Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
Others

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ; ಅಗತ್ಯ ಮಾಹಿತಿ ಇಲ್ಲಿದೆ

By Anu News
June 8, 2026 2 Min Read
0

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪೊಲೀಸ್ ಇಲಾಖೆಯಿಂದ ಭರ್ಜರಿ ಅವಕಾಶ ದೊರೆತಿದೆ. ರಾಜ್ಯದ ವಿವಿಧ ಜಿಲ್ಲಾ, ನಗರ ಹಾಗೂ ವಿಶೇಷ ಘಟಕಗಳಲ್ಲಿ ಖಾಲಿ ಇರುವ 3,395 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಜೂನ್ 8, 2026ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 3, 2026 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಶುಲ್ಕ ಪಾವತಿಗೆ ಜುಲೈ 4ರವರೆಗೆ ಅವಕಾಶ ನೀಡಲಾಗಿದೆ.

  • ಪುರುಷ ಅಭ್ಯರ್ಥಿಗಳಿಗೆ – 2,266 ಹುದ್ದೆಗಳು
  • ಮಹಿಳಾ ಅಭ್ಯರ್ಥಿಗಳಿಗೆ – 755 ಹುದ್ದೆಗಳು
  • ಸೇವಾನಿರತ ಪುರುಷ ಅಭ್ಯರ್ಥಿಗಳಿಗೆ – 257 ಹುದ್ದೆಗಳು
  • ಸೇವಾನಿರತ ಮಹಿಳಾ ಅಭ್ಯರ್ಥಿಗಳಿಗೆ – 82 ಹುದ್ದೆಗಳು
  • ತೃತೀಯ ಲಿಂಗಿ ಅಭ್ಯರ್ಥಿಗಳಿಗೆ – 35 ಹುದ್ದೆಗಳು.

ವಿದ್ಯಾರ್ಹತೆ: ಅಭ್ಯರ್ಥಿಗಳು ಪಿಯುಸಿ ಅಥವಾ ಸಿಬಿಎಸ್‌ಇ, ಐಎಸ್‌ಸಿ, ಎನ್‌ಐಒಎಸ್ ಹಾಗೂ ಮೂರು ವರ್ಷದ ಡಿಪ್ಲೊಮಾ ಸೇರಿದಂತೆ ಸರ್ಕಾರ ಮಾನ್ಯತೆ ನೀಡಿರುವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ: ಸಾಮಾನ್ಯ ವರ್ಗ: 33 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ: 35 ವರ್ಷ, ಬುಡಕಟ್ಟು ಅಭ್ಯರ್ಥಿಗಳು: 38 ವರ್ಷ. ಸರ್ಕಾರವು ಈ ನೇಮಕಾತಿಗೆ ವಿಶೇಷವಾಗಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಿದೆ.

ಲಿಖಿತ ಪರೀಕ್ಷೆ: ದಿನಾಂಕ: ಆಗಸ್ಟ್ 2, 2026, ಸಮಯ: ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00. ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಭಾರತೀಯ ಸಂವಿಧಾನ, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಇತಿಹಾಸ, ಭೂಗೋಳ, ಅರ್ಥಶಾಸ್ತ್ರ ಸಂಸ್ಕೃತಿ ಮತ್ತು ಸಾಹಿತ್ಯ ವಿಷಯಗಳಿಂದ ಪ್ರಶ್ನೆಗಳು ಕೇಳಲಾಗುತ್ತವೆ. ಒಟ್ಟು ಪ್ರಶ್ನೆಗಳು: 100, ಅಂಕಗಳು: 100, ಅವಧಿ: 90 ನಿಮಿಷ, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ನೆಗೆಟಿವ್ ಮಾರ್ಕಿಂಗ್,

ದೇಹದಾರ್ಢ್ಯ ಮತ್ತು ಸಹನಶಕ್ತಿ ಪರೀಕ್ಷೆ: ಪುರುಷ ಅಭ್ಯರ್ಥಿಗಳು ಕನಿಷ್ಠ ಎತ್ತರ: 168 ಸೆಂ.ಮೀ. 1600 ಮೀಟರ್ ಓಟ: 6 ನಿಮಿಷ 30 ಸೆಕೆಂಡ್ ಒಳಗೆ ಎತ್ತರ ಜಿಗಿತ: 1.20 ಮೀಟರ್ ಉದ್ದ ಜಿಗಿತ: 3.80 ಮೀಟರ್,

ಮಹಿಳಾ ಅಭ್ಯರ್ಥಿಗಳು: ಕನಿಷ್ಠ ಎತ್ತರ: 157 ಸೆಂ.ಮೀ., ಎತ್ತರ ಜಿಗಿತ: 0.90 ಮೀಟರ್, ಉದ್ದ ಜಿಗಿತ: 2.50 ಮೀಟರ್.

ಪರೀಕ್ಷಾ ಶುಲ್ಕ: ಸಾಮಾನ್ಯ ವರ್ಗ: ₹750, ಮಹಿಳೆಯರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ವಿಶೇಷ ವರ್ಗದ ಅಭ್ಯರ್ಥಿಗಳು: ₹500.

ವೇತನ ಮತ್ತು ಸೌಲಭ್ಯಗಳು: ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಖಾಯಂ ನೇಮಕಾತಿ ಮಾಡಲಾಗುತ್ತದೆ. ವೇತನ ಶ್ರೇಣಿ: ₹37,500 ರಿಂದ ₹76,100. ಇದರ ಜೊತೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಸೌಲಭ್ಯವೂ ಲಭ್ಯವಿರುತ್ತದೆ.

ಅಗತ್ಯ ದಾಖಲೆಗಳು: 

ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರ, ಸಹಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಬ್ಯಾಂಕ್ ಪಾಸ್‌ಬುಕ್, ಜಾತಿ ಪ್ರಮಾಣಪತ್ರ, ಸೇವಾ ಗುರುತಿನ ಚೀಟಿ, ನಿವೃತ್ತ ಸೈನಿಕರ ಪಿಂಚಣಿ ದಾಖಲೆ (ಅನ್ವಯಿಸಿದಲ್ಲಿ) ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಅರ್ಜಿ ಸಲ್ಲಿಕೆ: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 8ರಿಂದ ಆರಂಭವಾಗಲಿದ್ದು, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)

Author

Anu News

Follow Me
Other Articles
Previous

ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷದ ಆಸ್ತಿ ಎಂದ ರಣದೀಪ್ ಸಿಂಗ್ ಸುರ್ಜೆವಾಲ

Next

ಐಎಎಸ್–ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ಮುನೀಶ್ ಮೌದ್ಗಿಲ್‌

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Karnataka cabinet expansion likely this week; Congress high command calls state leaders to Delhi
    • ‘ಕೈ’ ಪಾಳಯದಲ್ಲಿ ಕ್ಷಿಪ್ರ ವಿದ್ಯಮಾನ; ‘ಹೈ’ ಒಪ್ಪಿದರೆ ಬುಧವಾರವೇ ಸಂಪುಟ ವಿಸ್ತರಣೆ ಸಾಧ್ಯತೆ
    • ಬರ ನಿರ್ವಹಣೆಗೆ ವಿಶೇಷ ಕ್ರಮ, ಕುಡಿಯುವ ನೀರು, ಇ-ಖಾತೆ, ಭೂ ಬ್ಯಾಂಕ್‌ಗೆ ಒತ್ತು; : ಡಿ.ಕೆ. ಶಿವಕುಮಾರ್
    • D.K. Shivakumar outlines drought, recruitment and governance roadmap after regional review
    • Pradhan’s resignation not enough, struggle must continue until Modi leaves office: Siddaramaiah
    Copyright 2026 — ANU News. All rights reserved. Blogsy WordPress Theme