Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕಾಂಗ್ರೆಸ್ ಲೆಟರ್‌ಹೆಡ್‌ನಲ್ಲಿ ಸ್ಪೀಕರ್ ಹುದ್ದೆ ಉಲ್ಲೇಖ; ಸಿ.ಟಿ. ರವಿ ಆಕ್ಷೇಪ

By ANU News
August 3, 2026 1 Min Read
0

ಬೆಂಗಳೂರು: ನೂತನ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ ವೇಳೆ ಪಕ್ಷದ ಲೆಟರ್‌ಹೆಡ್‌ನಲ್ಲೇ ವಿಧಾನಸಭೆ ಸ್ಪೀಕರ್, ಉಪಸಭಾಪತಿ ಹಾಗೂ ವಿಧಾನ ಪರಿಷತ್ ಸಭಾಪತಿ, ಉಪಸಭಾಪತಿ ಹುದ್ದೆಗಳನ್ನೂ ಉಲ್ಲೇಖಿಸಿರುವುದಕ್ಕೆ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸಾಂವಿಧಾನಿಕ ಹುದ್ದೆಗಳನ್ನು ಪಕ್ಷದ ಲೆಟರ್‌ಹೆಡ್‌ನಲ್ಲಿ ಪ್ರದರ್ಶಿಸಿರುವುದು ಅವುಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವಂತದ್ದು ಎಂದು ಆರೋಪಿಸಿದ್ದಾರೆ.

“ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು, ಆಚರಣೆಯಲ್ಲಿ ಸಂವಿಧಾನದ ಮೌಲ್ಯಗಳನ್ನೇ ಕಾಂಗ್ರೆಸ್ ಕೊಲೆ ಮಾಡುತ್ತಿದೆ” ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.

ವಿಧಾನಸಭೆಯ ಸ್ಪೀಕರ್, ಉಪಸಭಾಪತಿ ಹಾಗೂ ವಿಧಾನ ಪರಿಷತ್ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳು ಸಾಂವಿಧಾನಿಕ ಹುದ್ದೆಗಳಾಗಿದ್ದು, ಅವುಗಳಿಗೆ ವಿಶಿಷ್ಟ ಗೌರವ ಮತ್ತು ಘನತೆ ಇದೆ. ಇಂತಹ ಹುದ್ದೆಗಳನ್ನು ಪಕ್ಷಾತೀತವಾಗಿ ಕಾಣುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವವಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ ಕಾಂಗ್ರೆಸ್ ತನ್ನ ಪಕ್ಷದ ಲೆಟರ್‌ಹೆಡ್‌ನಲ್ಲಿ ಈ ಹುದ್ದೆಗಳನ್ನು ಪ್ರದರ್ಶಿಸಿರುವುದು ಸಂವಿಧಾನಾತ್ಮಕ ಸಂಪ್ರದಾಯಗಳ ಉಲ್ಲಂಘನೆಯಷ್ಟೇ ಅಲ್ಲ, ಸಾಂವಿಧಾನಿಕ ಹುದ್ದೆಗಳ ಗೌರವಕ್ಕೂ ಅಪಮಾನವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಂವಿಧಾನವನ್ನು ರಕ್ಷಿಸುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್, ತನ್ನ ನಡೆ-ನುಡಿಗಳ ಮೂಲಕವೇ ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸುತ್ತಿದೆ. ಈ ಘಟನೆ ಅದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು, ಆಚರಣೆಯಲ್ಲಿ ಸಂವಿಧಾನದ ಮೌಲ್ಯಗಳನ್ನೇ ಕೊಲೆ ಮಾಡುತ್ತಿರುವುದು ಕಾಂಗ್ರೆಸ್.

ವಿಧಾನಸಭೆಯ ಸಭಾಪತಿ, ಉಪಸಭಾಪತಿ ಹಾಗೂ ವಿಧಾನ ಪರಿಷತ್ತಿನ ಸಭಾಪತಿ, ಉಪಸಭಾಪತಿಗಳ ಹುದ್ದೆಗಳು ಸಾಂವಿಧಾನಿಕ ಹುದ್ದೆಗಳಾಗಿದ್ದು, ಅವುಗಳಿಗೆ ವಿಶಿಷ್ಟ ಗೌರವ ಮತ್ತು ಘನತೆ ಇದೆ. ಇಂತಹ ಹುದ್ದೆಗಳನ್ನು ಪಕ್ಷಾತೀತವಾಗಿ… pic.twitter.com/2WcWkBbTHo

— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) August 3, 2026

Author

ANU News

Follow Me
Other Articles
Previous

Don’t resign in disappointment, Hariprasad tells Congress MLAs denied cabinet berths

Next

ಬರ ಘೋಷಣೆಗೆ ಕೇಂದ್ರದ ನಿಯಮ ಅಡ್ಡಿ; ಸಡಿಲಿಕೆಗೆ ಪತ್ರ ಬರೆದಿದ್ದೇವೆ: ಡಾ.ಜಿ. ಪರಮೇಶ್ವರ್

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಎಸ್‌ಐಆರ್‌ ಹೆಸರಿನಲ್ಲಿ 20% ಮತದಾರರ ಹೆಸರು ಕೈಬಿಡುವ ಯತ್ನ: ಬಿಜೆಪಿ ವಿರುದ್ಧ ಕೆಪಿಸಿಸಿ ಆರೋಪ
    • ಆಗಸ್ಟ್‌ 14ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನ
    • DRI busts bid to import banned Pakistan goods through UAE, seizes ₹3 crore consignment
    • India Post sets up special Rakhi counters across Delhi; urges early booking for timely delivery
    • ಸತಾರಾದಲ್ಲಿ ಭಾರಿ ಕಾರ್ಯಾಚರಣೆ; ಅಕ್ರಮ ಡ್ರಗ್ಸ್ ತಯಾರಿಕಾ ಘಟಕ ಭೇದಿಸಿದ ಡಿಆರ್‌ಐ
    Copyright 2026 — ANU News. All rights reserved. Blogsy WordPress Theme