Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಒಂದು ವರ್ಷದೊಳಗೆ 10.71 ಲಕ್ಷ ದರಖಾಸ್ತು ಪೋಡಿ ಪ್ರಕರಣ ಇತ್ಯರ್ಥಕ್ಕೆ ಸರ್ಕಾರದ ಕ್ರಮ

By ANU News
November 22, 2026 1 Min Read
Comments Off on ಒಂದು ವರ್ಷದೊಳಗೆ 10.71 ಲಕ್ಷ ದರಖಾಸ್ತು ಪೋಡಿ ಪ್ರಕರಣ ಇತ್ಯರ್ಥಕ್ಕೆ ಸರ್ಕಾರದ ಕ್ರಮ

ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ 10.71 ಲಕ್ಷ ದರಖಾಸ್ತು ಪೋಡಿ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಡಿಡಿಎಲ್‌ಆರ್‌ಗಳು, ಉಪವಿಭಾಗಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಲ್ಲೂಕಿನಲ್ಲಿ ಪ್ರತಿದಿನ ಕನಿಷ್ಠ 15 ದರಖಾಸ್ತು ಪೋಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, 15 ಹೊಸ ಪಹಣಿಗಳನ್ನು ಸೃಜಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದರು.

ಭೂಮಾಪನಕ್ಕಾಗಿ ಖರೀದಿಸಿರುವ ರೋವರ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಭೂದಾಖಲೆಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ರೈತರು ಭೂದಾಖಲೆಗಳಿಗಾಗಿ ಕಂದಾಯ ಕಚೇರಿಗಳಿಗೆ ಪದೇಪದೆ ಅಲೆಯುವ ಪರಿಸ್ಥಿತಿ ಇರಬಾರದು. ಬಾಕಿ ಪ್ರಕರಣಗಳನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಿ, ರೈತರಿಗೆ ಸಕಾಲದಲ್ಲಿ ಸೇವೆ ಒದಗಿಸುವುದು ಅಧಿಕಾರಿಗಳ ಆದ್ಯತೆಯಾಗಬೇಕು ಎಂದು ಸೂಚಿಸಿರುವುದಾಗಿ ಹೇಳಿದರು.

Author

ANU News

Follow Me
Other Articles
Previous

ಜೀವ ಬೆದರಿಕೆಗಳ ನಡುವೆ ಬದುಕುತ್ತಿದ್ದೇನೆ: ಸಲ್ಮಾನ್ ಖಾನ್

Next

Karnataka Aims to Clear 10.71 Lakh Land Subdivision Cases in a Year

Recent Posts

  • Karnataka Sets Time Limits for Revenue Court Cases; 90 Days for Tahsildar Courts
  • ಪ್ರಕರಣ ಇತ್ಯರ್ಥಕ್ಕೆ ಕಾಲಮಿತಿ: ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 90 ದಿನ, ಎಸಿ ಕೋರ್ಟಲ್ಲಿ 6 ತಿಂಗಳಲ್ಲಿ ಇತ್ಯರ್ಥ ಕಡ್ಡಾಯ
  • Karnataka Aims to Clear 10.71 Lakh Land Subdivision Cases in a Year
  • ಒಂದು ವರ್ಷದೊಳಗೆ 10.71 ಲಕ್ಷ ದರಖಾಸ್ತು ಪೋಡಿ ಪ್ರಕರಣ ಇತ್ಯರ್ಥಕ್ಕೆ ಸರ್ಕಾರದ ಕ್ರಮ
  • ಜೀವ ಬೆದರಿಕೆಗಳ ನಡುವೆ ಬದುಕುತ್ತಿದ್ದೇನೆ: ಸಲ್ಮಾನ್ ಖಾನ್
Copyright 2026 — ANU News. All rights reserved. Blogsy WordPress Theme