Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ನಟ ದತ್ತಣ್ಣಗೆ 2026ನೇ ಸಾಲಿನ ಕನ್ನಡ ಭಾರತೀ ರಂಗ ಪ್ರಶಸ್ತಿ

By ANU News
November 1, 2026 1 Min Read
Comments Off on ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ನಟ ದತ್ತಣ್ಣಗೆ 2026ನೇ ಸಾಲಿನ ಕನ್ನಡ ಭಾರತೀ ರಂಗ ಪ್ರಶಸ್ತಿ

ನವದೆಹಲಿ: ದೆಹಲಿ ಕರ್ನಾಟಕ ಸಂಘವು 2026ನೇ ಸಾಲಿನ ಪ್ರತಿಷ್ಠಿತ ‘ಕನ್ನಡ ಭಾರತೀ ರಂಗ ಪ್ರಶಸ್ತಿ’ಗೆ ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟ ಹೆಚ್.ಜಿ. ದತ್ತಾತ್ರೇಯ (ದತ್ತಣ್ಣ) ಅವರನ್ನು ಆಯ್ಕೆ ಮಾಡಿದೆ. ರಂಗಭೂಮಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಕಲಾವಿದರನ್ನು ಗುರುತಿಸಿ ಪ್ರತಿವರ್ಷ ನೀಡಲಾಗುವ ಈ ಪ್ರಶಸ್ತಿಯನ್ನು ದತ್ತಣ್ಣ ಅವರಿಗೆ ಪ್ರದಾನ ಮಾಡಲು ಸಂಘದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

ದೆಹಲಿ ಕರ್ನಾಟಕ ಸಂಘವು ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. 2015ರಲ್ಲಿ ಮೊದಲ ಬಾರಿಗೆ ‘ಕನ್ನಡ ಭಾರತೀ’ಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ರಂಗಕರ್ಮಿ ಎಂ.ವಿ. ನಾರಾಯಣರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ನಂತರ 2016ರಲ್ಲಿ ಸರೋಜಿನಿ ಶೆಟ್ಟಿ, 2017ರಲ್ಲಿ ಸುರೇಶ್ ಆನಗಳ್ಳಿ, 2021ರಲ್ಲಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, 2022ರಲ್ಲಿ ಶ್ರೀನಿವಾಸ ಜಿ. ಕಪ್ಪಣ್ಣ, 2023ರಲ್ಲಿ ಎಸ್. ದೊಡ್ಡಣ್ಣ, 2024ರಲ್ಲಿ ಡಾ. ಟಿ.ಎಸ್. ನಾಗಾಭರಣ ಹಾಗೂ 2025ರಲ್ಲಿ ಚರಣ್ ರಾಜ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ 2026ನೇ ಸಾಲಿನ ಪ್ರಶಸ್ತಿಗೆ ದತ್ತಣ್ಣ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 50 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ದೆಹಲಿಗೆ ಬಂದು ಹೋಗುವ ವಿಮಾನ ಪ್ರಯಾಣದ ವೆಚ್ಚವನ್ನು ಒಳಗೊಂಡಿದೆ.

ನವೆಂಬರ್‌ನಲ್ಲಿ ನಡೆಯಲಿರುವ ದೆಹಲಿ ಕರ್ನಾಟಕ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು. ಇದೇ ಸಂದರ್ಭದಲ್ಲಿ ‘ದತ್ತಣ್ಣ ಅವರೊಂದಿಗೆ ಸಂವಾದ’ ಕಾರ್ಯಕ್ರಮ ಹಾಗೂ ಜನಪ್ರಿಯ ಕನ್ನಡ ಚಲನಚಿತ್ರ ‘ಮನದ ಕಡಲು’ ಪ್ರದರ್ಶನವೂ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರೇಣುಕುಮಾರ್ ಆರ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ANU News

Follow Me
Other Articles
Previous

Centre announces Census 2027 schedule; four poll-bound states get exemption

Next

ಕೃಪಾ ಆಳ್ವಾ ವಿರುದ್ಧ ನೇರ ಸಾಕ್ಷ್ಯವಿದೆ; ಅದಕ್ಕಾಗಿಯೇ ಉಚ್ಚಾಟನೆ: ಬಿ.ಕೆ. ಹರಿಪ್ರಸಾದ್

Recent Posts

  • Direct Evidence Against Krupa Alva, Says Hariprasad After Congress Expulsion
  • ಕೃಪಾ ಆಳ್ವಾ ವಿರುದ್ಧ ನೇರ ಸಾಕ್ಷ್ಯವಿದೆ; ಅದಕ್ಕಾಗಿಯೇ ಉಚ್ಚಾಟನೆ: ಬಿ.ಕೆ. ಹರಿಪ್ರಸಾದ್
  • ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ನಟ ದತ್ತಣ್ಣಗೆ 2026ನೇ ಸಾಲಿನ ಕನ್ನಡ ಭಾರತೀ ರಂಗ ಪ್ರಶಸ್ತಿ
  • Centre announces Census 2027 schedule; four poll-bound states get exemption
  • 2027ರ ಜನಗಣತಿಗೆ ಮುಹೂರ್ತ ಫಿಕ್ಸ್: ಜನವರಿ 25ರಿಂದ ಮನೆ ಮನೆ ಸಮೀಕ್ಷೆ ಆರಂಭ!
Copyright 2026 — ANU News. All rights reserved. Blogsy WordPress Theme