Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಈಜಿಪ್ಟ್‌ನಲ್ಲಿ ಟ್ಯಾಂಕರ್ ಅಗ್ನಿ ದುರಂತ: 27 ವಾಹನಗಳು ಭಸ್ಮ, 31 ಮಂದಿ ಸಾವು

By ANU News
November 26, 2026 1 Min Read
Comments Off on ಈಜಿಪ್ಟ್‌ನಲ್ಲಿ ಟ್ಯಾಂಕರ್ ಅಗ್ನಿ ದುರಂತ: 27 ವಾಹನಗಳು ಭಸ್ಮ, 31 ಮಂದಿ ಸಾವು

ಕೈರೋ: ಈಜಿಪ್ಟ್ ರಾಜಧಾನಿ ಕೈರೋ ಸಮೀಪದ ಹೆದ್ದಾರಿಯಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 21 ಜನರು ಗಾಯಗೊಂಡಿದ್ದಾರೆ.

ನವೆಂಬರ್ 25ರಂದು ಗಿಜಾ ಪ್ರಾಂತ್ಯದ ಅಲ್-ವಾರಕ್ ಪ್ರದೇಶದ ರಿಂಗ್ ರೋಡ್‌ನಲ್ಲಿ ಘಟನೆ ನಡೆದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ರಸ್ತೆಯಲ್ಲಿದ್ದ ಇತರ ವಾಹನಗಳಿಗೂ ಹರಡಿದೆ. ಕಾರುಗಳು, ಮಿನಿ ಬಸ್‌ಗಳು ಹಾಗೂ ದ್ವಿಚಕ್ರ ವಾಹನಗಳು ಸೇರಿದಂತೆ ಸುಮಾರು 27 ವಾಹನಗಳು ಸುಟ್ಟುಹೋಗಿವೆ ಎಂದು ವರದಿಯಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ಅಗ್ನಿಶಾಮಕ ಸಿಬ್ಬಂದಿ ನಿಯೋಜಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 39 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿತ್ತು. ಅಪಘಾತದ ತೀವ್ರತೆಯಿಂದ ಕೆಲವು ಮೃತದೇಹಗಳನ್ನು ಗುರುತಿಸುವುದು ಕಷ್ಟವಾಗಿದ್ದು, ಡಿಎನ್‌ಎ ಪರೀಕ್ಷೆ ನಡೆಸುವಂತೆ ಸಾರ್ವಜನಿಕ ಅಭಿಯೋಜಕರ ಕಚೇರಿ ಸೂಚಿಸಿದೆ.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Author

ANU News

Follow Me
Other Articles
Previous

IFFIಯಿಂದಾಗಿ ಪಣಜಿಗೆ ಸಿನಿಮಾ, ಸಂಸ್ಕೃತಿ ಮತ್ತು ಹಬ್ಬದ ಕಳೆ

Next

Egypt Tanker Blaze Kills 31; 27 Vehicles Gutted Near Cairo

Recent Posts

  • Egypt Tanker Blaze Kills 31; 27 Vehicles Gutted Near Cairo
  • ಈಜಿಪ್ಟ್‌ನಲ್ಲಿ ಟ್ಯಾಂಕರ್ ಅಗ್ನಿ ದುರಂತ: 27 ವಾಹನಗಳು ಭಸ್ಮ, 31 ಮಂದಿ ಸಾವು
  • IFFIಯಿಂದಾಗಿ ಪಣಜಿಗೆ ಸಿನಿಮಾ, ಸಂಸ್ಕೃತಿ ಮತ್ತು ಹಬ್ಬದ ಕಳೆ
  • ಲಾಲ್‌ಬಾಗ್ ಸುರಂಗ ರಸ್ತೆ ಯೋಜನೆಯಿಂದ ಕೈಬಿಡಲು ನಿರ್ಧಾರ: ಬೆಂಗಳೂರಿಗರ ಹೋರಾಟಕ್ಕೆ ಮೊದಲ ಜಯ ಎಂದ ತೇಜಸ್ವಿ ಸೂರ್ಯ
  • Lalbagh’s Exclusion from Tunnel Road Project ‘First Victory’ for Bengaluru Citizens: Tejasvi Surya
Copyright 2026 — ANU News. All rights reserved. Blogsy WordPress Theme