Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಚೀನಾವನ್ನು ಮಣಿಸಿ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ವನಿತೆಯರು

By ANU News
November 29, 2026 1 Min Read
Comments Off on ಚೀನಾವನ್ನು ಮಣಿಸಿ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ವನಿತೆಯರು

ಭೋಪಾಲ್: ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2026ರ ಫೈನಲ್‌ನಲ್ಲಿ ಚೀನಾವನ್ನು 3-1 ಗೋಲುಗಳಿಂದ ಸೋಲಿಸಿದ ಭಾರತ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಮೊದಲಾರ್ಧದ 25ನೇ ನಿಮಿಷದಲ್ಲಿ ಯುಜುನ್ ಚೆನ್ ಗೋಲು ಬಾರಿಸಿ ಚೀನಾಗೆ ಮುನ್ನಡೆ ನೀಡಿದರು. ಆದರೆ ದ್ವಿತೀಯಾರ್ಧದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಭಾರತ ಪರ 38ನೇ ನಿಮಿಷದಲ್ಲಿ ದೀಪಿಕಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. 42ನೇ ನಿಮಿಷದಲ್ಲಿ ಇಶಿಕಾ ಫೀಲ್ಡ್ ಗೋಲು ದಾಖಲಿಸಿದರು. 43ನೇ ನಿಮಿಷದಲ್ಲಿ ದೀಪಿಕಾ ಮತ್ತೊಂದು ಗೋಲು ಬಾರಿಸಿ ಭಾರತದ ಗೆಲುವು ಖಚಿತಪಡಿಸಿದರು.

ಟೂರ್ನಿಯಲ್ಲಿ 10 ಗೋಲು ಗಳಿಸಿದ ದೀಪಿಕಾ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನವೆಂಬರ್ 19ರಿಂದ 28ರವರೆಗೆ ನಡೆದ ಟೂರ್ನಿಯಲ್ಲಿ ಭಾರತ ಅಜೇಯವಾಗಿ ಉಳಿಯಿತು. ಮುಖ್ಯಮಂತ್ರಿ ಮೋಹನ್ ಯಾದವ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Author

ANU News

Follow Me
Other Articles
Previous

13 Killed as SUV Carrying Devotees to Rajrappa Temple Crashes in Jharkhand

Next

India Beat China 3-1 to Clinch Fourth Women’s Asian Champions Trophy Title

Recent Posts

  • Mangaluru MP Brijesh Chouta Seeks Fast-Track Clearances for Devadari Mine to Revive KIOCL
  • ಕೆಐಒಸಿಎಲ್ ಪುನಶ್ಚೇತನಕ್ಕೆ ದೇವದಾರಿ ಗಣಿ ಅನುಮತಿ ತ್ವರಿತಗೊಳಿಸಿ: ಸಂಸದ ಚೌಟ ಆಗ್ರಹ!
  • India Beat China 3-1 to Clinch Fourth Women’s Asian Champions Trophy Title
  • ಚೀನಾವನ್ನು ಮಣಿಸಿ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ವನಿತೆಯರು
  • 13 Killed as SUV Carrying Devotees to Rajrappa Temple Crashes in Jharkhand
Copyright 2026 — ANU News. All rights reserved. Blogsy WordPress Theme