Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ತಿರುಮಲ ಶ್ರೀ ವೆಂಕಟೇಶ್ವರನಿಗೆ ₹206 ಕೋಟಿ ಮೌಲ್ಯದ ಚಿನ್ನಾಭರಣ ಸಮರ್ಪಣೆ!

By ANU News
November 27, 2026 1 Min Read
Comments Off on ತಿರುಮಲ ಶ್ರೀ ವೆಂಕಟೇಶ್ವರನಿಗೆ ₹206 ಕೋಟಿ ಮೌಲ್ಯದ ಚಿನ್ನಾಭರಣ ಸಮರ್ಪಣೆ!

ತಿರುಮಲ: ಚೆನ್ನೈ ಮೂಲದ ಜೈನ ದಂಪತಿಗಳಾದ ವರ್ಧಮಾನ್ ಜೈನ್ ಮತ್ತು ರಾಧಿಕಾ ಜೈನ್ ಅವರು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ₹206 ಕೋಟಿ ಮೌಲ್ಯದ 121 ಕೆಜಿ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅಮೂಲ್ಯ ವಜ್ರಗಳಿಂದ ಅಲಂಕರಿಸಲಾದ ಆಭರಣಗಳನ್ನು ದಂಪತಿಗಳು ದೇವರಿಗೆ ಸಮರ್ಪಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ದಂಪತಿಗಳ ಭಕ್ತಿ ಮತ್ತು ಉದಾರತೆಯನ್ನು ಶ್ಲಾಘಿಸಿದರು. ಶ್ರೀಕೃಷ್ಣದೇವರಾಯರ ಕಾಲದಿಂದಲೂ ದೇವಾಲಯಗಳಿಗೆ ಕಾಣಿಕೆ ನೀಡುವ ಸಂಪ್ರದಾಯವಿದ್ದು, ಸಂಪತ್ತಿನ ಒಂದು ಭಾಗವನ್ನು ಧಾರ್ಮಿಕ ಸೇವೆ ಹಾಗೂ ಸಾರ್ವಜನಿಕ ಕಲ್ಯಾಣಕ್ಕೆ ವಿನಿಯೋಗಿಸುವುದು ಶ್ಲಾಘನೀಯ ಎಂದರು.

ಇದೇ ವೇಳೆ ಆಂಧ್ರಪ್ರದೇಶದಾದ್ಯಂತ 5,000 ದೇವಾಲಯಗಳಿಗೆ ಟಿಟಿಡಿ ವತಿಯಿಂದ ನೆರವು ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಅನ್ನದಾನ, ಆರೋಗ್ಯ ಸೇವೆ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹೊಸ ಉಪಕ್ರಮಗಳನ್ನು ಕೈಗೊಳ್ಳುವುದಾಗಿಯೂ ತಿಳಿಸಿದರು.

ಜೈನ ದಂಪತಿಗಳ ಕೊಡುಗೆ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದ ನಾಯ್ಡು, ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ದಂಪತಿಗಳ ಕುಟುಂಬ ಸೇರಿದಂತೆ ಎಲ್ಲರ ಮೇಲೂ ಇರಲಿ ಎಂದು ಪ್ರಾರ್ಥಿಸಿದರು.

Author

ANU News

Follow Me
Other Articles
Previous

Tamil Nadu CM Vijay Inaugurates 148 Houses for Sri Lankan Tamil Families

Next

Chennai Jain Couple Donates 121 Kg Gold Jewellery Worth ₹206 Crore to Tirumala Temple

Recent Posts

  • Chennai Jain Couple Donates 121 Kg Gold Jewellery Worth ₹206 Crore to Tirumala Temple
  • ತಿರುಮಲ ಶ್ರೀ ವೆಂಕಟೇಶ್ವರನಿಗೆ ₹206 ಕೋಟಿ ಮೌಲ್ಯದ ಚಿನ್ನಾಭರಣ ಸಮರ್ಪಣೆ!
  • Tamil Nadu CM Vijay Inaugurates 148 Houses for Sri Lankan Tamil Families
  • Asia Cup: India A’s Rising Stars Journey Ends in Doha
  • ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್: ಸೆಮಿಫೈನಲ್‌ನಲ್ಲೇ ಭಾರತ ಎ ಅಭಿಯಾನ ಅಂತ್ಯ!
Copyright 2026 — ANU News. All rights reserved. Blogsy WordPress Theme