Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕೆರೆಗಳಿಗೆ ನೀರು ತುಂಬಿಸುವ ಶಾಶ್ವತ ಯೋಜನೆಗಳಿಗೆ ಆದ್ಯತೆ ನೀಡಿದ್ದೆ: ಡಾ. ರವಿ ಸಿ.ಟಿ.

By ANU News
November 22, 2026 1 Min Read
Comments Off on ಕೆರೆಗಳಿಗೆ ನೀರು ತುಂಬಿಸುವ ಶಾಶ್ವತ ಯೋಜನೆಗಳಿಗೆ ಆದ್ಯತೆ ನೀಡಿದ್ದೆ: ಡಾ. ರವಿ ಸಿ.ಟಿ.

ಚಿಕ್ಕಮಗಳೂರು: ಅಧಿಕಾರಕ್ಕಿಂತ ಜನರಿಗೆ ಶಾಶ್ವತವಾಗಿ ಉಪಯೋಗವಾಗುವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದೆ. ಭದ್ರಾ ನದಿಯಿಂದ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸುಮಾರು ₹1,281 ಕೋಟಿ ಮಂಜೂರಾತಿ ಮಾಡಿಸಿದ್ದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದ ಗಂಗಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2019-20ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದೆ. ಮೊದಲ ಎರಡು ಹಂತಗಳು ಪೂರ್ಣಗೊಂಡಿದ್ದು, ಮೂರನೇ ಹಂತದ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಹಲವು ಗ್ರಾಮಗಳ ಕೆರೆಗಳಿಗೆ ನೀರು ತಲುಪಲಿದೆ ಎಂದರು.

 

ದಾಸರಹಳ್ಳಿ ಮತ್ತು ಲಕ್ಯಾ ಮಾದರಸನ ಕೆರೆಗಳಿಗೆ ₹28 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ಕೈಗೊಂಡಿದ್ದರೂ, ನಿರ್ವಹಣೆ ಕೊರತೆಯಿಂದ ದಾಸರಹಳ್ಳಿ ಕೆರೆಯ ಏರಿ ಒಡೆದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೋಜನೆಗಳ ನಿರ್ವಹಣೆಗೂ ಆದ್ಯತೆ ನೀಡಬೇಕು ಎಂದು ಹೇಳಿದರು.

ಭದ್ರಾ ಯೋಜನೆಯ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಿದರೆ ಏಳೆಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಆದರೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು, ಮೇವು ಮತ್ತು ಉದ್ಯೋಗ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದರು.

ಪಿಂಚಣಿ ಪಾವತಿ ವಿಳಂಬ, ಬೆಲೆ ಏರಿಕೆ ಮತ್ತು ವಿವಿಧ ಸೇವೆಗಳ ಶುಲ್ಕ ಹೆಚ್ಚಳದ ಬಗ್ಗೆಯೂ ಸರ್ಕಾರವನ್ನು ಟೀಕಿಸಿದರು. 2018ರಿಂದ 2023ರವರೆಗೆ ಬೆಳವಾಡಿ ಪಂಚಾಯಿತಿ ವ್ಯಾಪ್ತಿಗೆ ₹40.22 ಕೋಟಿ ಅನುದಾನ ನೀಡಲಾಗಿತ್ತು. ವಡ್ಡರಹಳ್ಳಿ ರಸ್ತೆ ಕಾಮಗಾರಿಗಳಿಗೂ ಅನುದಾನ ಒದಗಿಸಲಾಗಿತ್ತು ಎಂದು ವಿವರಿಸಿದರು.

ಕೆರೆ ಮತ್ತು ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಂಡು ಮುಂದಿನ ಪೀಳಿಗೆಗಾಗಿ ಪ್ರಕೃತಿಯನ್ನು ಸಂರಕ್ಷಿಸುವಂತೆ ಕರೆ ನೀಡಿದರು. ಚಿಕ್ಕಮಗಳೂರಿನಲ್ಲಿ ಈಗ ಉದ್ಘಾಟನೆಯಾಗುತ್ತಿರುವ ಅರಣ್ಯ ಭವನ, ಡಿಸಿ ಕಚೇರಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ತಮ್ಮ ಅವಧಿಯಲ್ಲಿ ಮಂಜೂರಾಗಿದ್ದವು ಎಂದು ಹೇಳಿದರು.

Author

ANU News

Follow Me
Other Articles
Previous

ಬೇಡಿಕೆ ಈಡೇರಿಸಲು ಒಪ್ಪದ ಸರ್ಕಾರ, ಪಟ್ಟು ಸಡಿಲಿಸಲು ‘ಆಶಾ’ ನಕಾರ; ಅರೋಗ್ಯ ಕಾರ್ಯಕತೆಯರ ಸಮಸ್ಯೆ ಮತ್ತಷ್ಟು ಜಟಿಲ

Next

Naidu Reviews Godavari Pushkaralu Preparations; 2,260 Projects Get Administrative Approval

Recent Posts

  • ಕರ್ನಾಟಕ: ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಸೊಂಟದ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ
  • ASHA Workers Reject K’taka Minister’s Assurances, Bengaluru Protest Enters Fifth Day
  • Naidu Reviews Godavari Pushkaralu Preparations; 2,260 Projects Get Administrative Approval
  • ಕೆರೆಗಳಿಗೆ ನೀರು ತುಂಬಿಸುವ ಶಾಶ್ವತ ಯೋಜನೆಗಳಿಗೆ ಆದ್ಯತೆ ನೀಡಿದ್ದೆ: ಡಾ. ರವಿ ಸಿ.ಟಿ.
  • ಬೇಡಿಕೆ ಈಡೇರಿಸಲು ಒಪ್ಪದ ಸರ್ಕಾರ, ಪಟ್ಟು ಸಡಿಲಿಸಲು ‘ಆಶಾ’ ನಕಾರ; ಅರೋಗ್ಯ ಕಾರ್ಯಕತೆಯರ ಸಮಸ್ಯೆ ಮತ್ತಷ್ಟು ಜಟಿಲ
Copyright 2026 — ANU News. All rights reserved. Blogsy WordPress Theme