ಎಸ್ಎಸ್ಎಲ್ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ: ಮಾರ್ಚ್ 22ರಿಂದ ಪರೀಕ್ಷೆ ಆರಂಭ
ಬೆಂಗಳೂರು: 2026-27ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ ಪ್ರಕಟಿಸಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಮಾರ್ಚ್ 22ರಿಂದ ಪರೀಕ್ಷೆಗಳು ಆರಂಭವಾಗಿ ಏಪ್ರಿಲ್ 5ರಂದು ಮುಕ್ತಾಯಗೊಳ್ಳಲಿವೆ.
ಇತ್ತೀಚೆಗೆ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಂಡಳಿ ಅವಕಾಶ ನೀಡಿತ್ತು. ಇದೀಗ ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಪರೀಕ್ಷೆಗಳ ದಿನಾಂಕ ವಿವರ
- ಮಾರ್ಚ್ 22: ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳು.
- ಮಾರ್ಚ್ 23 ಮತ್ತು 24: ಪರೀಕ್ಷೆ ಇರುವುದಿಲ್ಲ.
- ಮಾರ್ಚ್ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ.
- ಮಾರ್ಚ್ 27: ದ್ವಿತೀಯ ಭಾಷೆ – ಇಂಗ್ಲಿಷ್ ಮತ್ತು ಕನ್ನಡ.
- ಮಾರ್ಚ್ 30: ಗಣಿತ, ಸಮಾಜಶಾಸ್ತ್ರ.
- ಏಪ್ರಿಲ್ 2: ತೃತೀಯ ಭಾಷೆ.
- ಏಪ್ರಿಲ್ 3: ಅರ್ಥಶಾಸ್ತ್ರ ಮತ್ತು ಜೆಟಿಎಸ್ ವಿಷಯಗಳು.
- ಏಪ್ರಿಲ್ 5: ಸಮಾಜ ವಿಜ್ಞಾನ.