleges ‘Sting Syndicate’ Conspiracy to Oust Siddaramaiah
    • ಕುದ್ರೋಳಿ ದಸರಾದಲ್ಲಿ ಗೋಕರ್ಣನಾಥ, ಶಾರದೆಗೆ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ
    • CM D.K. Shivakumar worships Lord Gokarnanatha and Goddess Sharada at Kudroli Dasara
    Copyright 2026 — ANU News. All rights reserved. Blogsy WordPress Theme