Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ತುಮಕೂರು, ಚಿತ್ರದುರ್ಗದಲ್ಲಿ ₹16 ಸಾವಿರ ಕೋಟಿ ಹೂಡಿಕೆಯ ರಕ್ಷಣಾ ಉತ್ಪಾದನಾ ಕ್ಲಸ್ಟರ್ ಪ್ರಸ್ತಾವನೆ

By ANU News
November 28, 2026 1 Min Read
Comments Off on ತುಮಕೂರು, ಚಿತ್ರದುರ್ಗದಲ್ಲಿ ₹16 ಸಾವಿರ ಕೋಟಿ ಹೂಡಿಕೆಯ ರಕ್ಷಣಾ ಉತ್ಪಾದನಾ ಕ್ಲಸ್ಟರ್ ಪ್ರಸ್ತಾವನೆ

ಬೆಂಗಳೂರು: ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರಕ್ಷಣಾ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲು ಕಾಸ್ಮಿಕ್ ಬಿರ್ಲಾ ಗ್ರೂಪ್ ಪ್ರಸ್ತಾವನೆ ಸಲ್ಲಿಸಿದೆ. ಸುಮಾರು 1,300 ಹೆಕ್ಟೇರ್ ಪ್ರದೇಶದಲ್ಲಿ ₹16,000 ಕೋಟಿ ಅಂದಾಜು ಹೂಡಿಕೆಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕಾಸ್ಮಿಕ್ ಬಿರ್ಲಾ ಗ್ರೂಪ್‌ನ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮ್ಮನ್ನು ಮುಖ್ಯಮಂತ್ರಿಗಳ ಗಂಗಾ ನಿವಾಸದಲ್ಲಿ ಭೇಟಿ ಮಾಡಿ ಯೋಜನೆಯ ಪ್ರಸ್ತಾವನೆ ಸಲ್ಲಿಸಿತು ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ತಂತ್ರಜ್ಞಾನ ಸಹಭಾಗಿತ್ವ, ಅತ್ಯಾಧುನಿಕ ಉತ್ಪಾದನಾ ಘಟಕಗಳ ಸ್ಥಾಪನೆ ಹಾಗೂ ನುರಿತ ಉದ್ಯೋಗಾವಕಾಶಗಳ ಸೃಷ್ಟಿ ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರ ಸೂಕ್ತವಾಗಿ ಪರಿಶೀಲಿಸಲಿದೆ ಎಂದು ನಿಯೋಗಕ್ಕೆ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಸ್ಮಿಕ್ ಬಿರ್ಲಾ ಗ್ರೂಪ್‌ನ ನಿರ್ದೇಶಕ ಲಕ್ಷ್ಮಣ್, ಗ್ಲೋಬಲ್ ಟೆಕ್ನೋಲಜಿ ಸಂಸ್ಥೆಯ ಎಂಡಿ ಕಿಶೋರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ಶೇ.33ರಷ್ಟು ಮಹಿಳಾ ಮೀಸಲಾತಿ ಐತಿಹಾಸಿಕ ಹೆಜ್ಜೆ; ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ದ್ವಿಗುಣವಾಗಲಿದೆ ಎಂದ ಕುಮಾರಸ್ವಾಮಿ

Next

ಕುರಿಗಾಹಿ ಮಹಿಳೆಯರ ಸಮಸ್ಯೆ ಆಲಿಸಿದ ಡಾ. ನಾಗಲಕ್ಷ್ಮಿ; ಕುರಿ ಕಳ್ಳತನದ ಸಮಸ್ಯೆ ಬಗೆಹರಿಸಲು ಪೊಲೀಸರಿಗೆ ಸೂಚನೆ

Recent Posts

  • K’taka Women’s Commission Chief Directs Police to Act on Sheep Theft Complaints
  • ಕುರಿಗಾಹಿ ಮಹಿಳೆಯರ ಸಮಸ್ಯೆ ಆಲಿಸಿದ ಡಾ. ನಾಗಲಕ್ಷ್ಮಿ; ಕುರಿ ಕಳ್ಳತನದ ಸಮಸ್ಯೆ ಬಗೆಹರಿಸಲು ಪೊಲೀಸರಿಗೆ ಸೂಚನೆ
  • ತುಮಕೂರು, ಚಿತ್ರದುರ್ಗದಲ್ಲಿ ₹16 ಸಾವಿರ ಕೋಟಿ ಹೂಡಿಕೆಯ ರಕ್ಷಣಾ ಉತ್ಪಾದನಾ ಕ್ಲಸ್ಟರ್ ಪ್ರಸ್ತಾವನೆ
  • ಶೇ.33ರಷ್ಟು ಮಹಿಳಾ ಮೀಸಲಾತಿ ಐತಿಹಾಸಿಕ ಹೆಜ್ಜೆ; ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ದ್ವಿಗುಣವಾಗಲಿದೆ ಎಂದ ಕುಮಾರಸ್ವಾಮಿ
  • CM Shivakumar Interacts with Shepherds, Hears Sheep-Rearing Concerns
Copyright 2026 — ANU News. All rights reserved. Blogsy WordPress Theme