Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕರ್ನಾಟಕದಲ್ಲಿ 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರಿಗೆ ಆರು ಹೊಸ ಪೊಲೀಸ್ ಆಯುಕ್ತರು

By ANU News
November 18, 2026 1 Min Read
Comments Off on ಕರ್ನಾಟಕದಲ್ಲಿ 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರಿಗೆ ಆರು ಹೊಸ ಪೊಲೀಸ್ ಆಯುಕ್ತರು

ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಆರ್. ಹಿತೇಂದ್ರ ಅವರನ್ನು ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ಕುರಿತಂತೆ ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆಯೇ ಬೆಂಗಳೂರು ಬೆಂಗಳೂರು ನಗರ ಪೊಲೀಸ್ ಮುಕ್ತ ಆಯುಕ್ತರಾಗಿ ಆರ್. ಹಿತೇಂದ್ರ ಅವರು ಅಧಿಕಾರವಹಿಸಿಕೊಂಡಿದ್ದಾರೆ.

ಇದೇ ವೇಳೆ, ಬೆಂಗಳೂರು ನಗರದಲ್ಲಿ ವಲಯವಾರು ಹೊಸ ಆಯುಕ್ತರ ಹುದ್ದೆಗಳನ್ನು ಸೃಜಿಸಿ ಲಾಭೂ ರಾಮ್ (ಕೇಂದ್ರ), ಡಾ. ಪಿ.ಎಸ್. ಹರ್ಷ (ಪೂರ್ವ), ವಿಕಾಶ್ ಕುಮಾರ್ ವಿಕಾಶ್ (ಪಶ್ಚಿಮ), ಡಾ. ಎಂ.ಬಿ. ಬೋರಲಿಂಗಯ್ಯ (ಉತ್ತರ) ಮತ್ತು ಹೇಮಂತ್ ಎಂ. ನಿಂಬಾಳ್ಕರ್ (ಸಂಚಾರ) ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಹೇಮಂತ್ ನಿಂಬಾಳ್ಕರ್ ಅವರು ಸಂಚಾರ ವಿಭಾಗದ ಜೊತೆಗೆ ಆಂಟಿ-ರೌಡಿ ಸ್ಕ್ವಾಡ್‌ನ ಹೆಚ್ಚುವರಿ ಹೊಣೆಗಾರಿಕೆಯನ್ನೂ ನಿರ್ವಹಿಸಲಿದ್ದಾರೆ.

ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ, ಎಸ್. ಮುರುಗನ್ ಅವರನ್ನು ಲೋಕಾಯುಕ್ತಕ್ಕೆ ಹಾಗೂ ಮನೀಶ್ ಖರ್ಬಿಕರ್ ಅವರನ್ನು ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗಕ್ಕೆ ನೇಮಿಸಲಾಗಿದೆ.

ಎನ್. ಶಶಿ ಕುಮಾರ್ ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ, ಅನುಪಮ್ ಅಗ್ರವಾಲ್ ಕೆಎಸ್‌ಆರ್‌ಪಿ ಐಜಿಪಿಯಾಗಿ ನೇಮಕಗೊಂಡಿದ್ದಾರೆ. ಶರಣಪ್ಪ ಎಸ್.ಡಿ. ಅವರನ್ನು ರೈಲ್ವೆ ಡಿಐಜಿಯಾಗಿ ಹಾಗೂ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ಕಲಬುರಗಿ ನಗರ ಡಿಐಜಿ ಮತ್ತು ಪೊಲೀಸ್ ಆಯುಕ್ತರಾಗಿ ವರ್ಗಾಯಿಸಲಾಗಿದೆ.

ಮೈಸೂರಿನ ದಕ್ಷಿಣ ವಲಯದ ಡಿಐಜಿಯಾಗಿ ಎಂ. ಪುಟ್ಟಮಡಯ್ಯ ಅವರನ್ನು ನೇಮಿಸಲಾಗಿದೆ. ಬೆಂಗಳೂರಿನ ವಿವಿಧ ವಿಭಾಗಗಳ ಡಿಸಿಪಿ ಹುದ್ದೆಗಳಲ್ಲೂ ಬದಲಾವಣೆ ಮಾಡಲಾಗಿದೆ. ಅನೂಪ್ ಎ. ಶೆಟ್ಟಿ, ಲೋಕೇಶ್ ಭರಮಪ್ಪ ಜಗಲಾಸರ್ ಮತ್ತು ಪಿ.ವಿ. ಸ್ನೇಹಾ ಅವರಿಗೆ ಕ್ರಮವಾಗಿ ಪೂರ್ವ, ಕೇಂದ್ರ ಮತ್ತು ಪಶ್ಚಿಮ ಸಂಚಾರ ವಿಭಾಗಗಳ ಜವಾಬ್ದಾರಿ ನೀಡಲಾಗಿದೆ.

ಶ್ರೀಹರಿ ಬಾಬು ಬಿ.ಎಲ್. ಅವರನ್ನು ವೈಟ್‌ಫೀಲ್ಡ್ ಡಿಸಿಪಿಯಾಗಿ, ಗೀತಾ ಎಂ.ಎಸ್. ಅವರನ್ನು ಪೂರ್ವ ಬೆಂಗಳೂರು ಡಿಸಿಪಿಯಾಗಿ ಹಾಗೂ ಅಮತೆ ವಿಕ್ರಮ್ ಅವರನ್ನು ಉತ್ತರ ಬೆಂಗಳೂರು ಡಿಸಿಪಿಯಾಗಿ ನೇಮಿಸಲಾಗಿದೆ.

Author

ANU News

Follow Me
Other Articles
Previous

‘Once a captain, forever our Thala’: Suresh Raina welcomes Dhoni as CSK mentor

Next

Karnataka transfers 32 IPS officers; six commissioners appointed for Bengaluru

Recent Posts

  • Karnataka transfers 32 IPS officers; six commissioners appointed for Bengaluru
  • ಕರ್ನಾಟಕದಲ್ಲಿ 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರಿಗೆ ಆರು ಹೊಸ ಪೊಲೀಸ್ ಆಯುಕ್ತರು
  • ‘Once a captain, forever our Thala’: Suresh Raina welcomes Dhoni as CSK mentor
  • ‘ಅವರೊಂದಿಗಿನ ಬಾಂಧವ್ಯ ಕ್ರಿಕೆಟ್‌ಗಿಂತ ಮಿಗಿಲಾದುದು’; ಧೋನಿಗೆ ರೈನಾ ಭಾವನಾತ್ಮಕ ಗೌರವ
  • ‘ಋತು ತಾರೆ’ ಯೋಜನೆ: ನಟಿ ರಮ್ಯಾ ಅವರಿಂದ ಮುಖ್ಯಮಂತ್ರಿ ಭೇಟಿ
Copyright 2026 — ANU News. All rights reserved. Blogsy WordPress Theme