Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

HPV ಲಸಿಕೆ: ಭಾರತದಲ್ಲಿ 80 ಲಕ್ಷಕ್ಕೂ ಹೆಚ್ಚು ಡೋಸ್ ವಿತರಣೆ; ಕರ್ನಾಟಕದಲ್ಲಿ 85%

By ANU News
September 12, 2026 1 Min Read
0

ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ರಾಷ್ಟ್ರೀಯ ಎಚ್‌ಪಿವಿ (HPV) ಲಸಿಕಾ ಅಭಿಯಾನ ಮಹತ್ವದ ಹಂತ ತಲುಪಿದೆ. ಫೆಬ್ರವರಿಯಲ್ಲಿ ಅಭಿಯಾನ ಆರಂಭವಾದ ಬಳಿಕ ದೇಶಾದ್ಯಂತ 80 ಲಕ್ಷಕ್ಕೂ ಹೆಚ್ಚು ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಕರ್ನಾಟಕದಲ್ಲಿ ಶೇ.85ಕ್ಕೂ ಅಧಿಕ ವ್ಯಾಪ್ತಿ ಸಾಧಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಈ ಅಭಿಯಾನದಡಿ ಪೋಷಕರ ಒಪ್ಪಿಗೆಯೊಂದಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 14 ವರ್ಷ ವಯಸ್ಸಿನ ಬಾಲಕಿಯರಿಗೆ ಉಚಿತ ಹಾಗೂ ಸ್ವಯಂಪ್ರೇರಿತವಾಗಿ ಏಕ-ಡೋಸ್ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ.

ಭಾರತದ ರಿಜಿಸ್ಟ್ರಾರ್ ಜನರಲ್ ಅಂದಾಜಿನಂತೆ, ಪ್ರತಿ ವರ್ಷ ಸುಮಾರು 1.2 ಕೋಟಿ 14 ವರ್ಷದ ಬಾಲಕಿಯರು ಈ ಅಭಿಯಾನದ ವ್ಯಾಪ್ತಿಗೆ ಬರುತ್ತಾರೆ.

ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಿಜೋರಾಂ ಶೇ.100ರಷ್ಟು ವ್ಯಾಪ್ತಿ ಸಾಧಿಸಿವೆ. ಬಿಹಾರ, ಆಂಧ್ರಪ್ರದೇಶ ಹಾಗೂ ಅಸ್ಸಾಂ ಶೇ.90ಕ್ಕೂ ಅಧಿಕ ಸಾಧನೆ ಮಾಡಿವೆ. ಕರ್ನಾಟಕ ಶೇ.85ಕ್ಕೂ ಅಧಿಕ ವ್ಯಾಪ್ತಿ ತಲುಪಿದ್ದರೆ, ಛತ್ತೀಸ್‌ಗಢ, ಸಿಕ್ಕಿಂ, ಕೇರಳ, ತೆಲಂಗಾಣ ಮತ್ತು ಒಡಿಶಾ ಶೇ.60ಕ್ಕೂ ಅಧಿಕ ಸಾಧಿಸಿವೆ.

ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ 22 ಲಕ್ಷಕ್ಕೂ ಅಧಿಕ ಹದಿಹರೆಯದ ಬಾಲಕಿಯರಿಗೆ ಲಸಿಕೆ ನೀಡಲಾಗಿದ್ದು, ಅತಿ ಹೆಚ್ಚಿನ ಲಸಿಕಾಕರಣ ದಾಖಲಾಗಿದೆ.

ಸಮುದಾಯದ ಸಹಭಾಗಿತ್ವ ಹಾಗೂ ಜಿಲ್ಲಾ ಮಟ್ಟದ ಆರೋಗ್ಯ ತಂಡಗಳ ಬೆಂಬಲದಿಂದ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಗ್ರಾಮೀಣ, ನಗರ ಹಾಗೂ ದೂರದ ಪ್ರದೇಶಗಳ ಅರ್ಹ ಬಾಲಕಿಯರನ್ನೂ ತಲುಪುವ ಪ್ರಯತ್ನ ನಡೆದಿದೆ.

ಎಚ್‌ಪಿವಿ ಲಸಿಕೆ ಕುರಿತು ಇರುವ ಆತಂಕ ಹಾಗೂ ತಪ್ಪು ಮಾಹಿತಿಯನ್ನು ನಿವಾರಿಸಲು ಪೋಷಕರು, ಶಿಕ್ಷಕರು, ಆರೋಗ್ಯ ಸಿಬ್ಬಂದಿ, ಆಶಾ ಮತ್ತು ಎಎನ್‌ಎಂ ಕಾರ್ಯಕರ್ತೆಯರನ್ನು ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗಿದೆ.

ಲಸಿಕಾ ವ್ಯಾಪ್ತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು, ಲಸಿಕೆ ಪಡೆಯದ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಕಾರ್ಯಕ್ರಮದ ಯೋಜನೆ ಸುಧಾರಿಸಲು ಸರ್ಕಾರ ‘ಯು-ವಿನ್‌ (U-WIN)’ ಡಿಜಿಟಲ್ ವೇದಿಕೆ ಬಳಸುತ್ತಿದೆ.

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಲಸಿಕಾ ಅಧಿವೇಶನಗಳನ್ನು ನಡೆಸಲಾಗುತ್ತಿದೆ. ಅಪರೂಪದ ಪ್ರತಿಕೂಲ ಘಟನೆಗಳನ್ನು (AEFI) ಗುರುತಿಸಿ ನಿರ್ವಹಿಸಲು ಕೇಂದ್ರಗಳನ್ನು 24×7 ಆರೋಗ್ಯ ಸೌಲಭ್ಯಗಳೊಂದಿಗೆ ಸಂಪರ್ಕಿಸಲಾಗಿದೆ.

ಅಭಿಯಾನ ಅಂತಿಮ ಹಂತಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಉಳಿದಿರುವ ಎಲ್ಲ ಅರ್ಹ ಫಲಾನುಭವಿಗಳನ್ನು ತಲುಪುವುದು ಹಾಗೂ ಯಾವುದೇ ಅರ್ಹ ಬಾಲಕಿ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ

Author

ANU News

Follow Me
Other Articles
Previous

India administers over 80 lakh HPV vaccine doses under national campaign

Next

‘Legal adoption, safe childhood’: Delhi workshop raises alarm over illegal adoption

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ED ದಾಳಿ ಖಂಡಿಸಿ ಬಿಜೆಪಿ ವಿರುದ್ಧ ಕೆಪಿಸಿಸಿ ಪ್ರಚಾರ ಸಮಿತಿ ಪ್ರತಿಭಟನೆ
    • Bengaluru sewage management: Ramalinga Reddy orders joint inspections, faster STP upgrades
    • ವ್ಯಾಪಾರ ಅಡೆತಡೆ ಕಡಿತ, ನವೋದ್ಯಮ ವಿಸ್ತರಣೆಗೆ ‘ಬ್ರಿಕ್ಸ್’ ಕ್ರಿಯಾ ಯೋಜನೆ ಅಗತ್ಯ: ಪ್ರಧಾನಿ ಮೋದಿ
    • ಜಲಮೂಲಗಳಿಗೆ ಕೊಳಚೆ ನೀರು ಸೇರುವುದಕ್ಕೆ ಕಡಿವಾಣ, STPಗಳ ಸಾಮರ್ಥ್ಯವರ್ಧನೆಗೆ ತ್ವರಿತ ಕ್ರಮ: ರಾಮಲಿಂಗಾ ರೆಡ್ಡಿ
    • Tunnel road won’t solve Bengaluru’s problems, says BJP MLC C.T. Ravi
    Copyright 2026 — ANU News. All rights reserved. Blogsy WordPress Theme