Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ನಶಾ ಮುಕ್ತ ಅಭಿಯಾನ : 89ನೇ ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮದಲ್ಲಿ ಕ್ರೀಡಾ ತಾರೆಯರ ಸಮಾಗಮ 

By ANU News
September 5, 2026 1 Min Read
0

ನವದೆಹಲಿ: ‘ನಶಾ ಮುಕ್ತ ಯುವ, ವಿಕಸಿತ ಭಾರತ’ ಸಂದೇಶದೊಂದಿಗೆ 89ನೇ ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮ ಸೆ.6ರಂದು ಗುಜರಾತ್‌ನ ಸೂರತ್‌ನಲ್ಲಿ ನಡೆಯಲಿದೆ.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು ಸೈಕಲ್ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಕೂಡ ಭಾಗವಹಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ನಶಾ ಮುಕ್ತ ಯುವ, ವಿಕಸಿತ ಭಾರತ’ ಕರೆಯ ಭಾಗವಾಗಿ ಹಾಗೂ ‘ನಶಾ ಮುಕ್ತ ಯುವ, ವಿಕಸಿತ ಭಾರತ ಸಂಕಲ್ಪ ಅಭಿಯಾನ’ದಡಿ ನಡೆಯುತ್ತಿರುವ 100 ವಾರಗಳ ರಾಷ್ಟ್ರವ್ಯಾಪಿ ಜನಭಾಗೀದಾರಿ ಅಭಿಯಾನದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮಾಂಡವೀಯ ಹೇಳಿದ್ದಾರೆ. ಸೈಕ್ಲಿಂಗ್ ಸೇರಿದಂತೆ ಫಿಟ್ ಇಂಡಿಯಾ ಚಟುವಟಿಕೆಗಳು ಆರೋಗ್ಯವಂತ, ಆತ್ಮವಿಶ್ವಾಸಿ, ಶಿಸ್ತುಬದ್ಧ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಬದ್ಧ ಯುವ ಪೀಳಿಗೆಯನ್ನು ರೂಪಿಸಲು ಸಹಕಾರಿಯಾಗಲಿವೆ ಎಂದಿದ್ದಾರೆ.

ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಮಾದಕ ವ್ಯಸನವನ್ನು ದೇಶ ಮತ್ತು ಯುವಜನತೆ ಎದುರಿಸುತ್ತಿರುವ ಪ್ರಮುಖ ಸವಾಲು ಎಂದು ಉಲ್ಲೇಖಿಸಿದ್ದರು.

ಸೂರತ್‌ನಲ್ಲಿ ಬೆಳಗ್ಗೆ 6ಕ್ಕೆ ಮಂಗಢ್ ಚೌಕ್‌ನ ಸರ್ದಾರ್ ಪಟೇಲ್ ಪ್ರತಿಮೆಯಿಂದ ಸೈಕಲ್ ಜಾಥಾ ಆರಂಭವಾಗಲಿದ್ದು, ಮಿನಿ ಬಜಾರ್ ಮತ್ತು ವರಾಚಾ ಮುಖ್ಯರಸ್ತೆ ಮೂಲಕ ಸಾರ್ಥಾನಾ ಮೃಗಾಲಯ ತಲುಪಲಿದೆ.

ಪದ್ಮಶ್ರೀ ಪುರಸ್ಕೃತ ಒಲಿಂಪಿಯನ್ ಅಚಂತ ಶರತ್ ಕಮಲ್, ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಸರಿತಾ ಮೋರ್, ಕುಸ್ತಿಪಟು ಶಿವಾನಿ ಪವಾರ್ ಹಾಗೂ ಕಾಮನ್‌ವೆಲ್ತ್ ಪದಕ ವಿಜೇತ ರಾಹುಲ್ ಮನ್ ಸೇರಿದಂತೆ ಹಲವು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಕ್ರೀಡೆ, ದೈಹಿಕ ಕ್ಷಮತೆ, ಜಾಗೃತಿ ಹಾಗೂ ಸಮುದಾಯದ ಸಹಭಾಗಿತ್ವದ ಮೂಲಕ ಮಾದಕ ವ್ಯಸನದ ವಿರುದ್ಧ ನಿರಂತರ ಜನಾಂದೋಲನ ರೂಪಿಸುವುದು ಅಭಿಯಾನದ ಉದ್ದೇಶವಾಗಿದೆ.

Author

ANU News

Follow Me
Other Articles
Previous

Fit India Sundays on Cycle to promote ‘Nasha Mukt Yuva for Viksit Bharat’

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನಶಾ ಮುಕ್ತ ಅಭಿಯಾನ : 89ನೇ ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮದಲ್ಲಿ ಕ್ರೀಡಾ ತಾರೆಯರ ಸಮಾಗಮ 
    • Fit India Sundays on Cycle to promote ‘Nasha Mukt Yuva for Viksit Bharat’
    • ಬಾಲಕಾರ್ಮಿಕ ಪದ್ಧತಿ ವಿರುದ್ಧ ಎನ್‌ಸಿಪಿಸಿಆರ್ ಕಾರ್ಯಾಚರಣೆ: 3,800ಕ್ಕೂ ಹೆಚ್ಚು ಮಕ್ಕಳ ರಕ್ಷಣೆ
    • NCPCR rescues over 3,800 children from child labour in special nationwide drive
    • ಭಾರತ–ಇಯು ಮುಕ್ತ ವ್ಯಾಪಾರ ಒಪ್ಪಂದದಿಂದ ರೈತರು, ಎಂಎಸ್‌ಎಂಇ, ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ: ಪಿಯೂಷ್ ಗೋಯಲ್
    Copyright 2026 — ANU News. All rights reserved. Blogsy WordPress Theme