Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ಕರ್ನಾಟಕದ ಇತಿಹಾಸ ಅರಮನೆಯಿಂದಲ್ಲ, ಬಸವಾದಿ ಶರಣರ ಮಹಾಮನೆಯಿಂದ ಕಲಿಯಬೇಕು’

By ANU News
November 18, 2026 1 Min Read
Comments Off on ‘ಕರ್ನಾಟಕದ ಇತಿಹಾಸ ಅರಮನೆಯಿಂದಲ್ಲ, ಬಸವಾದಿ ಶರಣರ ಮಹಾಮನೆಯಿಂದ ಕಲಿಯಬೇಕು’

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ‘ಕನ್ನಡ ಚಿಂತನೆ-ಕರ್ನಾಟಕದ ಇತಿಹಾಸ ಮತ್ತು ಪರಂಪರೆ’ ಕುರಿತು ಚಿಂತನಾ ಸಭೆ ನಡೆಯಿತು.

ಹಿರಿಯ ಸಾಹಿತಿ ಡಾ. ಎಂ.ಎಸ್. ಆಶಾದೇವಿ ಮಾತನಾಡಿ, 8ನೇ ಶತಮಾನದಲ್ಲೇ ಕವಿರಾಜಮಾರ್ಗ ಸಹಿಷ್ಣುತೆ ಮತ್ತು ಸಮುದಾಯ ನಿರ್ಮಾಣದ ಮಹತ್ವ ಸಾರಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿ ವ್ಯವಸ್ಥೆ ವಿರೋಧಿಸಿ, ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಮೂಲಕ ಕ್ರಾಂತಿ ತಂದರು. ಬಸವಣ್ಣನವರು ಎಲ್ಲ ಜಾತಿಯವರನ್ನು ಒಂದೇ ವೇದಿಕೆಗೆ ತಂದರು. ಇಂದಿಗೂ ಜಾತಿ ಲೆಕ್ಕಾಚಾರ ಮುಂದುವರಿದಿರುವುದು ವಿಷಾದನೀಯ. ಕರ್ನಾಟಕದ ಇತಿಹಾಸವನ್ನು ಅರಮನೆಗಳಿಂದಲ್ಲ, ಬಸವಾದಿ ಶರಣರ ಮಹಾಮನೆಯಿಂದ ಕಲಿಯಬೇಕು ಎಂದರು.

ವ.ಚ. ಚನ್ನೇಗೌಡ ಮಾತನಾಡಿ, ನಾಡು, ನುಡಿ, ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ಸಮಿತಿಯ ಅಧ್ಯಕ್ಷ ಹುಸೇನ್ ಕೆ.ಎಸ್.ಎಂ. ಸೇರಿದಂತೆ ಪದಾಧಿಕಾರಿಗಳು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.

Author

ANU News

Follow Me
Other Articles
Previous

Telangana CM seeks early NOC from Chhattisgarh for Sammakka Sagar barrage

Next

Sonia Gandhi Dedicated Life to Democracy, Poor and Weaker Sections: B K Hariprasad

Recent Posts

  • Sonia Gandhi Dedicated Life to Democracy, Poor and Weaker Sections: B K Hariprasad
  • ‘ಕರ್ನಾಟಕದ ಇತಿಹಾಸ ಅರಮನೆಯಿಂದಲ್ಲ, ಬಸವಾದಿ ಶರಣರ ಮಹಾಮನೆಯಿಂದ ಕಲಿಯಬೇಕು’
  • Telangana CM seeks early NOC from Chhattisgarh for Sammakka Sagar barrage
  • ‘ನಿಪುಣ ಕರ್ನಾಟಕ’ ಯೋಜನೆಯಡಿ 63,000ಕ್ಕೂ ಹೆಚ್ಚು ಮಂದಿಗೆ AI ತರಬೇತಿ: ಪ್ರಿಯಾಂಕ್ ಖರ್ಗೆ
  • ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ತ್ವರಿತಗೊಳಿಸಲು ಸಚಿವ ಚಲುವರಾಯಸ್ವಾಮಿ ಸೂಚನೆ
Copyright 2026 — ANU News. All rights reserved. Blogsy WordPress Theme