Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಸುದೀಪ್ – ಪ್ರೇಮ್ ಕಾಂಬಿನೇಷನ್‌ನಲ್ಲಿ ‘DADA On Holiday’! ಕಿಚ್ಚನ ಸಿನಿಮಾದ ಕೋತೂಹಲ ಹೆಚ್ಚಿಸಿದ ಟೈಟಲ್ ಟೀಸರ್

By ANU News
November 28, 2026 1 Min Read
Comments Off on ಸುದೀಪ್ – ಪ್ರೇಮ್ ಕಾಂಬಿನೇಷನ್‌ನಲ್ಲಿ ‘DADA On Holiday’! ಕಿಚ್ಚನ ಸಿನಿಮಾದ ಕೋತೂಹಲ ಹೆಚ್ಚಿಸಿದ ಟೈಟಲ್ ಟೀಸರ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ, ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘DADA On Holiday’ ಚಿತ್ರದ ಅಧಿಕೃತ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಆರುದ್ರ ಸಿನಿಮಾಸ್ ಮತ್ತು ಪ್ರೇಮ್ ಫೀನಿಕ್ಸ್ ಬ್ಯಾನರ್‌ಗಳ ಅಡಿಯಲ್ಲಿ ರೂಪುಗೊಳ್ಳುತ್ತಿರುವ ಚಿತ್ರಕ್ಕೆ ರೂಪೇಶ್ ಕುಮಾರ್ ಜಿ., ಶಶಿಕಿರಣ್ ಆರ್. ಮತ್ತು ರಕ್ಷಿತಾ ಪ್ರೇಮ್ ನಿರ್ಮಾಪಕರಾಗಿದ್ದಾರೆ. ಪ್ರೇಮ್ ಕಥೆ, ನಿರ್ದೇಶನ ಹಾಗೂ ಸಾಹಿತ್ಯದ ಹೊಣೆ ಹೊತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರು ಛಾಯಾಗ್ರಹಣ, ಶಿವಕುಮಾರ್ ಜೆ. ಕಲಾ ನಿರ್ದೇಶನ ಮತ್ತು ಸಂಕೇತ್ ಆಚಾರ್ಯ ಸಂಕಲನ ನಿರ್ವಹಿಸಿದ್ದಾರೆ.

ಚಿತ್ರದ ಸಂಭಾಷಣೆಯನ್ನು ಅಭಿಜಿತ್ ಮಹೇಶ್ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಮಿಕ್ಸಿಂಗ್ ಕಾರ್ಯ ನಿರ್ವಹಿಸಿದ್ದು, ಪ್ರೇಮ್ ಹಾಗೂ ಸಾಕ್ಷಿ ಕಲ್ಲೂರು ಗಾಯನ ನೀಡಿದ್ದಾರೆ. ಆನಂದ್ ಆಡಿಯೋ ವಿಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಟೈಟಲ್ ಟೀಸರ್ ಬಿಡುಗಡೆಯಾಗಿದೆ.

ಅದ್ಧೂರಿ ದೃಶ್ಯಗಳು, ಕಿಚ್ಚನ ಸ್ಟೈಲ್ ಮತ್ತು ಸಂಗೀತದ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Author

ANU News

Follow Me
Other Articles
Previous

Amit Shah Calls for All-Party Support to Women’s Quota Bill

Next

Sudeep-Prem Combo Creates Buzz With ‘DADA On Holiday’ Title Teaser

Recent Posts

  • ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಮೂವರು ಸಾವು!
  • Three Killed as SUV Rams Gravel-Laden Tipper on Bengaluru-Mysuru Highway
  • Sudeep-Prem Combo Creates Buzz With ‘DADA On Holiday’ Title Teaser
  • ಸುದೀಪ್ – ಪ್ರೇಮ್ ಕಾಂಬಿನೇಷನ್‌ನಲ್ಲಿ ‘DADA On Holiday’! ಕಿಚ್ಚನ ಸಿನಿಮಾದ ಕೋತೂಹಲ ಹೆಚ್ಚಿಸಿದ ಟೈಟಲ್ ಟೀಸರ್
  • Amit Shah Calls for All-Party Support to Women’s Quota Bill
Copyright 2026 — ANU News. All rights reserved. Blogsy WordPress Theme