Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ವಲಸೆ, ಗುರುತು ಮತ್ತು ಮನೆಯ ಹುಡುಕಾಟದ ಕಥೆ ‘ಪ್ಯಾರಿಸ್ ಪ್ಯಾರಿಸ್’!

By ANU News
November 28, 2026 1 Min Read
Comments Off on ವಲಸೆ, ಗುರುತು ಮತ್ತು ಮನೆಯ ಹುಡುಕಾಟದ ಕಥೆ ‘ಪ್ಯಾರಿಸ್ ಪ್ಯಾರಿಸ್’!

ಪಣಜಿ: ವಲಸೆ, ಗುರುತು ಮತ್ತು ಮನೆಯೆಂಬ ಭಾವನೆಯನ್ನು ವಿಭಿನ್ನ ಆಯಾಮಗಳಲ್ಲಿ ಅನ್ವೇಷಿಸುವ ಬೆಲ್ಜಿಯಂನ ಚಲನಚಿತ್ರ ನಿರ್ಮಾಪಕಿ ಇಸಾಬೆಲ್ಲೆ ಟೊಲೆನೆರೆ ಅವರ ‘ಪ್ಯಾರಿಸ್ ಪ್ಯಾರಿಸ್’ ಚಿತ್ರವು 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಅಂತರರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಂಡಿದೆ.

ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೊಲೆನೆರೆ, ಪ್ಯಾರಿಸ್‌ನಲ್ಲಿ ಒಂದೇ ಅಪಾರ್ಟ್‌ಮೆಂಟ್ ಹಂಚಿಕೊಂಡು ವಾಸಿಸುವ ವಿಭಿನ್ನ ಹಿನ್ನೆಲೆಯ ಮೂವರು ಪುರುಷರ ಬದುಕಿನ ಸುತ್ತ ಚಿತ್ರ ಸಾಗುತ್ತದೆ. ಸ್ಥಳಾಂತರ, ಹೊಸ ನೆಲದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ಹಾಗೂ ತಮ್ಮ ಹಿಂದಿನ ಬದುಕು ಮತ್ತು ಭವಿಷ್ಯದ ಕುರಿತ ಅವರ ಚರ್ಚೆಗಳನ್ನು ಚಿತ್ರ ಒಳಗೊಂಡಿದೆ ಎಂದು ತಿಳಿಸಿದರು.

ತಮ್ಮ ಸಾಕ್ಷ್ಯಚಿತ್ರ ನಿರ್ಮಾಣದ ಹಿನ್ನೆಲೆ ಚಿತ್ರದ ಪಾತ್ರಗಳ ಆಯ್ಕೆಗೆ ಪ್ರೇರಣೆಯಾಗಿದೆ. ಪಾತ್ರಧಾರಿಗಳ ವೈಯಕ್ತಿಕ ಅನುಭವ ಮತ್ತು ಅವರೊಂದಿಗಿನ ಸಂಪರ್ಕವನ್ನು ಆಧರಿಸಿ ಆಯ್ಕೆ ಮಾಡಲಾಗಿದೆ. ವಲಸೆ ಮತ್ತು ಸೇರುವಿಕೆಯ ಹುಡುಕಾಟವನ್ನು ಚಿತ್ರಿಸುವುದಕ್ಕೆ ತಮ್ಮ ವಲಸೆ ಅಜ್ಜಿಯರ ಬದುಕು ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಅವರು, IFFI ವೇದಿಕೆಯಲ್ಲಿ ಚಿತ್ರ ಪ್ರದರ್ಶಿಸಲು ಅವಕಾಶ ದೊರೆತಿರುವುದು ಗೌರವದ ಸಂಗತಿ ಎಂದರು. ಚಿತ್ರದ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಳಿಕ ನಡೆದ ಸಂವಾದವೂ ಆಸಕ್ತಿದಾಯಕವಾಗಿತ್ತು ಎಂದು ತಿಳಿಸಿದರು.

ಬಜೆಟ್ ಮಿತಿಗಳು ಮತ್ತು ಚಿತ್ರೀಕರಣಕ್ಕೆ ಸೂಕ್ತ ಸ್ಥಳಗಳ ಹುಡುಕಾಟ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದ್ದರೂ, ಚಿತ್ರದ ಸಾರ್ವತ್ರಿಕ ವಿಷಯಗಳು ವಿವಿಧ ದೇಶ ಮತ್ತು ಸಂಸ್ಕೃತಿಗಳ ಪ್ರೇಕ್ಷಕರನ್ನು ತಲುಪಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Author

ANU News

Follow Me
Other Articles
Previous

IFFI Film ‘Paro’ Highlights Plight of Women Trafficked as Brides

Next

Naidu Backs 50pc Increase in Lok Sabha Seats, Says South’s Share Will Remain at 23.76pc

Recent Posts

  • Naidu Backs 50pc Increase in Lok Sabha Seats, Says South’s Share Will Remain at 23.76pc
  • ವಲಸೆ, ಗುರುತು ಮತ್ತು ಮನೆಯ ಹುಡುಕಾಟದ ಕಥೆ ‘ಪ್ಯಾರಿಸ್ ಪ್ಯಾರಿಸ್’!
  • IFFI Film ‘Paro’ Highlights Plight of Women Trafficked as Brides
  • IFFI: ವಧು ಗುಲಾಮಗಿರಿಯ ಕರಾಳ ಮುಖ ಅನಾವರಣಗೊಳಿಸಿದ ‘ಪಾರೋ’ ಚಿತ್ರ!
  • JD(S) Backs Women’s Reservation, Delimitation Bills, Says Kumaraswamy
Copyright 2026 — ANU News. All rights reserved. Blogsy WordPress Theme