Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಐಪಿಎಸ್ ಅಧಿಕಾರಿ ಬಿ. ದಯಾನಂದ್ ನಿರ್ದೋಷಿ ಎಂದು ಕೊನೆಗೂ ಒಪ್ಪಿಕೊಂಡ ಸರ್ಕಾರ

By ANU News
July 15, 2026 1 Min Read
0

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ವಿಜಯೋತ್ಸವದ ವೇಳೆ 2025ರ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧ ಆರಂಭಿಸಲಾಗಿದ್ದ ಇಲಾಖಾ ವಿಚಾರಣೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಅವರ ವಿರುದ್ಧದ ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ.

2025ರ ಸೆಪ್ಟೆಂಬರ್ 8ರಂದು ಬಿ. ದಯಾನಂದ ಅವರು ಲಿಖಿತ ಸಮರ್ಥನೆ ಸಲ್ಲಿಸಿ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿ ತನಗೆ ಕ್ಲೀನ್‌ಚಿಟ್ ನೀಡುವಂತೆ ಮನವಿ ಮಾಡಿದ್ದರು. ಅವರ ಸಮರ್ಥನೆ ಹಾಗೂ ಆಡಳಿತ ಇಲಾಖೆಯ ಅಭಿಪ್ರಾಯವನ್ನು ಪರಿಶೀಲಿಸಿದ ಸರ್ಕಾರ, 2026ರ ಜುಲೈ 14ರಂದು ಹೊರಡಿಸಿದ ಆದೇಶದಲ್ಲಿ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969ರ ನಿಯಮ 8(4)ರಡಿ ಆರಂಭಿಸಿದ್ದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

ಕಾಲ್ತುಳಿತ ಪ್ರಕರಣದ ಬಳಿಕ ಆಗಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಬಿ. ದಯಾನಂದ ಅವರನ್ನು ಆರಂಭದಲ್ಲಿ ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು. ಬಳಿಕ ಅಮಾನತು ಹಿಂಪಡೆದು, ನಿಯಮಾನುಸಾರ ಆರೋಪಪಟ್ಟಿ ಮತ್ತು ಶೋಕಾಸ್ ನೋಟಿಸ್ ನೀಡಲಾಗಿತ್ತು.

ಈಗ ಸಲ್ಲಿಕೆಯಾಗಿದ್ದ ಸಮರ್ಥನೆ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ ನಂತರ, ಬಿ. ದಯಾನಂದ ವಿರುದ್ಧದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ, ಎಲ್ಲ ಆರೋಪಗಳಿಂದ ಸಂಪೂರ್ಣವಾಗಿ ಖುಲಾಸೆಗೊಳಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಆದೇಶ ಹೊರಡಿಸಿದೆ.

Author

ANU News

Follow Me
Other Articles
Previous

Iran Pulls Out of US Ceasefire Deal; Strait of Hormuz Tensions Escalate

Next

K’taka Govt Drops Inquiry Against IPS Officer B. Dayanand in Chinnaswamy Stampede Case

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನೀರಾವರಿ ಯೋಜನೆಗಳ ಕಾಮಗಾರಿ ವಿಳಂಬ ಸಹಿಸುವುದಿಲ್ಲ: ಚಲುವರಾಯಸ್ವಾಮಿ
    • Bengaluru gets its first ‘Circular Textile Lab’ to turn textile waste into useful products
    • ಬೆಂಗಳೂರಿನ ಮೊದಲ ‘ಸರ್ಕ್ಯುಲರ್ ಟೆಕ್ಸ್‌ಟೈಲ್ ಲ್ಯಾಬ್’ ಲೋಕಾರ್ಪಣೆ
    • Horror, humour and a mysterious bus: Shine Shetty’s ‘Shankarabharana’ teaser unveiled
    • ಶೈನ್ ಶೆಟ್ಟಿಗೆ ಬಸ್ ಡ್ರೈವರ್ ಅವತಾರ; ‘ಶಂಕರಾಭರಣ’ ಟೀಸರ್ ರಿಲೀಸ್
    Copyright 2026 — ANU News. All rights reserved. Blogsy WordPress Theme